ಭಾರತದಲ್ಲಿ ಖಲಿಸ್ತಾನ್ ಚಳವಳಿಯನ್ನು ವಿಸ್ತರಿಸಲು ಬಯಸುತ್ತಿದೆ ಪಾಕ್ ಐಎಸ್ಐ: ಗುಪ್ತಚರ ಮಾಹಿತಿ

ರಿಂಡಾ ಸ್ವಯಂ ನಿಧಿಯಿಂದ ಭಯೋತ್ಪಾದನಾ ಜಾಲವನ್ನು ನಡೆಸುತ್ತಿದ್ದಾರೆ. ಡ್ರಗ್ಸ್ ಮಾರಾಟದೊಂದಿಗೆ ಅವರು ಶಸ್ತ್ರಾಸ್ತ್ರಗಳ ಚಲನೆಗೆ ಹಣವನ್ನು ನೀಡುತ್ತಾರೆ. ಉದ್ಯೋಗಕ್ಕಾಗಿ ಸ್ಥಳೀಯ ಯುವಕರನ್ನು ಸಕ್ರಿಯಗೊಳಿಸುತ್ತಾರೆ ಎಂದು ಮೂಲಗಳು ಹೇಳಿವೆ.

ಭಾರತದಲ್ಲಿ ಖಲಿಸ್ತಾನ್ ಚಳವಳಿಯನ್ನು ವಿಸ್ತರಿಸಲು ಬಯಸುತ್ತಿದೆ ಪಾಕ್ ಐಎಸ್ಐ: ಗುಪ್ತಚರ ಮಾಹಿತಿ
ನದೀಂ ಅಂಜುಮ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:May 05, 2022 | 6:09 PM

ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಖಲಿಸ್ತಾನ್ ಚಳುವಳಿಯು ಭಾರತದ ಇತರ ಭಾಗಗಳಿಗೆ ವಿಸ್ತರಿಸಬೇಕೆಂದು ಬಯಸುತ್ತಿದೆ ಎಂಬುದಾಗಿ ಗುಪ್ತಚರ ಮಾಹಿತಿ (intelligence note) ಲಭಿಸಿದೆ ಎಂದು ಸಿಎನ್ಎನ್- ನ್ಯೂಸ್18 ವರದಿ ಮಾಡಿದೆ. ಐಎಸ್ಐನ ನೂತನ ಮುಖ್ಯಸ್ಥ ನದೀಮ್ ಅಂಜುಮ್ ಭಾರತದಲ್ಲಿ ಅಶಾಂತಿಯನ್ನು ಉತ್ತೇಜಿಸಲು ಸಿಖ್ ಪ್ರತ್ಯೇಕತಾವಾದಿಗಳ ಜಾಗತಿಕ ಭಾಗವಹಿಸುವಿಕೆ  ಬಯಸುತ್ತಾರೆ ಎಂದು ಮಾಹಿತಿಯಲ್ಲಿ ಹೇಳಿದೆ.  ಭಾರತದಲ್ಲಿ ಶಸ್ತ್ರಾಸ್ತ್ರ ವಿತರಣೆಗಾಗಿ ಪಂಜಾಬ್ (Punjab) ಮೂಲದ ದರೋಡೆಕೋರರನ್ನು ಸಂಘಟಿಸಲು ರಂಜಿತ್ ಸಿಂಗ್ ನೀತಾ ಮತ್ತು ವಾಧವಾ ಸಿಂಗ್ ಬಬ್ಬರ್ ಸೇರಿದಂತೆ ಲಾಹೋರ್‌ನಲ್ಲಿರುವ ಎಲ್ಲಾ ಖಲಿಸ್ತಾನಿ ನಾಯಕರನ್ನು ಅಂಜುಮ್ ಕೇಳಿದ್ದಾರೆ ಎಂದು ಗುಪ್ತಚರ ಮಾಹಿತಿ ಹೇಳಿದೆ. ಗುರುವಾರ ಹರ್ಯಾಣದ ಕರ್ನಾಲ್ ಜಿಲ್ಲೆಯಲ್ಲಿ ನಾಲ್ವರನ್ನು ಬಂಧಿಸಿದ್ದು ಇವರು ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳನ್ನು ಬೀಳಿಸುವ ಗುಂಪಿನ ಭಾಗವಾಗಿದ್ದಾರೆ ಎಂದು ಅದು ಹೇಳುತ್ತದೆ. ಗುಪ್ತಚರ ಮಾಹಿತಿ ಪ್ರಕಾರ, ಶಸ್ತ್ರಾಸ್ತ್ರಗಳನ್ನು ಡ್ರೋನ್‌ಗಳ ಮೂಲಕ ಪಂಜಾಬ್‌ಗೆ ತರಲಾಗುತ್ತದೆ.  ದರೋಡೆಕೋರ-ಭಯೋತ್ಪಾದಕ ಹರ್ವಿಂದರ್ ಸಿಂಗ್ ‘ರಿಂಡಾ’ ಅವರನ್ನು ಭಾರತದ ಇತರ ಭಾಗಗಳಿಗೆ ಕಳುಹಿಸಲು ವಹಿಸಲಾಗಿದೆ.  2021 ರ ಲುಧಿಯಾನ ಕೋರ್ಟ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಂಡಾ ಹೆಸರನ್ನು ಏಜೆನ್ಸಿಗಳು ದೃಢಪಡಿಸಿವೆ. ದರೋಡೆಕೋರ ತನ್ನ ಸ್ಥಳೀಯ ಜಾಲವನ್ನು ಬಳಸಿಕೊಂಡು ಪಾಕಿಸ್ತಾನದಿಂದ ಭಾರತದ ವಿವಿಧ ಭಾಗಗಳಿಗೆ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ಕಳುಹಿಸುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.  ರಿಂಡಾ ಲಾಹೋರ್‌ನ ಜೋಹರ್ ಟೌನ್‌ನಲ್ಲಿ ಐಎಸ್‌ಐ ಪರವಾಗಿ ಕೆಲಸ ಮಾಡುತ್ತಿರುವ ವಾಧವಾ ಸಿಂಗ್‌ನೊಂದಿಗೆ ಇರಬಹುದು ಎಂದು ಅವರು ಹೇಳಿದರು.

ರಿಂಡಾ ಸ್ವಯಂ ನಿಧಿಯಿಂದ ಭಯೋತ್ಪಾದನಾ ಜಾಲವನ್ನು ನಡೆಸುತ್ತಿದ್ದಾರೆ. ಡ್ರಗ್ಸ್ ಮಾರಾಟದೊಂದಿಗೆ ಅವರು ಶಸ್ತ್ರಾಸ್ತ್ರಗಳ ಚಲನೆಗೆ ಹಣವನ್ನು ನೀಡುತ್ತಾರೆ. ಉದ್ಯೋಗಕ್ಕಾಗಿ ಸ್ಥಳೀಯ ಯುವಕರನ್ನು ಸಕ್ರಿಯಗೊಳಿಸುತ್ತಾರೆ ಎಂದು ಮೂಲಗಳು ಹೇಳಿವೆ.

ವಾಧವಾ ಸಿಂಗ್ ಮತ್ತು ರಿಂಡಾ ಆರ್‌ಡಿಎಕ್ಸ್‌ ಬಳಸಿ ಸ್ಥಳೀಯ ನಾಯಕರನ್ನು ಭಯಭೀತಗೊಳಿಸುವುದಕ್ಕಾಗಿ ಕೊಲೆ, ಹಿಂದೂ-ಸಿಖ್ ಮತ್ತು ಹಿಂದೂ-ಮುಸ್ಲಿಂ ಉದ್ವಿಗ್ನತೆಯನ್ನು ಉಂಟು ಮಾಡುವುದಕ್ಕಾಗಿ ಕೆಲವು ಪ್ರಮುಖ ಸ್ಫೋಟಗಳನ್ನು ನಡೆಸಬೇಕೆಂದು ಐಎಸ್‌ಐ ಬಯಸುತ್ತದೆ.

ಇದನ್ನೂ ಓದಿ
Image
ಹರ್ಯಾಣ: ಪಾಕಿಸ್ತಾನದೊಂದಿಗೆ ನಂಟು ಹೊಂದಿರುವ ನಾಲ್ವರು ಶಂಕಿತ ಖಲಿಸ್ತಾನಿ ಭಯೋತ್ಪಾದಕರ ಬಂಧನ

ಕರ್ನಾಲ್‌ನಿಂದ ಬಂಧಿತ ವ್ಯಕ್ತಿಗಳಲ್ಲಿ ಒಬ್ಬರಾದ ಗುರ್‌ಪ್ರೀತ್ ಅವರು ರಿಂಡಾ ಅವರ ಆದೇಶದ ಮೇರೆಗೆ ಡ್ರೋನ್ ಮೂಲಕ ಗಡಿಯಾಚೆಗಿನ ಸರಕುಗಳನ್ನು ಸ್ವೀಕರಿಸಿದ್ದಾರೆ ಎಂದು ಏಜೆನ್ಸಿಗಳಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಮ್ಮ ವಿಚಾರಣೆಯಲ್ಲಿ ಆರೋಪಿಗಳು ಏಪ್ರಿಲ್ 2022 ರಲ್ಲೂ ಇದೇ ರೀತಿಯ ಸರಕುಗಳನ್ನು ತಲುಪಿಸಿದ್ದಾರೆ ಎಂದು ಏಜೆನ್ಸಿಗಳಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.  ಮೂಲಗಳ ಪ್ರಕಾರ ಅಕ್ಷಾಂಶ ಮತ್ತು ರೇಖಾಂಶ ಸೇರಿದಂತೆ ಡ್ರಾಪ್‌ಗೆ ಆರು ಗಂಟೆಗಳ ಮೊದಲು ಸೂಚನೆಗಳನ್ನು ಪಡೆಯುವುದಾಗಿ ಆರೋಪಿಗಳು ಹೇಳಿದ್ದಾರೆ.

ಅವರು ಶಸ್ತ್ರಾಸ್ತ್ರಗಳನ್ನು ಪಡೆದ ನಂತರ, ಅವುಗಳನ್ನು ನಿರ್ದಿಷ್ಟ ಸ್ಥಳ ಅಥವಾ ರಾಜ್ಯಕ್ಕೆ ಕೊಂಡೊಯ್ಯಲು ನಿರ್ದೇಶಿಸಲಾಗುತ್ತದೆ. ಅಲ್ಲಿಗೆ ತಲುಪಿದ ನಂತರ ಅವರು ಭಾರತದ ನಿರ್ದಿಷ್ಟ ಅಕ್ಷಾಂಶ ಮತ್ತು ರೇಖಾಂಶಕ್ಕೆ ರವಾನೆಯನ್ನು ಕಳುಹಿಸಲು ಸೂಚನೆಗಳನ್ನು ಪಡೆಯುತ್ತಾರೆ ಎಂದು ಮೂಲಗಳು ತಿಳಿಸಿವೆ. ಭಾರತದಲ್ಲಿ ಕೆಲಸ ಮಾಡುವ ಎಲ್ಲಾ ಕಾರ್ಯಕರ್ತರನ್ನು ಉಳಿಸುವ ಆಲೋಚನೆ ಇದೆ ಎಂದು ಮೂಲಗಳು ತಿಳಿಸಿವೆ.

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:05 pm, Thu, 5 May 22