AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aadhaar On DigiLocker: ಡಿಜಿಲಾಕರ್​ ಜತೆ ಆಧಾರ್ ಜೋಡಿಸುವುದು ಹೇಗೆ ಹಂತಹಂತವಾದ ಮಾಹಿತಿ ಇಲ್ಲಿದೆ

ಆಧಾರ್​ ಅನ್ನು ಡಿಜಿಲಾಕರ್​ ಜತೆ ಜೋಡಣೆ ಮಾಡುವುದು ಹೇಗೆ ಎಂಬುದರ ಬಗ್ಗೆ ಹಂತ ಹಂತವಾದ ಮಾಹಿತಿ ಇಲ್ಲಿದೆ. ಹೀಗೆ ಮಾಡುವ ಮೂಲಕ ಜೋಡಣೆ ಮಾಡಬಹುದು.

Aadhaar On DigiLocker: ಡಿಜಿಲಾಕರ್​ ಜತೆ ಆಧಾರ್ ಜೋಡಿಸುವುದು ಹೇಗೆ ಹಂತಹಂತವಾದ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Apr 06, 2022 | 11:31 AM

Share

ಎಲೆಕ್ಟ್ರಾನಿಕ್ಸ್ ಮತ್ತು ಇನ್ಫರ್ಮೇಷನ್ ಟೆಕ್ನಾಲಜಿ (MeitY) ಸಚಿವಾಲಯವು ಡಿಜಿಟಲ್ ಇಂಡಿಯಾ ಕಾರ್ಪೊರೇಷನ್ (DIC) ಅಡಿ 2015ನೇ ಇಸವಿಯಲ್ಲಿ ಡಿಜಿಲಾಕರ್ (DigiLocker) ಆರಂಭಿಸಿತು. ಇದೊಂದು ಡಿಜಿಟಲ್ ಪ್ಲಾಟ್​ಫಾರ್ಮ್ ಆಗಿದ್ದು, ಇದರಲ್ಲಿ ಜನರು ತಮ್ಮ ಎಲೆಕ್ಟ್ರಾನಿಕ್ ದಾಖಲಾತಿಗಳಾದ ಆಧಾರ್, ಪ್ಯಾನ್​ನಂಥದ್ದರ ನಕಲನ್ನು ಇರಿಸಬಹುದು. ಭೌತಿಕ ದಾಖಲಾತಿಗಳ ಬಳಕೆಯನ್ನು ಕಡಿತಗೊಳಿಸಬೇಕು ಹಾಗೂ ಎಲೆಕ್ಟ್ರಾನಿಕ್ ದಾಖಲಾತಿಗಳ ಸಂಗ್ರಹ ಉತ್ತೇಜಿಸಬೇಕು ಎಂಬ ಗುರಿಯೊಂದಿಗೆ ಇದನ್ನು ಆರಂಭಿಸಲಾಯಿತು. ಡಿಜಿಲಾಕರ್​ನಲ್ಲಿ ಸಂಗ್ರಹ ಆಗುವ ದಾಖಲಾತಿಗಳು ಭೌತಿಕ ದಾಖಲೆಗಳಂತೆಯೇ ಮಾನ್ಯ ಎಂಬುದನ್ನು ಇಲ್ಲಿ ಗಮನಿಸಬೇಕು. ಇದೀಗ ಯುಐಡಿಎಐ ಜತೆಗೆ ಕೈಜೋಡಿಸಿದೆ. 12 ಅಂಕಿಯ ವಿಶಿಷ್ಟ ಸಂಖ್ಯೆಯ ಆಧಾರ್​ ಅನ್ನು ವಿತರಿಸುವ ಸಂಸ್ಥೆ ಇದು. ಸಹಭಾಗಿತ್ವ ವಹಿಸಿಕೊಳ್ಳುವ ಮೂಲಕ ಏನು ಗುರಿ ಅಂದರೆ, ಬಳಕೆದಾರರು ತಮ್ಮ ಡಿಜಿಲಾಕರ್ ಖಾತೆಗೆ ಆಧಾರ್​ ಜೋಡಣೆ ಒಂದು ಸಲ ಮಾಡಿದರೆ ಸಾಕಾಗುತ್ತದೆ. ಡಿಜಿಟಲ್ ಆಧಾರ್ ಸಿಗುತ್ತದೆ. ಈ ಮೂಲಕ ಡಿಜಿಲಾಕರ್ ಬಳಸಿ ಜನರು ಯಾವುದೇ ಸಂಸ್ಥೆಯ ತಮ್ಮ ದಾಖಲೆಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಸುಲಭವಾಗಿ ಹಂಚಿಕೊಳ್ಳಬಹುದು. ಇದು ಹೇಗೆ ಅಂದರೆ, ಗೂಗಲ್ ಕ್ಲೌಡ್​ನಲ್ಲಿ ಡೇಟಾ ಸಂಗ್ರಹಿಸಿ, ಹಂಚಿಕೊಂಡಂತೆ.

ಡಿಜಿಲಾಕರ್​ಗೆ ಸೈನ್ ಅಪ್ ಮಾಡುವುದು ಹೇಗೆ ಎಂಬ ವಿವರ ಇಲ್ಲಿದೆ ವೆಬ್​ಸೈಟ್​ಗೆ ಭೇಟಿ ನೀಡಿ ಮತ್ತು ಸೈನ್-ಅಪ್ ಮೇಲೆ ಕ್ಲಿಕ್ ಮಾಡಿ ಹಾಗೂ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ ಮತ್ತಿತರ ಮಾಹಿತಿಗಳನ್ನು ನಮೂದಿಸಿ. ಒಟಿಪಿ ಮತ್ತು ಅದರ ಬೆನ್ನಿಗೆ ಎರಡು ಹಂತದ ದೃಢೀಕರಣಕ್ಕೆ ಭದ್ರತಾ ಪಿನ್ (PIN) ಕಳುಹಿಸುವ ಮೂಲಕ ಸಂಖ್ಯೆಯನ್ನು ದೃಢೀಕರಿಸಬೇಕು. ಇದು ನಿಮ್ಮ ಡಿಜಿಲಾಕರ್ ಖಾತೆಯನ್ನು ಸೃಷ್ಟಿಸುತ್ತದೆ.

ಡಿಜಿಲಾಕರ್ ಜತೆಗೆ ಆಧಾರ್ ಜೋಡಣೆ ಮಾಡುವ ಹಂತಗಳು ಹಂತ 1: ನಿಮ್ಮ ಡಿಜಿಟಲ್ ಖಾತೆಗೆ ಲಾಗ್ ಇನ್ ಆಗಬೇಕು

ಹಂತ 2: ಡ್ಯಾಶ್​ಬೋರ್ಡ್​ನಲ್ಲಿ ಆಧಾರ್​ ಸಂಖ್ಯೆ ನಮೂದಿಸಿ ಜೋಡಣೆ ಮಾಡುವುದಕ್ಕೆ ಆಯ್ಕೆ ಕಾಣಿಸಿಕೊಳ್ಳುತ್ತದೆ. ಆಧಾರ್ ಸಂಖ್ಯೆಯನ್ನು ನಮೂದಿಸಿದ ಮೇಲೆ ಚೆಕ್​ ಬಾಕ್ಸ್ ಆರಿಸಿಕೊಳ್ಳಬೇಕು.

ಹಂತ 3: “Link Now” ಬಟನ್ ಮೇಲೆ ಕ್ಲಿಕ್ ಮಾಡಬೇಕು

ಹಂತ 4: ನಿಮ್ಮ ಮೊಬೈಲ್​ನಲ್ಲಿ ಪಡೆದ ಒಟಿಪಿ ನಮೂದಿಸಬೇಕು

ಹಂತ 5: “Verify” ಬಟನ್ ಮೇಲೆ ಕ್ಲಿಕ್ ಮಾಡಬೇಕು

ಆಧಾರ್ ಕಾರ್ಡ್ ಜತೆಗೆ ನಿಮ್ಮ ಮೊಬೈಲ್ ಸಂಖ್ಯೆ ಜೋಡಣೆ ಆಗಿಲ್ಲ ಅಂತಾದಲ್ಲಿ ನಿಮ್ಮ ಆಧಾರ್​ ಅನ್ನು ಡಿಜಿಲಾಕರ್ ಜತೆಗೆ ಜೋಡಣೆ ಮಾಡುವುದಕ್ಕೆ ಸಾಧ್ಯವಿಲ್ಲ.

ನಿಮ್ಮ ಡಿಜಿಲಾಕರ್ ಖಾತೆಯು ಆಧಾರ್ ಜತೆಗೆ ಯಶಸ್ವಿಯಾಗಿ ಜೋಡಣೆ ಆಗುತ್ತದೆ. ಯಶಸ್ವಿಯಾಗಿ ಆಧಾರ್ ಜೋಡಣೆ ಆದ ಮೇಲೆ ಡಿಜಿಲಾಕರ್ ಪ್ರೊಫೈಲ್ ವಿಭಾಗದಲ್ಲಿ ನಿಮ್ಮ ಆಧಾರ್ ಪ್ರೊಫೈಲ್ ಅನ್ನು ನೋಡಲು ಸಾಧ್ಯ.

ಒಂದು ಸಲ ಆಧಾರ್ ಜೋಡಣೆ ಆದ ಮೇಲೆ ವಿತರಣೆಯಾದ ದಾಖಲೆಯಾದ ವಿಭಾಗದಲ್ಲಿ ಆಧಾರ್ ಕಾರ್ಡ್ ನೋಡಬಹುದು. ಪಿಡಿಎಫ್ ಐಕಾನ್ ಅನ್ನು ಯಾವುದೇ ಸಮಯದಲ್ಲಿ ಕ್ಲಿಕ್ ಮಾಡಿ ಆಧಾರ್ ಕಾರ್ಡ್ ಡೌನ್​ಲೋಡ್ ಮಾಡಬಹುದು.

ಇದನ್ನೂ ಓದಿ: PAN Card: ಡಿಜಿಲಾಕರ್​ನಲ್ಲಿ PAN ಕಾರ್ಡ್​ ಸ್ಟೋರ್ ಹೇಗೆ?

ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಂದು ಆಧಾರ್ ಕಾರ್ಡ್​ಗೆ 2 ಚೀಲ ಯೂರಿಯಾ
ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಂದು ಆಧಾರ್ ಕಾರ್ಡ್​ಗೆ 2 ಚೀಲ ಯೂರಿಯಾ
ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು
‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್