ಹೈದರಾಬಾದ್​​ನಲ್ಲಿ ಮುಸ್ಲಿಂ ಮಹಿಳೆಯನ್ನು ಮದುವೆಯಾದ ದಲಿತ ಯುವಕನ ಕಗ್ಗೊಲೆ; ಮರ್ಯಾದಾ ಹತ್ಯೆ ಶಂಕೆ

Honour killing in Hyderabad ಹತ್ಯೆಯಾದ ವ್ಯಕ್ತಿಯ ಭಾವ (ಪತ್ನಿಯ ಸಹೋದರ) ಮತ್ತು ಅವರ ಸಂಬಂಧಿ ಯುವಕನನ್ನು ನೆಲಕ್ಕೆ ತಳ್ಳಿ ರಾಡ್‌ಗಳಿಂದ ಮನಬಂದಂತೆ ಥಳಿಸಿದ್ದಾರೆ. ನಂತರ ಚಾಕುವಿನಿಂದ ಇರಿದಿದ್ದು, ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೈದರಾಬಾದ್​​ನಲ್ಲಿ ಮುಸ್ಲಿಂ ಮಹಿಳೆಯನ್ನು ಮದುವೆಯಾದ ದಲಿತ ಯುವಕನ ಕಗ್ಗೊಲೆ; ಮರ್ಯಾದಾ ಹತ್ಯೆ ಶಂಕೆ
ಹತ್ಯೆಯಾದ ವ್ಯಕ್ತಿಯ ಮದುವೆ ಫೋಟೊ (ಸಂಗ್ರಹ ಚಿತ್ರ)
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:May 05, 2022 | 6:19 PM

ಹೈದರಾಬಾದ್: ತೆಲಂಗಾಣದ ಸರೂರ್ ನಗರದಲ್ಲಿ 20ರಹರೆಯದ ವ್ಯಕ್ತಿ ತನ್ನ ಪತ್ನಿಯೊಂದಿಗೆ ಬೈಕ್​​ನಲ್ಲಿ ಬರುತ್ತಿದ್ದಾಗ ಸ್ಕೂಟರ್​​ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಬೈಕ್ ತಡೆದಿದ್ದಾರೆ. ಬೈಕ್ ತಡೆದ ಆ ವ್ಯಕ್ತಿಗಳು ಸಾರ್ವಜನಿಕವಾಗಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಕೊಲೆ (Murder) ಮಾಡಿದ ಘಟನೆ ಬುಧವಾರ ಇಲ್ಲಿ ನಡೆದಿದೆ. ಹತ್ಯೆಯಾಗಿರುವ ದಲಿತ ವ್ಯಕ್ತಿಯು ಮುಸ್ಲಿಂ ಮಹಿಳೆಯನ್ನು(Muslim woman) ವಿವಾಹವಾಗಿದ್ದು, ಈ ವಿವಾಹವನ್ನು ಆಕೆಯ ಸಹೋದರ ವಿರೋಧಿಸಿದ್ದರು. ಮಹಿಳೆಯ ಸಹೋದರನೇ ಈ ಕೊಲೆ ಮಾಡಿದ್ದು ಎಂದು ಹೇಳಲಾಗುತ್ತಿದ್ದು,ಇದು ಮರ್ಯಾದಾ ಹತ್ಯೆ (Honour killing) ಎಂದು ಶಂಕಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಹತ್ಯೆಯಾದ ವ್ಯಕ್ತಿಯ ಭಾವ (ಪತ್ನಿಯ ಸಹೋದರ) ಮತ್ತು ಅವರ ಸಂಬಂಧಿ ಯುವಕನನ್ನು ನೆಲಕ್ಕೆ ತಳ್ಳಿ ರಾಡ್‌ಗಳಿಂದ ಮನಬಂದಂತೆ ಥಳಿಸಿದ್ದಾರೆ. ನಂತರ ಚಾಕುವಿನಿಂದ ಇರಿದಿದ್ದು, ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು ಮತ್ತು ಅವರ ಪತ್ನಿ ವಿವಿಧ ಧರ್ಮಗಳಿಗೆ ಸೇರಿದವರಾಗಿದ್ದು, ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಮಹಿಳೆಯ ಕುಟುಂಬದ ಸದಸ್ಯರ ಇಚ್ಛೆಗೆ ವಿರುದ್ಧವಾಗಿ ಈ ವರ್ಷದ ಜನವರಿಯಲ್ಲಿ ಮದುವೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಸಹೋದರ ಬೇರೆ ಧರ್ಮಕ್ಕೆ ಸೇರಿದ ವ್ಯಕ್ತಿಯನ್ನು ಮದುವೆಯಾಗುವುದನ್ನು ವಿರೋಧಿಸಿದರು. ಆಕೆಯ ಪತಿಯನ್ನು ಕೊಲ್ಲಲು ನಿರ್ಧರಿಸಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.  ಐವರು ತನ್ನ ಗಂಡನ ಮೇಲೆ ರಸ್ತೆಯಲ್ಲಿ ಹಲ್ಲೆ ನಡೆಸಿದ್ದಾರೆ. ತನಗೆ 11 ವರ್ಷಗಳಿಂದ ಆತನ (ಪತಿ) ಪರಿಚಯವಿದೆ ಎಂದು ಮಹಿಳೆ ಟಿವಿ ಚಾನೆಲ್‌ಗಳಿಗೆ ತಿಳಿಸಿದ್ದಾರೆ. ಅವರ ಮದುವೆಗೆ ಮಹಿಳೆಯ ಸಹೋದರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ವ್ಯಕ್ತಿಯ ತಂದೆ ಹೇಳಿದ್ದಾರೆ.(Source)

ಕೊಲೆಗೆ ಸಂಬಂಧಿಸಿದಂತೆ ಮಹಿಳೆಯ ಸಹೋದರ ಮತ್ತು ಆತನ ಸಂಬಂಧಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಎಲ್ ಬಿ ನಗರ ವಿಭಾಗ) ಪಿ ಶ್ರೀಧರ್ ರೆಡ್ಡಿ ತಿಳಿಸಿದ್ದಾರೆ.

ಸಾರ್ವಜನಿಕರ ಮುಂದೆಯೇ ನಡೆದ ಕಗ್ಗೊಲೆ ಕ್ಯಾಮೆರಾದಲ್ಲಿ ಸೆರೆ ಹೈದರಾಬಾದ್‌ನ ರಸ್ತೆಯೊಂದರಲ್ಲಿ ಯುವಕನೊಬ್ಬ ರಕ್ತ ಸ್ರಾವದಲ್ಲಿ ಬಿದ್ದಿರುವ  ದೃಶ್ಯ  ನಿನ್ನೆ ಸಂಜೆ ಸಿಸಿಟಿವಿ ಮತ್ತು ಮೊಬೈಲ್ ಫೋನ್‌ಗಳಲ್ಲಿ ಸೆರೆಯಾಗಿದೆ. ಬಿ ನಾಗರಾಜು ಮತ್ತು ಸೈಯದ್ ಅಶ್ರಿನ್ ಸುಲ್ತಾನಾ ಅವರು “ಬಾಲ್ಯದ ಗೆಳೆಯರಾಗಿದ್ದು ”  ಮೂರು ತಿಂಗಳ ಹಿಂದೆ ಮದುವೆಯಾಗಿದ್ದರು.

ಇದನ್ನೂ ಓದಿ
Image
ಅಪಘಾತದಲ್ಲಿ ಕಾಲು ಕಳೆದುಕೊಂಡ ಡೆಲಿವರಿ ಬಾಯ್, ಕಮಿಷನ್ ಗಲಾಟೆಗೆ ಎಪಿಎಂಸಿ ಏಜೆಂಟ್ ಕೊಲೆ

ಬುಧವಾರ ರಾತ್ರಿ 8.45ರ ಸುಮಾರಿಗೆ ದಂಪತಿ ತಮ್ಮ ಬೈಕ್‌ನಲ್ಲಿ ಮನೆಯಿಂದ ಹೊರಟಿದ್ದಾಗ ಇಬ್ಬರು ವ್ಯಕ್ತಿಗಳು ದಾರಿ ತಡೆದು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ಜನರು ಅಲ್ಲಿ ಸೇರಿದ್ದರೂ  ಯಾರೂ ದಾಳಿಯನ್ನು ತಡೆಯಲು ಪ್ರಯತ್ನಿಸಲಿಲ್ಲ. ಅನೇಕರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಈ  ಅಪರಾಧದ ದೃಶ್ಯವನ್ನು ರೆಕಾರ್ಡ್ ಮಾಡಿದರು.

ಕ್ಯಾಮೆರಾದಲ್ಲಿ  ಸೆರೆಯಾದ ದೃಶ್ಯದಲ್ಲಿ ನಾಗರಾಜು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಾಣಿಸುತ್ತದೆ, ಅ ಅವರ ಹೆಂಡತಿ ಸಹಾಯಕ್ಕಾಗಿ ಕಿರುಚುತ್ತಿದ್ದರು. ಇದಲ್ಲೆವೂ ಕೆಲವೇ ಕ್ಷಣಗಳಲ್ಲಿ ನಡೆದಿದ್ದು, ನಾಗರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಾಗರಾಜು ಮತ್ತು ಸುಲ್ತಾನಾ ಜನವರಿ 31 ರಂದು ಹೈದರಾಬಾದ್‌ನ ಹಳೆಯ ಕ್ವಾರ್ಟರ್ಸ್‌ನಲ್ಲಿರುವ ಆರ್ಯ ಸಮಾಜ ದೇವಸ್ಥಾನದಲ್ಲಿ ತನ್ನ ಕುಟುಂಬದವರ ಅಪೇಕ್ಷೆಗೆ ವಿರುದ್ಧವಾಗಿ ಮದುವೆಯಾಗಿದ್ದರು. 10ನೇ ತರಗತಿಯಿಂದಲೂ ಇಬ್ಬರೂ ಪರಸ್ಪರ ಪರಿಚಿತರಾಗಿದ್ದರು.

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ 

Published On - 4:52 pm, Thu, 5 May 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್