ಜರ್ಮನಿಯಲ್ಲಿ ಪ್ರಧಾನಿ ಎದುರು ದೇಶಭಕ್ತಿ ಗೀತೆ ಹಾಡಿದ್ದ ಬಾಲಕನ ತಂದೆ ಫುಲ್ ಗರಂ; ಟ್ವೀಟ್ ಡಿಲೀಟ್ ಮಾಡಿದ ಹಾಸ್ಯನಟ ಕುನಾಲ್ ಕಾಮ್ರಾ
ದೇಶದ ಖ್ಯಾತ ಕಾಮಿಡಿಯನ್ ಆಗಿರುವ ಕುನಾಲ್ ಕಾಮ್ರಾ, ಪ್ರಧಾನಿ ನರೇಂದ್ರ ಮೋದಿಯವರ ಎದುರು ಬಾಲಕ ಹಾಡು ಹಾಡಿದ್ದರ ವಿಡಿಯೋ ಇಟ್ಟುಕೊಂಡು ಹಾಸ್ಯ ಮಾಡಿದ್ದರು.
ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಜರ್ಮನಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಅಲ್ಲೊಬ್ಬ ಭಾರತೀಯ ಮೂಲದ ಪುಟ್ಟ ಬಾಲಕ ದೇಶಭಕ್ತಿ ಗೀತೆ ಹಾಡುವ ಮೂಲಕ ಗಮನಸೆಳೆದಿದ್ದ. ಆತನ ವಿಡಿಯೋ ಕೂಡ ಎಲ್ಲೆಡೆ ವೈರಲ್ ಆಗಿತ್ತು. ಹುಡುಗನ ದೇಶಭಕ್ತಿ ಗೀತೆ ಕೇಳಿ ಪ್ರಧಾನಿ ಮೋದಿ ಕೂಡ ತುಂಬ ಸಂತೋಷ ವ್ಯಕ್ತಪಡಿಸಿದ್ದರು. ಆತನನ್ನು ಮುದ್ದಿಸಿದ್ದರು. ಆದರೆ ಈಗ ಬಾಲಕನ ತಂದೆ ಸಿಕ್ಕಾಪಟೆ ಗರಂ ಆಗಿದ್ದಾರೆ. ನನ್ನ ಪುಟ್ಟ ಮಗ ಹಾಡುಹಾಡಿದ್ದಕ್ಕೂ ರಾಜಕೀಯ ಬಣ್ಣ ಬಳಿಯಬೇಡಿ ಎಂದು ಕಿಡಿಕಾರಿದ್ದಾರೆ. ಅಂದಹಾಗೇ, ಅವರು ಹೀಗೆ ಹೇಳಿದ್ದು ಹಾಸ್ಯನಟ ಕುನಾಲ್ ಕಮ್ರಾರಿಗೆ.
ದೇಶದ ಖ್ಯಾತ ಕಾಮಿಡಿಯನ್ ಆಗಿರುವ ಕುನಾಲ್ ಕಾಮ್ರಾ, ಪ್ರಧಾನಿ ನರೇಂದ್ರ ಮೋದಿಯವರ ಎದುರು ಬಾಲಕ ಹಾಡು ಹಾಡಿದ್ದರ ವಿಡಿಯೋ ಇಟ್ಟುಕೊಂಡು ಹಾಸ್ಯ ಮಾಡಿದ್ದರು. ಯಾರೋ ಎಡಿಟ್ ಮಾಡಿ ಟ್ರೋಲ್ ಮಾಡಿದ ವಿಡಿಯೋವನ್ನು ಶೇರ್ ಮಾಡಿಕೊಂಡು, ಯಾರಿದನ್ನು ಮಾಡಿದ್ದು ಎಂದು ಪ್ರಶ್ನಿಸಿ, ದೊಡ್ಡದಾಗಿ ನಗುತ್ತಿರುವ ಇಮೋಜಿ ಹಾಕಿದ್ದರು. ಕುನಾಲ್ ಶೇರ್ ಮಾಡಿದ ವಿಡಿಯೋದಲ್ಲಿ ಹಾಡನ್ನೇ ಬದಲಿಸಲಾಗಿದೆ. ಬಾಲಕ ಹಾಡಿರುವ ಹೇ ಜನ್ಮಭೂಮಿ ಭಾರತ್ ಎಂಬ ಹಾಡಿನ ಬದಲಿಗೆ Mehengayi daayan khaaye jaat hain ಎಂಬ ಹಾಡನ್ನು (2010ರಲ್ಲಿ ಬಿಡುಗಡೆಯಾದ ಪೀಪ್ಲಿ ಲೈವ್ ಸಿನಿಮಾದ ಗೀತೆ) ಹಾಕಲಾಗಿದೆ. ಇದು ಹಣದುಬ್ಬರ ಎಂಬ ವಿಚಾರಕ್ಕೆ ಸಂಬಂಧಪಟ್ಟ ಹಾಡು.
ಆದರೆ ಕುನಾಲ್ ಈ ವಿಡಿಯೋ ಶೇರ್ ಮಾಡಿಕೊಂಡಿದ್ದೇ ತಡ ಬಾಲಕನ ತಂದೆ ಗಣೇಶ್ ಪೋಲ್ ತಿರುಗೇಟು ನೀಡಿದ್ದಾರೆ. ಕುನಾಲ್ರನ್ನು ಕಳಪೆ ಮನಸ್ಥಿತಿಯವರು ಎಂದು ಕರೆದ ಅವರು, ನನ್ನ ಪುತ್ರನಿಗೆ ಇನ್ನೂ 7ವರ್ಷ. ಅವನು ಆತನ ಪ್ರೀತಿಯ ತಾಯ್ನಾಡು ಭಾರತಕ್ಕಾಗಿ ಈ ಹಾಡು ಹಾಡಿದ್ದಾನೆ. ಆತ ಇನ್ನೂ ತುಂಬ ಚಿಕ್ಕವನು ಮತ್ತು ಖಂಡಿತವಾಗಿಯೂ ನಿಮಗಿಂತಲೂ ಹೆಚ್ಚು ದೇಶಭಕ್ತಿ ಅವನಿಗೆ ಇದೆ. ನಿಮ್ಮ ಹೊಲಸು ರಾಜಕೀಯದಿಂದ ಪುಟ್ಟ ಹುಡುಗನನ್ನು ಬದಿಗಿಡಿ. ಕಳಪೆ ಜೋಕುಗಳನ್ನು ಮಾಡುತ್ತೀರಲ್ಲ, ಅದನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಿ ಎಂದು ಕಿಡಿಕಾರಿದ್ದಾರೆ. ಆದರೆ ಕುನಾಲ್ ಅವರ ಟ್ವಿಟರ್ ಅಕೌಂಟ್ನಲ್ಲಿ ಸದ್ಯ ಆ ವಿಡಿಯೋ ಕಾಣಿಸುತ್ತಿಲ್ಲ.
ಹಾಗೇ, ಗಣೇಶ್ ಪೋಲ್ ಅವರ ಟ್ವೀಟ್ ಶೇರ್ ಮಾಡಿಕೊಂಡ ಕುನಾಲ್, ನಾವು ಜೋಕ್ ಮಾಡಿದ್ದು ನಿಮ್ಮ ಮಗನ ಬಗ್ಗೆ ಅಲ್ಲ. ಭಾರತ ಮಾತೆಯ ಜನಪ್ರಿಯ ಪುತ್ರನ ಎದುರು ನಿಮ್ಮ ಪುತ್ರ ಹಾಡು ಹೇಳಿದ್ದನ್ನು ಕೇಳಿ ನೀವು ತುಂಬ ಖುಷಿಪಟ್ಟಿರಿ. ಆದರೆ ಭಾರತ ಮಾತೆಯ ಆ ಪುತ್ರ ಜನರಿಂದ ಇನ್ನಷ್ಟು ಹಾಡನ್ನು ಕೇಳುವ ಅಗತ್ಯವಿದೆ ಎಂದು ಹೇಳಿದ್ದಾರೆ.
He is my 7 year old son, who wanted to sing this song for his beloved Motherland . Though he is still very young but certainly he loves his country more than you Mr. Kamra or Kachra watever u are
Keep the poor boy out of your filthy politics & try to work on your poor jokes https://t.co/ECnBFSIWkI
— GANESH POL (@polganesh) May 4, 2022
ಇದನ್ನೂ ಓದಿ: ‘ಹೆಡ್ ಬುಷ್’ ಚಿತ್ರದ ಜೊತೆ ಅಜಿತ್ ಜಯರಾಜ್ ಗೆ ಯಾವುದೇ ಸಂಬಂಧವಿಲ್ಲ: ಅಗ್ನಿ ಶ್ರೀಧರ್
Published On - 5:47 pm, Thu, 5 May 22