AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aadhaar Card: ಆಧಾರ್ ಕಾರ್ಡ್‌ನ ವಿವಿಧ ರೂಪಗಳ ಜತೆಗೆ ಅವುಗಳ ವೈಶಿಷ್ಟ್ಯದ ಬಗ್ಗೆ ತಿಳಿಯಿರಿ

ಆಧಾರ್​ ಕಾರ್ಡ್​ನಲ್ಲಿನ ವಿವಿಧ ಬಗೆಯ ಬಗೆ ನಿಮಗೆಷ್ಟು ಗೊತ್ತು? ಕೆವೈಸಿಗೆ ಬಹಳ ಮುಖ್ಯವಾಧ ಈ ದಾಖಲೆಯಲ್ಲಿ ಇರುವ ವಿವಿಧ ಬಗೆಗಳ ಬಗ್ಗೆ ಮಾಹಿತಿ ಇಲ್ಲಿದೆ.

Aadhaar Card: ಆಧಾರ್ ಕಾರ್ಡ್‌ನ ವಿವಿಧ ರೂಪಗಳ ಜತೆಗೆ ಅವುಗಳ ವೈಶಿಷ್ಟ್ಯದ ಬಗ್ಗೆ ತಿಳಿಯಿರಿ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on:Apr 21, 2022 | 4:17 PM

Share

ಕೆವೈಸಿ (Know Your Customer) ದೃಢೀಕರಣ ಮತ್ತು ಪ್ರೊಫೈಲ್‌ಗಳನ್ನು ನಿರ್ವಹಿಸಲು ವಿವಿಧ ಕಂಪೆನಿಗಳು ಮತ್ತು ಸರ್ಕಾರಿ ಸಂಸ್ಥೆಗಳು ಆಧಾರ್ ಕಾರ್ಡ್ (Aadhaar Card) ಅನ್ನು ಬಳಸುತ್ತವೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ನಿವಾಸಿಗಳ ಅನುಕೂಲಕ್ಕಾಗಿ ಕಾಲಕಾಲಕ್ಕೆ ಆಧಾರ್‌ನ ವಿವಿಧ ರೂಪಗಳನ್ನು ಪರಿಚಯಿಸಿದೆ. ಆಧಾರ್ ಕಾರ್ಡ್‌ನ ವಿವಿಧ ರೂಪಗಳು ಮತ್ತು ಅವುಗಳ ವೈಶಿಷ್ಟ್ಯಗಳ ಪಟ್ಟಿ ಇಲ್ಲಿದೆ-

ಆಧಾರ್ ಪತ್ರ: ಇಶ್ಯೂ ದಿನಾಂಕ ಮತ್ತು ಮುದ್ರಣ ದಿನಾಂಕದೊಂದಿಗೆ ಸುರಕ್ಷಿತ QR ಕೋಡ್‌ ಜತೆ ಪೇಪರ್ ಆಧಾರಿತ ಲ್ಯಾಮಿನೇಟೆಡ್ ಪತ್ರ ಇದು. ಹೊಸ ದಾಖಲಾತಿ ಅಥವಾ ಕಡ್ಡಾಯ ಬಯೋಮೆಟ್ರಿಕ್ ಅಪ್​ಡೇಟ್ ಸಂದರ್ಭದಲ್ಲಿ ಆಧಾರ್ ಪತ್ರವನ್ನು ಸಾಮಾನ್ಯ ಅಂಚೆ ಮೂಲಕ ಉಚಿತವಾಗಿ ಕಳುಹಿಸಲಾಗುತ್ತದೆ. ಆಧಾರ್ ಪತ್ರ ಕಳೆದುಹೋದರೆ ಅಥವಾ ನಾಶವಾದರೆ ನಿವಾಸಿಯು ಆನ್‌ಲೈನ್‌ನಲ್ಲಿ ಮರುಮುದ್ರಣವನ್ನು ರೂ. 50 ಅನ್ನು ಯುಐಡಿಎಐ ಅಧಿಕೃತ ವೆಬ್‌ಸೈಟ್‌ನಿಂದ ಪಡೆಯಬಹುದು. ಮರುಮುದ್ರಿತ ಆಧಾರ್ ಪತ್ರವನ್ನು ನಿವಾಸಿಗಳಿಗೆ ಸ್ಪೀಡ್ ಪೋಸ್ಟ್ ಮೂಲಕ ತಲುಪಿಸಲಾಗುತ್ತದೆ.

ಇಆಧಾರ್: ಇಆಧಾರ್ (eAadhaar) ಎಂಬುದು ಆಧಾರ್‌ನ ಎಲೆಕ್ಟ್ರಾನಿಕ್ ರೂಪವಾಗಿದ್ದು, ಯುಐಡಿಎಐನಿಂದ ಡಿಜಿಟಲ್ ಸಹಿ ಮಾಡಲಾಗಿರುತ್ತದೆ. ಇಶ್ಯೂ ದಿನಾಂಕ ಮತ್ತು ಡೌನ್‌ಲೋಡ್ ದಿನಾಂಕದೊಂದಿಗೆ ಆಫ್‌ಲೈನ್ ಪರಿಶೀಲನೆಗಾಗಿ ಆಧಾರ್ ಸುರಕ್ಷಿತ ಕ್ಯೂಆರ್ ಕೋಡ್ ಅನ್ನು ಹೊಂದಿದೆ ಮತ್ತು ಪಾಸ್‌ವರ್ಡ್​ನಿಂದ ರಕ್ಷಿಸಲಾಗಿದೆ. ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು, ಯುಐಡಿಎಐನ ಅಧಿಕೃತ ವೆಬ್‌ಸೈಟ್‌ನಿಂದ ನಿವಾಸಿಗಳು ಸುಲಭವಾಗಿ ಇಆಧಾರ್/ಮಾಸ್ಕ್ಡ್ ಇಆಧಾರ್ ಅನ್ನು ಡೌನ್‌ಲೋಡ್ ಮಾಡಬಹುದು. ಮಾಸ್ಕ್ಡ್ ಇಆಧಾರ್ ಆಧಾರ್ ಸಂಖ್ಯೆಯ ಕೊನೆಯ 4 ಅಂಕಿಗಳನ್ನು ಮಾತ್ರ ಪ್ರದರ್ಶಿಸುತ್ತದೆ. ಪ್ರತಿ ಆಧಾರ್ ನೋಂದಣಿ ಅಥವಾ ಅಪ್​ಡೇಟ್​ನೊಂದಿಗೆ ಇಆಧಾರ್ ಸ್ವಯಂಚಾಲಿತವಾಗಿ ಜನರೇಟ್ ಆಗುತ್ತದೆ ಮತ್ತು ಅದನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು.

mAadhaar: ಎಂಆಧಾರ್​ (mAadhaar) ಎಂಬುದು ಯುಐಡಿಎಐ ಅಭಿವೃದ್ಧಿಪಡಿಸಿದ ಅಧಿಕೃತ ಮೊಬೈಲ್ ಅಪ್ಲಿಕೇಷನ್ ಆಗಿದ್ದು, ಇದನ್ನು ಮೊಬೈಲ್ ಫೋನ್​ನಲ್ಲಿ ಇನ್​ಸ್ಟಾಲ್ ಮಾಡಬಹುದು. ಮೊಬೈಲ್ ಸಾಧನದಲ್ಲಿ ಡೌನ್‌ಲೋಡ್ ಮಾಡಲು mAadhaar ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್/ಐಒಎಸ್‌ನಲ್ಲಿ ಲಭ್ಯವಿದೆ. ಆಧಾರ್ ಸಂಖ್ಯೆ ಹೊಂದಿರುವವರು ತಮ್ಮ ಆಧಾರ್ ವಿವರಗಳನ್ನು CIDRನಲ್ಲಿ ನೋಂದಾಯಿಸಿದಂತೆ ಸಾಗಿಸಲು ಇದು ಇಂಟರ್​ಫೇಸ್ ಅನ್ನು ಒದಗಿಸುತ್ತದೆ. ಇದು ಜನಸಂಖ್ಯಾ ಮಾಹಿತಿ ಮತ್ತು ಛಾಯಾಚಿತ್ರದೊಂದಿಗೆ ಆಧಾರ್ ಸಂಖ್ಯೆಯನ್ನು ಒಳಗೊಂಡಿರುತ್ತದೆ. ಇದು ಆಫ್‌ಲೈನ್ ಪರಿಶೀಲನೆಗಾಗಿ ಆಧಾರ್ ಸುರಕ್ಷಿತ ಕ್ಯೂಆರ್ ಕೋಡ್ ಅನ್ನು ಹೊಂದಿದೆ. eAadhaarನಂತೆ mAadhaar ಪ್ರತಿ ಆಧಾರ್ ನೋಂದಣಿ ಅಥವಾ ಅಪ್​ಡೇಟ್​ನೊಂದಿಗೆ ಸ್ವಯಂಚಾಲಿತವಾಗಿ ಜನರೇಟ್ ಆಗುತ್ತದೆ ಮತ್ತು ಅದನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು.

ಆಧಾರ್ ಪಿವಿಸಿ ಕಾರ್ಡ್: ಆಧಾರ್ ಪಿವಿಸಿ ಕಾರ್ಡ್ ಯುಐಡಿಎಐ ಪರಿಚಯಿಸಿದ ಇತ್ತೀಚಿನ ರೂಪವಾಗಿದೆ. ಸಾಗಿಸಲು ಸುಲಭ ಮತ್ತು ಬಾಳಿಕೆ ಬರುವ ಜೊತೆಗೆ ಪಿವಿಸಿ ಆಧಾರಿತ ಆಧಾರ್ ಕಾರ್ಡ್ ಡಿಜಿಟಲ್ ಸಹಿ ಹೊಂದಿದೆ. ಜತೆಗೆ ಆಧಾರ್ ಸುರಕ್ಷಿತ QR ಕೋಡ್ ಅನ್ನು ಫೋಟೋ ಮತ್ತು ಜನಸಂಖ್ಯಾ ವಿವರಗಳು ಹಾಗೂ ಬಹು ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ. uidai.gov.in ಅಥವಾ resident.uidai.gov.in ಮೂಲಕ ಆನ್‌ಲೈನ್‌ನಲ್ಲಿ ಆಧಾರ್ ಸಂಖ್ಯೆ, ವರ್ಚುವಲ್ ಐಡಿ ಅಥವಾ ದಾಖಲಾತಿ ಐಡಿ ಬಳಸಿ ಮತ್ತು ರೂ 50 ನಾಮಿನಲ್ ಶುಲ್ಕವನ್ನು ಪಾವತಿಸಿ ಆರ್ಡರ್ ಮಾಡಬಹುದು. ಆಧಾರ್ PVC ಕಾರ್ಡ್ ಅನ್ನು ಸ್ಪೀಡ್ ಪೋಸ್ಟ್ ಮೂಲಕ ನಿವಾಸಿಯ ವಿಳಾಸಕ್ಕೆ ತಲುಪಿಸಲಾಗುತ್ತದೆ.

ಮೂಲ: www.uidai.gov.in

ಇದನ್ನೂ ಓದಿ: Aadhaar On DigiLocker: ಡಿಜಿಲಾಕರ್​ ಜತೆ ಆಧಾರ್ ಜೋಡಿಸುವುದು ಹೇಗೆ ಹಂತಹಂತವಾದ ಮಾಹಿತಿ ಇಲ್ಲಿದೆ

Published On - 2:29 pm, Thu, 21 April 22

ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ರಾಜಕಾರಣಿಯಾಗಿರದಿದ್ದರೆ ಪರಮೇಶ್ವರ್ ಹೋಟೆಲ್ ಉದ್ಯಮಿಯಾಗುತ್ತಿದ್ದರೇ?
ರಾಜಕಾರಣಿಯಾಗಿರದಿದ್ದರೆ ಪರಮೇಶ್ವರ್ ಹೋಟೆಲ್ ಉದ್ಯಮಿಯಾಗುತ್ತಿದ್ದರೇ?
ಗೇಟ್​ ಹತ್ತಿ ಹಾರಿ ಜಮ್ಮು ಕಾಶ್ಮೀರದ ಸಿಎಂ ಒಮರ್ ಹೋಗಿದ್ದೆಲ್ಲಿಗೆ?
ಗೇಟ್​ ಹತ್ತಿ ಹಾರಿ ಜಮ್ಮು ಕಾಶ್ಮೀರದ ಸಿಎಂ ಒಮರ್ ಹೋಗಿದ್ದೆಲ್ಲಿಗೆ?
ರಾಜ್ಯದ ಅತಿ ಉದ್ದದ ಸಿಗಂದೂರು ತೂಗುಸೇತುವೆ ಲೋಕಾರ್ಪಣೆಗೊಳಿಸಿದ ಸಚಿವ ಗಡ್ಕರಿ
ರಾಜ್ಯದ ಅತಿ ಉದ್ದದ ಸಿಗಂದೂರು ತೂಗುಸೇತುವೆ ಲೋಕಾರ್ಪಣೆಗೊಳಿಸಿದ ಸಚಿವ ಗಡ್ಕರಿ
ಕೆನಡಾದ ರಸ್ತೆಯ ಪಕ್ಕದಲ್ಲಿ ನಿಂತು ಕಸ ಎಸೆದರೇ ಭಾರತೀಯ ದಂಪತಿ?
ಕೆನಡಾದ ರಸ್ತೆಯ ಪಕ್ಕದಲ್ಲಿ ನಿಂತು ಕಸ ಎಸೆದರೇ ಭಾರತೀಯ ದಂಪತಿ?