ದೇಶದ ವಿವಿಧೆಡೆ ಬಿಸಿಗಾಳಿ ಸಮಸ್ಯೆ: ಯೂರೋಪ್ ಪ್ರವಾಸದಿಂದ ಹಿಂದಿರುಗಿದ ತಕ್ಷಣ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸಭೆ

ಯೂರೋಪ್ ಪ್ರವಾಸದಿಂದ ಹಿಂದಿರುಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿ, ಬಿಸಿಗಾಳಿ ಮತ್ತು ಮುಂಗಾರು ಮಳೆಗೆ ಮಾಡಿಕೊಂಡಿರುವ ಸಿದ್ಧತೆಯನ್ನು ಪರಾಮರ್ಶಿಸಲಿದ್ದಾರೆ.

ದೇಶದ ವಿವಿಧೆಡೆ ಬಿಸಿಗಾಳಿ ಸಮಸ್ಯೆ: ಯೂರೋಪ್ ಪ್ರವಾಸದಿಂದ ಹಿಂದಿರುಗಿದ ತಕ್ಷಣ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸಭೆ
ಪ್ರಧಾನಿ ನರೇಂದ್ರ ಮೋದಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:May 05, 2022 | 12:57 PM

ದೆಹಲಿ: ಯೂರೋಪ್ ಪ್ರವಾಸದಿಂದ ಹಿಂದಿರುಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ. ದೇಶದ ವಿವಿಧೆಡೆ ಕಾಣಿಸಿಕೊಂಡಿರುವ ಬಿಸಿಗಾಳಿ ಸಮಸ್ಯೆ ಮತ್ತು ಮುಂದಿನ ಮಳೆಗಾಲಕ್ಕೆ ಆಗಿರುವ ಸಿದ್ಧತೆಗಳು ಪರಾಮರ್ಶೆ ನಡೆಸಲಿದ್ದಾರೆ. ಇಂದು ಒಂದೇ ದಿನ ಸುಮಾರು 8 ಸಭೆಗಳನ್ನು ಪ್ರಧಾನಿ ನಡೆಸುವ ಸಾಧ್ಯತೆಯಿದೆ. 

ತೀಕ್ಷ್ಣ ಬಿಸಿಗಾಳಿಯ ಕಾರಣದಿಂದಾಗಿ ದೇಶದ ವಿವಿಧೆಡೆ ಉಷ್ಣಾಂಶದ ಪ್ರಮಾಣ ಐತಿಹಾಸಿಕ ಗರಿಷ್ಠ ಮಟ್ಟ ಮುಟ್ಟಿದೆ. ದೆಹಲಿ ಸೇರಿದಂತೆ ದೇಶದ ವಿವಿಧೆಡೆ ನಿನ್ನೆ (ಮೇ 4) ಅಲ್ಪಪ್ರಮಾಣದ ಮಳೆಯಾಗಿದ್ದು ವಾತಾವರಣವನ್ನು ತಂಪುಗೊಳಿಸಿತು. ಮಳೆಯ ಪ್ರಭಾವದಿಂದ ಕಡಿಮೆಯಾಗಿರುವ ಉಷ್ಣಾಂಶವು ಒಂದೇ ದಿನಕ್ಕೆ ತಿರುವುಮುರುವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಶುಕ್ರವಾರದಿಂದ (ಮೇ 6) ಮತ್ತೆ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆಯಿದ್ದು, ಭಾನುವಾರದ ಹೊತ್ತಿಗೆ ದೇಶಾದ್ಯಂತ ಉಷ್ಣಾಂಶ ಹೆಚ್ಚಾಗಿ, ಅಪಾಯಕಾರಿ ಪರಿಸ್ಥಿತಿ ತಲುಪಬಹುದು ಎಂದು ಹವಾಮಾನ ಇಲಾಖೆಯ ಉನ್ನತ ಅಧಿಕಾರಿಗಳು ಹೇಳಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಕಳೆದ ಕೆಲ ವಾರಗಳಿಂದೀಚೆಗೆ ಕಾಡ್ಗಿಚ್ಚು ಹೆಚ್ಚಾಗಿದ್ದು, ಧರ್ಮಶಾಲಾ ಸುತ್ತಮುತ್ತಲ ಪ್ರದೇಶದಲ್ಲಿದ್ದ ಪೈನ್ ಮರದ ಕಾಡುಗಳ ಚಿಗುರು ಸುಟ್ಟುಹೋಗಿದೆ. ಹಿಮಾಚರ ಪ್ರದೇಶದಲ್ಲಿ ಸಾಮಾನ್ಯವಾಗಿ ಈ ಹೊತ್ತಿನಲ್ಲಿ ಮಳೆ ಸುರಿಯುವುದು ವಾಡಿಕೆ. ಕೆಲ ಪ್ರದೇಶದಲ್ಲಿ ಹಿಮ ಸಹ ಸುರಿಯುತ್ತಿತ್ತು. ಆದರೆ ಈ ವರ್ಷ ಮಾತ್ರ ಎಲ್ಲವೂ ತಿರುವುಮುರುವಾಗಿದೆ. ಕಳೆದ ಎರಡು ತಿಂಗಳಲ್ಲಿ ಒಮ್ಮೆಯೂ ಮಳೆ ಬಂದಿಲ್ಲ.

ದೇಶದ ವಿವಿಧೆಡೆ ಉಷ್ಣಾಂಶ ಹೆಚ್ಚಾದ ಹಿನ್ನೆಲೆಯಲ್ಲಿ ವಿದ್ಯುತ್​ಗೂ ಬೇಡಿಕೆ ಹೆಚ್ಚಾಗಿದೆ. ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಪೂರೈಸಲು ಸಾಧ್ಯವಾಗುತ್ತಿಲ್ಲ. ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಕೊರತೆ ಕಾಣಿಸಿಕೊಂಡಿದ್ದು, ಕಲ್ಲಿದ್ದಲು ಸಾಗಣೆಗೆ ವೇಗ ನೀಡಲೆಂದು ಭಾರತೀಯ ರೈಲ್ವೆಯು 1,100 ಪ್ರಯಾಣಿಕರ ರೈಲುಗಳ ಸಂಚಾರ ರದ್ದುಪಡಿಸಿದೆ.

ಇದನ್ನೂ ಓದಿ: Video: ಡೆನ್ಮಾರ್ಕ್​​ನಲ್ಲಿ ಡೋಲು ಬಾರಿಸಿದ ಪ್ರಧಾನಿ ನರೇಂದ್ರ ಮೋದಿ; ಭಾರತೀಯರಿಂದ ಭರ್ಜರಿ ಸ್ವಾಗತ

ಇದನ್ನೂ ಓದಿ: ಪ್ರಧಾನಿ ಮೋದಿಯವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಒಡಿಶಾದ ಪಟ್ಟಚಿತ್ರ ತೋರಿಸಿದ ಡೆನ್ಮಾರ್ಕ್​ ಪ್ರಧಾನಿ

Published On - 12:57 pm, Thu, 5 May 22