‘ಹೆಡ್ ಬುಷ್’ ಚಿತ್ರದ ಜೊತೆ ಅಜಿತ್ ಜಯರಾಜ್ ಗೆ ಯಾವುದೇ ಸಂಬಂಧವಿಲ್ಲ: ಅಗ್ನಿ ಶ್ರೀಧರ್
‘ಹೆಡ್ ಬುಷ್’ ಸಿನಿಮಾ ಮತ್ತು ಅಜಿತ್ ನಡುವೆ ಯಾವುದೇ ಸಂಬಂಧವಿಲ್ಲ. ಯಾಕೆಂದರೆ ಚಿತ್ರತಂಡ ಪ್ರಕಟಿತ ಕಥೆಯ ಹಕ್ಕುಗಳನ್ನು ಅದಾಗಲೇ ಪಡೆದುಕೊಂಡಿದ್ದಾರೆ. ಅಜಿತ್ ಅವರಿಗೇನೂ ಮಾಡಲಾರ. ಅವನು ನನ್ನ ಜೊತೆ ಒಂದು ಅರೋಗ್ಯಕರ ಚರ್ಚೆ ನಡೆಸಲು ಬಯಸಿದರೆ ಅದಕ್ಕೆ ತಯಾರಿದ್ದೇನೆ ಎಂದು ಶ್ರೀಧರ್ ಹೇಳಿದರು.
ಬೆಂಗಳೂರು: ಪತ್ರಕರ್ತ, ಸಾಹಿತಿ ಮತ್ತು ಚಿತ್ರ ನಿರ್ಮಾಪಕ ಅಗ್ನಿ ಶ್ರೀಧರ್ (Agni Sridhar) ಅವರ ‘ದಾದಾಗಿರಿಯ ದಿನಗಳು’ (Dadagiriya Dinagalu) ಕಾದಂಬರಿಯನ್ನಾಧರಿಸಿ ತಯಾರಾಗಿರುವ ಹೆಡ್ ಬುಷ್ ಚಿತ್ರಕ್ಕೆ ಸಮಸ್ಯೆ ಎದುರಾಗಿದೆ. ಹಿಂದೆ ಬೆಂಗಳೂರಿನ ಡಾನ್ ಆಗಿದ್ದ ಜಯರಾಜ್ ನ (Don Jayaraj) ಬದುಕು ಸದರಿ ಚಿತ್ರದ ಕಾಥಾವಸ್ತು ಆಗಿದೆ. ಬಹುಮುಖ ಪ್ರತಿಭೆಯ ನಟ ಡಾಲಿ ಧನಂಜಯ ಡಾನ್ ಜಯರಾಜ್ ಪಾತ್ರ ನಿರ್ವಹಿಸಿದ್ದಾರೆ. ಅಗ್ನಿ ಶ್ರೀಧರ್ ಅವರೇ ಚಿತ್ರಕಥೆ-ಸಂಭಾಷಣೆ ಬರೆದಿರುವ ಹೆಡ್ ಬುಷ್ (Head Bush) ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಆದರೆ ಜಯರಾಜ್ ಅವರ ಪುತ್ರ ಅಜಿತ್ ಜಯರಾಜ್ (Ajit Jayaraj) ಅವರ ಸಿನಿಮಾದ ಬಗ್ಗೆ ತಕರಾರೆತ್ತಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ್ದಾರೆ. ಅಜಿತ್ ಅವರ ತಕರಾರು ಏನು ಅಂತ ತಿಳಿಯಲು ಟಿವಿ9 ಕನ್ನಡ ಡಿಜಿಟಲ್ ವರದಿಗಾರ್ತಿ ಮಂಗಳಾ, ಶ್ರೀಧರ್ ಅವರೊಂದಿಗೆ ಮಾತಾಡಿದ್ದಾರೆ.
ಶ್ರೀಧರ್ ಅವರು ಹೇಳುವ ಪ್ರಕಾರ ಅಜಿತ್ ಸುಮಾರು 5-6 ತಿಂಗಳು ಹಿಂದೆ ಹೆಡ್ ಬುಷ್ ಸಿನಿಮಾನಲ್ಲಿ ತನ್ನ ತಂದೆಯ ಪಾತ್ರವನ್ನು ತಾನೇ ಮಾಡುವುದಾಗಿ ಹೇಳಿದ್ದರಂತೆ. ಅಜಿತ್ ಲುಕ್ಸ್ ಮತ್ತು ದೇಹದಾರ್ಢ್ಯ ಬಗ್ಗೆ ಮೆಚ್ಚುಗೆಯಿಂದ ಮಾತಾಡುವ ಶ್ರೀಧರ್, ಸದರಿ ಪಾತ್ರವನ್ನು ಡಾಲಿ ಧನಂಜಯ ಸೂಟ್ ಅಗುತ್ತದೆ ಅಂತ ಮೊದಲೇ ತೀರ್ಮಾನ ತೆಗೆದುಕೊಂಡಿದ್ದರಂತೆ. ಮನವಿಯನ್ನು ತಿರಸ್ಕರಿಸಿದ ಕಾರಣ ಅಜಿತ್ ಹತಾಷರಾಗಿದ್ದಾರೆ ಎಂದು ಶ್ರೀಧರ್ ಹೇಳಿದರು.
ಆದರೆ, ಧನಂಜಯ ಭಾರಿ ಪ್ರತಿಭಾವಂತ ನಟ, ಅವರು ಕಣ್ಣುಗಳಲ್ಲಿ ತೋರುವ ಎಕ್ಸ್ ಪ್ರೆಶನ್ ಗಳು ಜಯರಾಜನ ಪಾತ್ರಕ್ಕೆ ಹೇಳಿ ಮಾಡಿಸಿದಂತಿದೆ. ಹಾಗಂತ ತಾನು ಯಾರನ್ನೂ ವಹಿಸಿಕೊಂಡು ಮಾತಾಡುತ್ತಿಲ್ಲ, ವಾಸ್ತವವನ್ನು ಉಲ್ಲೇಖಿಸುತ್ತಿದ್ದೇನೆ ಅಂತ ಹೇಳಿದರು.
‘ಹೆಡ್ ಬುಷ್’ ಸಿನಿಮಾ ಮತ್ತು ಅಜಿತ್ ನಡುವೆ ಯಾವುದೇ ಸಂಬಂಧವಿಲ್ಲ. ಯಾಕೆಂದರೆ ಚಿತ್ರತಂಡ ಪ್ರಕಟಿತ ಕಥೆಯ ಹಕ್ಕುಗಳನ್ನು ಅದಾಗಲೇ ಪಡೆದುಕೊಂಡಿದ್ದಾರೆ. ಅಜಿತ್ ಅವರಿಗೇನೂ ಮಾಡಲಾರ. ಅವನು ನನ್ನ ಜೊತೆ ಒಂದು ಅರೋಗ್ಯಕರ ಚರ್ಚೆ ನಡೆಸಲು ಬಯಸಿದರೆ ಅದಕ್ಕೆ ತಯಾರಿದ್ದೇನೆ ಎಂದು ಶ್ರೀಧರ್ ಹೇಳಿದರು.
ಅಜಿತ್ ನನ್ನು ನಾನು ಮಗುವಾಗಿದ್ದಾಗಿನಿಂದಲೂ ಬಲ್ಲೆ ಮತ್ತು ಮಗನೇ ಅಂತಲೇ ಅವನನ್ನು ಕರೆಯುತ್ತೇನೆ. ತಂದೆಯ ಹತ್ಯೆಯಾದಾಗ ಅಜಿತ್ ಒಂದು ವರ್ಷದ ಮಗುವಾಗಿದ್ದ. ಮೊನ್ನೆಯಷ್ಟೇ ತನ್ನ ಮದುವೆಯ ಆಮಂತ್ರಣ ಪತ್ರ ನೀಡಲು ಬಂದಿದ್ದ. ಬಹಳ ಬ್ಯುಸಿಯಾಗಿದ್ದ ಕಾರಣ ನನಗೆ ಹೋಗಲಾಗಲಿಲ್ಲ ಎಂದು ಶ್ರೀಧರ್ ಹೇಳಿದರು.
ಇದನ್ನೂ ಓದಿ: Head Bush Movie: ‘ಹೆಡ್ಬುಷ್’ ಸಿನಿಮಾಗೆ ವಿರೋಧ; ತಂದೆಯ ಸಿನಿಮಾ ಮಾಡದಂತೆ ಫಿಲ್ಮ್ ಚೇಂಬರ್ಗೆ ದೂರು ನೀಡಿದ ಅಜಿತ್ ಜಯರಾಜ್