AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಮ್ಮು ಮತ್ತು ಕಾಶ್ಮೀರದ ಕ್ಷೇತ್ರ ಪುನರ್‌ವಿಂಗಡಣೆ ಅಂತಿಮ: ಕ್ಷೇತ್ರಗಳ ಬದಲಾವಣೆ ಹೇಗೆ ಆಗಿದೆ? ವಿವರ ಇಲ್ಲಿದೆ ನೋಡಿ

ಆಯೋಗವು ಕಾಶ್ಮೀರಿ ವಲಸಿಗರು ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಿಂದ ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ವಿಧಾನಸಭೆಯಲ್ಲಿ ಹೆಚ್ಚುವರಿ ಸ್ಥಾನಗಳನ್ನು ಶಿಫಾರಸು ಮಾಡಿದೆ.

ಜಮ್ಮು ಮತ್ತು ಕಾಶ್ಮೀರದ ಕ್ಷೇತ್ರ ಪುನರ್‌ವಿಂಗಡಣೆ ಅಂತಿಮ: ಕ್ಷೇತ್ರಗಳ ಬದಲಾವಣೆ ಹೇಗೆ ಆಗಿದೆ? ವಿವರ ಇಲ್ಲಿದೆ ನೋಡಿ
ಜಮ್ಮು ಮತ್ತು ಕಾಶ್ಮೀರದ ಕ್ಷೇತ್ರ ಪುನರ್‌ವಿಂಗಡಣೆ ಆಯೋಗ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:May 05, 2022 | 7:45 PM

ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕ್ಷೇತ್ರ ಪುನರ್‌ವಿಂಗಡಣೆ ಆಯೋಗವು (Delimitation commission) ಗುರುವಾರ ತನ್ನ ಬಹು ನಿರೀಕ್ಷಿತ ಅಂತಿಮ  ಆದೇಶಕ್ಕೆ ಸಹಿ ಹಾಕಿದೆ. ಜಮ್ಮುವಿಗೆ 43 ವಿಧಾನಸಭಾ ಕ್ಷೇತ್ರಗಳನ್ನು ನೀಡಲಾಗಿದ್ದು, ಕಾಶ್ಮೀರಕ್ಕೆ 47 ಕ್ಷೇತ್ರಗಳನ್ನು ಶಿಫಾರಸು ಮಾಡಲಾಗಿದೆ. ಇದರಲ್ಲಿ ಎಲ್ಲಾ ಐದು ಸಂಸದೀಯ ಕ್ಷೇತ್ರಗಳು ಮೊದಲ ಬಾರಿಗೆ ಸಮಾನ ಸಂಖ್ಯೆಯ ವಿಧಾನಸಭಾ ಕ್ಷೇತ್ರಗಳನ್ನು (ACs) ಹೊಂದಿರುತ್ತವೆ. ಅಲ್ಲದೆ, ಒಂಬತ್ತು ಸ್ಥಾನಗಳನ್ನು ಪರಿಶಿಷ್ಟ ಪಂಗಡಗಳಿಗೆ (ST) ಮೀಸಲಿಡಲಾಗುವುದು. ಅಂತಿಮ ಕ್ಷೇತ್ರ ಪುನರ್‌ವಿಂಗಡಣೆ ಆದೇಶದ ಪ್ರಕಾರ, 90 ವಿಧಾನಸಭಾ ಕ್ಷೇತ್ರಗಳ ಪೈಕಿ 43 ಜಮ್ಮು ಪ್ರದೇಶದ ಭಾಗವಾಗಿ ಮತ್ತು 47 ಕಾಶ್ಮೀರ ಪ್ರದೇಶಕ್ಕೆ ಸೇರುತ್ತವೆ. ಕ್ಷೇತ್ರ ಪುನರ್‌ವಿಂಗಡಣೆಗಾಗಿ ಜಮ್ಮು ಮತ್ತು ಕಾಶ್ಮೀರವನ್ನು ಒಂದೇ ಘಟಕವಾಗಿ ಪರಿಗಣಿಸಲಾಗುವುದು. ಎಸ್ಟಿಗಳಿಗೆ ಮೀಸಲಾದ ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಆರು ಜಮ್ಮು ಪ್ರದೇಶದಲ್ಲಿ ಮತ್ತು ಮೂರು ಕಣಿವೆ ಪ್ರದೇಶದಲ್ಲಿದೆ. ಪಟ್ವಾರ್ ಸರ್ಕಲ್ ಅತ್ಯಂತ ಕೆಳಮಟ್ಟದ ಆಡಳಿತ ಘಟಕವಾಗಿದ್ದು, ಅದನ್ನು ವಿಭಜಿಸಿಲ್ಲ. ಎಲ್ಲಾ ವಿಧಾನಸಭಾ ಕ್ಷೇತ್ರಗಳು ಸಂಬಂಧಪಟ್ಟ ಜಿಲ್ಲೆಯ ಗಡಿಯೊಳಗೆ ಉಳಿಯುತ್ತವೆ.

ಆಯೋಗವು ಕಾಶ್ಮೀರಿ ವಲಸಿಗರು ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಿಂದ ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ವಿಧಾನಸಭೆಯಲ್ಲಿ ಹೆಚ್ಚುವರಿ ಸ್ಥಾನಗಳನ್ನು ಶಿಫಾರಸು ಮಾಡಿದೆ. ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವು 2018 ರಿಂದ ಚುನಾಯಿತ ಸರ್ಕಾರವನ್ನು ಹೊಂದಿಲ್ಲ.  ಡಿಲಿಮಿಟೇಶನ್ ಆಯೋಗದ ಸದಸ್ಯರೂ ಆಗಿರುವ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಸುಶೀಲ್ ಚಂದ್ರ ಅವರು ಮೇ 6 ರೊಳಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಸ್ಥಾನಗಳ ರೂಪುರೇಷೆ ಪ್ರಕ್ರಿಯೆ ನಡೆಯಲಿದೆ ಎಂದು ಇತ್ತೀಚೆಗೆ ನ್ಯೂಸ್ 18 ಗೆ ತಿಳಿಸಿದ್ದರು.

“ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಮಾರ್ಚ್ 2020 ರಿಂದ ನಡೆಯುತ್ತಿದೆ”. “ಇದು ಎರಡು ವರ್ಷಗಳಿಂದ ನಡೆಯುತ್ತಿದೆ. ಆಯೋಗದ ಅಧಿಕಾರಾವಧಿಯು ಮೇ 6 ರವರೆಗೆ ಇರುತ್ತದೆ. ಮೇ 6, 2022 ರ ಹೊತ್ತಿಗೆ ಖಂಡಿತವಾಗಿ ಜಮ್ಮು ಮತ್ತು ಕಾಶ್ಮೀರ ಕ್ಷೇತ್ರ ಪುನರ್ ವಿಂಗಡಣೆ ಕುರಿತು ವರದಿ ಸಲ್ಲಿಸಲಾಗುವುದು ಮತ್ತು ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ ಎಂದು ಅವರು ಹೇಳಿದ್ದರು.

ಇದನ್ನೂ ಓದಿ
Image
ಇನ್ನು ಕೆಲವು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಅಗತ್ಯವಿರುವುದಿಲ್ಲ: ಅಮಿತ್ ಶಾ

ಆಗಸ್ಟ್ 2019 ರಲ್ಲಿ ಸಂವಿಧಾನದ 370 ನೇ ವಿಧಿಯ ಸೆಕ್ಷನ್‌ಗಳನ್ನು ರದ್ದುಗೊಳಿಸುವುದರೊಂದಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿದಾಗಿನಿಂದ ಹೊಸ ನಿಯಮಗಳ ಪ್ರಕಾರ, ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯನ್ನು 107 ರಿಂದ 114 ಕ್ಕೆ ಹೆಚ್ಚಿಸಲಾಗಿದೆ.

ಆದಾಗ್ಯೂ, ಇವುಗಳಲ್ಲಿ 24 ಸ್ಥಾನಗಳು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಇವೆ. ಹಾಗಾಗಿ ಸದ್ಯಕ್ಕೆ 90 ಸ್ಥಾನಗಳಿಗೆ ಮಾತ್ರ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ನಡೆಸಲಾಗುತ್ತಿದೆ.

ಈ ಆಯೋಗವು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ರಂಜನಾ ದೇಸಾಯಿ ಅವರ ನೇತೃತ್ವದಲ್ಲಿದ್ದು ಸಿಇಸಿ ಸುಶೀಲ್ ಚಂದ್ರ ಮತ್ತು ರಾಜ್ಯ ಚುನಾವಣಾ ಆಯುಕ್ತ ಕೆಕೆ ಶರ್ಮಾ ಅವರನ್ನು ಒಳಗೊಂಡಿದೆ. ಆಯೋಗವನ್ನು ಮಾರ್ಚ್ 6, 2020 ರಂದು ಸ್ಥಾಪಿಸಲಾಯಿತು, ಕೇಂದ್ರಾಡಳಿತ ಪ್ರದೇಶದ ಮರುಸಂಘಟನೆಯ ಆರು ತಿಂಗಳ ನಂತರ ಜಮ್ಮು ಮತ್ತು ಕಾಶ್ಮೀರದನ ಸಂಸದೀಯ ಮತ್ತು ಅಸೆಂಬ್ಲಿ ಕ್ಷೇತ್ರಗಳನ್ನು ಮರುಹೊಂದಿಸಲು ಒಂದು ವರ್ಷದ ಅವಧಿ ನೀಡಲಾಗಿತ್ತು.

ಆಯೋಗಕ್ಕೆ 2021 ರಲ್ಲಿ ಒಂದು ವರ್ಷ ಮತ್ತು ಮತ್ತೆ ಎರಡು ತಿಂಗಳ ವಿಸ್ತರಣೆಯನ್ನು ಕೇಂದ್ರವು ಮಾರ್ಚ್ 6, 2022 ರಂದು ನೀಡಿತು.

ವರದಿಯ ಪ್ರಮುಖ ಅಂಶಗಳು:

ಒಂಬತ್ತು ಅಸೆಂಬ್ಲಿ ಕ್ಷೇತ್ರ (AC) ಸ್ಥಾನಗಳನ್ನು ಮೊದಲ ಬಾರಿಗೆ ST ಗಳಿಗೆ ಮೀಸಲಿಡಲಾಗಿದೆ (ಜಮ್ಮುವಿನಲ್ಲಿ ಆರು ಮತ್ತು ಕಾಶ್ಮೀರದಲ್ಲಿ ಮೂರು). 7 ಅಸೆಂಬ್ಲಿ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಿಡಲಾಗಿದೆ. ಕಣಿವೆಯಲ್ಲಿ ಅನಂತನಾಗ್ ಪ್ರದೇಶ ಮತ್ತು ಜಮ್ಮು ಪ್ರದೇಶದ ರಜೌರಿ ಮತ್ತು ಪೂಂಚ್ ಅನ್ನು ಒಟ್ಟುಗೂಡಿಸಿ ಒಂದು ಸಂಸದೀಯ ಕ್ಷೇತ್ರವನ್ನು ಮಾಡಲಾಗಿದೆ ಎಲ್ಲಾ ಐದು ಸಂಸದೀಯ ಕ್ಷೇತ್ರಗಳು ಮೊದಲ ಬಾರಿಗೆ ಸಮಾನ ಸಂಖ್ಯೆಯ ಅಸೆಂಬ್ಲಿ ಕ್ಷೇತ್ರಗಳನ್ನು ಹೊಂದಿವೆ. ಅಂದರೆ ತಲಾ 18 ಸೀಟುಗಳು. 90 ಅಸೆಂಬ್ಲಿ ಕ್ಷೇತ್ರಗಳಲ್ಲಿ 43 ಜಮ್ಮು ಪ್ರದೇಶದ ಭಾಗ ಮತ್ತು 47 ಕಾಶ್ಮೀರ ಪ್ರದೇಶದ ಭಾಗವಾಗಲಿದೆ. ಎಲ್ಲಾ ಅಸೆಂಬ್ಲಿ ಕ್ಷೇತ್ರಗಳನ್ನು ಸಂಬಂಧಪಟ್ಟ ಜಿಲ್ಲೆಯ ಗಡಿಯಲ್ಲಿಯೇ ಇರುತ್ತವೆ. 13 ವಿಧಾನಸಭಾ ಸ್ಥಾನಗಳ ಬದಲಾವಣೆ; 21 ಅಸೆಂಬ್ಲಿ ಕ್ಷೇತ್ರಗಳ ಸಣ್ಣ ಗಡಿ ಬದಲಾವಣೆ ಮಾಡಲಾಗಿದೆ. ಡಿಲಿಮಿಟೇಶನ್ ಸಮಿತಿಯು ಕಾಶ್ಮೀರಿ ವಲಸಿಗ ಸಮುದಾಯದಿಂದ ಕನಿಷ್ಠ 2 ಸದಸ್ಯರನ್ನು (1 ಮಹಿಳೆ ಸೇರಿದಂತೆ) ಜಮ್ಮು ಮತ್ತು ಕಾಶ್ಮೀರ ಅಸೆಂಬ್ಲಿಯಲ್ಲಿ ಪುದುಚೇರಿ ಅಸೆಂಬ್ಲಿಯ ನಾಮನಿರ್ದೇಶಿತ ಸದಸ್ಯರಂತೆ ಅದೇ ಅಧಿಕಾರದೊಂದಿಗೆ ಒದಗಿಸುವಂತೆ ಶಿಫಾರಸು ಮಾಡುತ್ತದೆ. ಇದು ಪಾಕ್ ಆಕ್ರಮಿತ ಜಮ್ಮು ಕಾಶ್ಮೀರದಿಂದ ಸ್ಥಳಾಂತರಗೊಂಡ ವ್ಯಕ್ತಿಗಳ ಪ್ರಾತಿನಿಧ್ಯವನ್ನು ಸಹ ಕೋರಿದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 7:33 pm, Thu, 5 May 22