ಸಾರ್ವಜನಿಕ ಪ್ರದೇಶಗಳಲ್ಲಿ ಬುರ್ಕಾ ತೆಗೆದರೆ ಅಲ್ಲೇ ಬಂದು ಹೊಡೆಯುತ್ತೇವೆ; ಮುಸ್ಲಿಂ ಡಿಫೆನ್ಸ್​ ಫೋರ್ಸ್​ ವಾಟ್ಸ್​ಆ್ಯಪ್​ ಗ್ರೂಪ್​​ನಲ್ಲಿ ಬೆದರಿಕೆ ಸಂದೇಶ

ಈ ಗುಂಪಿನಲ್ಲಿ ಕನ್ನಡದಲ್ಲಿಯೇ ಸಂದೇಶಗಳನ್ನು ಮಾಡಲಾಗಿದೆ. ಕೆಲವು ಮಾಲ್​​ಗಳ ಬೇಸ್​ಮೆಂಟ್​ಗಳಲ್ಲಿ ಬುರ್ಕಾ ಧರಿಸಿಕೊಂಡು ನಿಂತು ಅನುಚಿತವಾಗಿ ವರ್ತನೆ ಮಾಡುವ ಹೆಣ್ಣುಮಕ್ಕಳು ಕಂಡುಬರುತ್ತಿದ್ದಾರೆ. ಅವರಿಗೆ ನಮ್ಮ ಕಾರ್ಯಕರ್ತರು ಅವರಿಗೆ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ ಎಂದೂ ಈ ವಾಟ್ಸ್​ಆ್ಯಪ್ ಗ್ರೂಪ್​ ಹೇಳಿಕೊಂಡಿದೆ.

ಸಾರ್ವಜನಿಕ ಪ್ರದೇಶಗಳಲ್ಲಿ ಬುರ್ಕಾ ತೆಗೆದರೆ ಅಲ್ಲೇ ಬಂದು ಹೊಡೆಯುತ್ತೇವೆ; ಮುಸ್ಲಿಂ ಡಿಫೆನ್ಸ್​ ಫೋರ್ಸ್​ ವಾಟ್ಸ್​ಆ್ಯಪ್​ ಗ್ರೂಪ್​​ನಲ್ಲಿ ಬೆದರಿಕೆ ಸಂದೇಶ
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on:May 05, 2022 | 6:06 PM

ಮುಸ್ಲಿಂ ಮಹಿಳೆಯರಿಗೆ ಬೆದರಿಕೆ ಒಡ್ಡುತ್ತಿದ್ದ ಮುಸ್ಲಿಂ ಡಿಫೆನ್ಸ್​ ಫೋರ್ಸ್​ ಎಂಬ ವಾಟ್ಸ್​ಆ್ಯಪ್​ ಗ್ರೂಪ್​​ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಇದು ಮುಸ್ಲಿಂ ಸಮುದಾಯದ ಗುಂಪೇ ಆಗಿದ್ದು, ತಮ್ಮದೇ ಸಮುದಾಯದ ಮಹಿಳೆಯರಿಗೆ ಬೆದರಿಕೆ ಒಡ್ಡುವ, ಎಚ್ಚರಿಕೆ ನೀಡುವ ಸಂದೇಶಗಳು ಈ ಗ್ರೂಪ್​​ನಲ್ಲಿ ಹರಿದಾಡಿವೆ ಎಂದು ಹೇಳಲಾಗಿದೆ. ಅಂದರೆ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಕಾ, ಹಿಜಾಬ್ ತೆಗೆಯದರೆ ಅಂಥವರ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಮೆಸೇಜ್​​ಗಳು ಗುಂಪಿನಲ್ಲಿವೆ ಎನ್ನಲಾಗಿದೆ. 

ಅಂದಹಾಗೇ, ಈ ಗುಂಪಿನಲ್ಲಿ ಕನ್ನಡದಲ್ಲಿಯೇ ಸಂದೇಶಗಳನ್ನು ಮಾಡಲಾಗಿದೆ. ಕೆಲವು ಮಾಲ್​​ಗಳ ಬೇಸ್​ಮೆಂಟ್​ಗಳಲ್ಲಿ ಬುರ್ಕಾ ಧರಿಸಿಕೊಂಡು ನಿಂತು ಅನುಚಿತವಾಗಿ ವರ್ತನೆ ಮಾಡುವ ಹೆಣ್ಣುಮಕ್ಕಳು ಕಂಡುಬರುತ್ತಿದ್ದಾರೆ. ಅವರಿಗೆ ನಮ್ಮ ಕಾರ್ಯಕರ್ತರು ಅವರಿಗೆ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಇನ್ನೊಮ್ಮೆ ಇಂಥ ದೃಶ್ಯ ಕಂಡುಬಂದರೆ ಅಂಥವರಿಗೆ ಹೊಡೆಯುತ್ತೇವೆ ಎಂದು ಈ ಮುಸ್ಲಿಂ ಡಿಫೆನ್ಸ್​ ಫೋರ್ಸ್ ವಾಟ್ಸ್​ಆ್ಯಪ್​ ಗ್ರೂಪ್​​ನಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲ, ನಿಮ್ಮ ಮಕ್ಕಳು ಎಲ್ಲಿಗೆ ಹೋಗುತ್ತಾರೆ, ಏನು ಮಾಡುತ್ತಾರೆ ಎಂಬುದನ್ನು ಗಮನಿಸಿ ಎಂದು ಪಾಲಕರಿಗೂ ತಿಳಿಸಲಾಗಿದೆ. ಇವರು ಮಂಗಳೂರಿನ ಮುಸ್ಲಿಂ ಹೆಣ್ಣುಮಕ್ಕಳ ಮೇಲೆ ಕಣ್ಣಿಟ್ಟಿದ್ದಾಗಿಯೂ ಸಂದೇಶದಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ತಮ್ಮ ಗಮನಕ್ಕೆ ಬಂದಿರುವುದಾಗಿ ಮಂಗಳೂರು ಪೊಲೀಸ್ ಆಯುಕ್ತ ಶಶಿ ಕುಮಾರ್​ ತಿಳಿಸಿದ್ದು, ಸೋಷಿಯಲ್​ ಮೀಡಿಯಾಗಳಲ್ಲಿ ಹಾಕಲಾಗುತ್ತಿರುವ ಬೆದರಿಕೆಯುಕ್ತ ಮೆಸೇಜ್​​ಗಳ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಹಾಗೇ, ಪಾಲಕರ ಬಳಿಯೂ ಎಚ್ಚರಿಕೆಯಿಂದ ಇರುವಂತೆ ಹೇಳಿದ್ದಾರೆ. ನಿಮ್ಮ ಮಕ್ಕಳಿಗೆ ಸಾರ್ವಜನಿಕ ಪ್ರದೇಶಗಳಲ್ಲಿ ಸೆಲ್ಫೀ ತೆಗೆಯದಂತೆ ಹೇಳಿ ಎಂಬ ಸಲಹೆಯನ್ನೂ ನೀಡಿದ್ದಾರೆ. (Source)

ಇದನ್ನೂ ಓದಿ: ಕತ್ರಿನಾ ಕೈಫ್ ತಾಯಿಗೆ 70ನೇ ವರ್ಷದ ಹುಟ್ಟುಹಬ್ಬ; ವಿಶೇಷವಾಗಿ ಬರ್ತ್​ಡೇ ಆಚರಿಸಿದ ನಟಿ

Published On - 6:05 pm, Thu, 5 May 22

ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್