ಮೂಲ ಬಯೊಮೆಟ್ರಿಕ್ ದತ್ತಾಂಶವನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ: ಆಧಾರ್ ಆಡಳಿತ ಮಂಡಳಿ

ಆಧಾರ್​ಗಾಗಿ ಸಂಗ್ರಹಿಸಿದ ಮೂಲ ಬಯೊಮೆಟ್ರಿಕ್ ಮಾಹಿತಿಯನ್ನು ಯಾವುದೇ ಸಂದರ್ಭದಲ್ಲಿ, ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ಎಂದು ಪ್ರಾಧಿಕಾರವು ದೆಹಲಿ ಹೈಕೋರ್ಟ್​ಗೆ ಮಾಹಿತಿ ನೀಡಿದೆ

ಮೂಲ ಬಯೊಮೆಟ್ರಿಕ್ ದತ್ತಾಂಶವನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ: ಆಧಾರ್ ಆಡಳಿತ ಮಂಡಳಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 05, 2022 | 3:37 PM

ದೆಹಲಿ: ಭಾರತೀಯರಿಗೆ ಆಧಾರ್​ ಸಂಖ್ಯೆ ನೀಡುವ ವಿಶಿಷ್ಟ ಗುರುತು ಪ್ರಾಧಿಕಾರವು (Unique Identification Authority of India – UIDAI) ಆಧಾರ್​ಗಾಗಿ ಸಂಗ್ರಹಿಸಿದ ಮೂಲ ಬಯೊಮೆಟ್ರಿಕ್ ಮಾಹಿತಿಯನ್ನು ಯಾವುದೇ ಸಂದರ್ಭದಲ್ಲಿ, ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ಎಂದು ದೆಹಲಿ ಹೈಕೋರ್ಟ್​ಗೆ ಮಾಹಿತಿ ನೀಡಿದೆ. ಆಧಾರ್ ಕಾಯ್ದೆಯು ಈ ಅಂಶವನ್ನು ಸ್ಪಷ್ಟಪಡಿಸಿದೆ. ವಿಧಿವಿಜ್ಞಾನ ಪರೀಕ್ಷೆಗಳಿಗೆ ಉಪಯುಕ್ತವಾಗುವ ಶಿಷ್ಟಾಚಾರದ ಅನ್ವಯ ತಂತ್ರಜ್ಞಾನ, ನಿಲುವು ಅಥವಾ ಇತರ ದತ್ತಾಂಶಗಳನ್ನು ಆಧಾರ್ ಸಂಗ್ರಹಿಸುತ್ತಿಲ್ಲ. ಮೂಲ ದತ್ತಾಂಶ ಎಂದರೆ ಏನು ಎಂಬದನ್ನು ಆಧಾರ್ ಕಾಯ್ದೆಯ 2 (1) ವಿಧಿ ಸ್ಪಷ್ಟಪಡಿಸಿದೆ. ಇದರ ಅನ್ವಯ ಬೆರಳಚ್ಚು, ಕಣ್ಣಿನ ಪಾಪೆ ಅಥವಾ ಇತರ ಜೈವಿಕ ವಿವರಗಳನ್ನು ಪ್ರಾಧಿಕಾರವು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ಎಂದು ಕೋರ್ಟ್​ಗೆ ಮಾಹಿತಿ ನೀಡಿದೆ.

2018ರಲ್ಲಿ ವರದಿಯಾಗಿರುವ ದರೋಡೆ ಪ್ರಕರಣವೊಂದರಲ್ಲಿ ಅಪರಾಧ ನಡೆದ ಸ್ಥಳದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಆಧಾರ್ ಡೇಟಾಬೇಸ್​ನೊಂದಿಗೆ ಹೋಲಿಸಿ ನೋಡಲು ಅವಕಾಶ ನೀಡಬೇಕು ಎನ್ನುವ ಸರ್ಕಾರಿ ವಕೀಲರ ಮನವಿಗೆ ಆಧಾರ್ ಪ್ರಾಧಿಕಾರವು ಮೇಲಿನಂತೆ ಅಫಿಡವಿಟ್ ಸಲ್ಲಿಸಿತು.

‘ಪ್ರತಿ ವ್ಯಕ್ತಿಗೂ ಬಯೊಮೆಟ್ರಿಕ್ ಮಾಹಿತಿ ಪ್ರತ್ಯೇಕವಾಗಿರುತ್ತದೆ. ಅತಿ ಸೂಕ್ಷ್ಮ ಮಾಹಿತಿ ದುರ್ಬಳಕೆಯಾಗದಂತೆ ತಡೆಯುವುದು ಪ್ರಾಧಿಕಾರದ ಜವಾಬ್ದಾರಿಯಾಗಿರುತ್ತದೆ. ಹೀಗಾಗಿ ಬಯೊಮೆಟ್ರಿಕ್ ಮಾಹಿತಿಯನ್ನು ಆಧಾರ್ ಸಂಖ್ಯೆ ಜನರೇಟ್ ಮಾಡುವುದು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕೆ ಬಳಸಲು ಆಧಾರ್ ಕಾಯ್ದೆಯು ಅವಕಾಶ ಕೊಡುವುದಿಲ್ಲ ಎಂದು ಪ್ರಾಧಿಕಾರವು ಸ್ಪಷ್ಟಪಡಿಸಿತು. ಸಂಬಂಧಿಸಿದ ವ್ಯಕ್ತಿಯ ಅಧಿಕೃತ ಸಮ್ಮತಿ ಇಲ್ಲದೆ ಆಧಾರ್​ಗಾಗಿ ಸಂಗ್ರಹಿಸಿದ ಯಾವುದೇ ಮಾಹಿತಿಯನ್ನು ಹೊರಗಿನ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ನೀಡಲು ಸಾಧ್ಯವಿಲ್ಲ’ ಎಂದು ಪ್ರಾಧಿಕಾರವು ಹೇಳಿದೆ.

ವಿಧಿವಿಜ್ಞಾನ ಪ್ರಯೋಗಾಲಯಗಳಿಗೆ ಬೇಕಿರುವ ಗುಣಮಟ್ಟದಲ್ಲಿ ಜೈವಿಕ ದತ್ತಾಂಶಗಳನ್ನು ಸಂಗ್ರಹಿಸುವುದಿಲ್ಲ. ಹೀಗಾಗಿ ಆಧಾರ್​ಗಾಗಿ ಸಂಗ್ರಹಿಸಿದ ಮಾಹಿತಿಯನ್ನು ಹೋಲಿಸಿ ನೋಡಲು ಬಳಸುವುದು ಅಷ್ಟು ಸೂಕ್ತವಾಗಲಾರದು ಎಂದು ಪ್ರಾಧಿಕಾರವು ಅಭಿಪ್ರಾಯಪಟ್ಟಿತು. ಬಯೊಮೆಟ್ರಿಕ್ ಸತ್ಯಾಪನೆಗಾಗಿ ಯಾರಿಗಾದರೂ ಮಾಹಿತಿ ನೀಡಬೇಕಿದ್ದರೆ ಸಂಬಂಧಿಸಿದ ವ್ಯಕ್ತಿಯ ಸಹಮತ ಅತ್ಯಗತ್ಯ. ಆಧಾರ್ ತಂತ್ರಜ್ಞಾನವು ಕೆಲಸ ಮಾಡುವುದು ಅದೇ ರೀತಿಯಲ್ಲಿ ಎಂದು ಹೇಳಿದೆ. ಹೀಗಾಗಿ ಆಧಾರ್​ಗಾಗಿ ಸಂಗ್ರಹಿಸಿದ ಯಾವುದೇ ಬೆರಳಚ್ಚು, ಛಾಯಾಚಿತ್ರ ಅಥವಾ ಮನೆ ವಿಳಾಸಗಳನ್ನು ವ್ಯಕ್ತಿಯ ಹೆಸರಿನ ಮೇಲೆ ನೀಡಲು ಆಗುವುದಿಲ್ಲ. ಆಧಾರ್ ನಂಬರ್ ನೀಡುವುದರೊಂದಿಗೆ ಸಂಬಂಧಿಸಿದ ವ್ಯಕ್ತಿಯ ಸಹಮತ ಅತ್ಯಗತ್ಯ. ಪೊಲೀಸರ ಬೇಡಿಕೆಯು ಕಾಯ್ದೆಯ ವ್ಯಾಪ್ತಿಯ ಹೊರಗಿರುವುದು ಮಾತ್ರವೇ ಅಲ್ಲ, ತಾಂತ್ರಿಕವಾಗಿಯೂ ಇಂಥ ಮಾಹಿತಿ ಒದಗಿಸಲು ಸಾಧ್ಯವಿಲ್ಲ ಎಂದು ಪ್ರಾಧಿಕಾರವು ಕೋರ್ಟ್​ಗೆ ಸ್ಪಷ್ಟಪಡಿಸಿತು.

ಇದನ್ನೂ ಓದಿ: Aadhaar Card: ಆಧಾರ್ ಕಾರ್ಡ್‌ನ ವಿವಿಧ ರೂಪಗಳ ಜತೆಗೆ ಅವುಗಳ ವೈಶಿಷ್ಟ್ಯದ ಬಗ್ಗೆ ತಿಳಿಯಿರಿ

ಇದನ್ನೂ ಓದಿ: ನಾಪತ್ತೆಯಾಗಿದ್ದ ಮಗನ ಪತ್ತೆಗೆ ನೆರವಾಯ್ತು ಆಧಾರ್ ಕಾರ್ಡ್: ಬೆಂಗಳೂರಿನಲ್ಲಿ ಕಳೆದುಹೋಗಿದ್ದ ಮಗ ನಾಗಪುರದಲ್ಲಿ ಪತ್ತೆ

ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ