Jio 4G in MM Hills: ಮಲೆ ಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ಇನ್ಮುಂದೆ ಜಿಯೋ 4ಜಿ ಸೇವೆ ನಿತ್ಯೋತ್ಸವ

Male Mahadeshwara Betta: ಎಂಎಂ ಹಿಲ್ಸ್‌ಗೆ ಆಗಮಿಸುವ ತೀರ್ಥಯಾತ್ರಿಗಳು ಈಗ ಜಿಯೋ ಡಿಜಿಟಲ್ ಲೈಫ್ ಅನ್ನು ಇನ್ನಷ್ಟು ಅನುಕೂಲಕರವಾಗಿ ಬಳಸಬಹುದು. ಜಿಯೋದ ಕೈಗೆಟುಕುವ ದರದ ಪ್ಲಾನ್‍ಗಳು ಇದಕ್ಕೆ ಸಾಥ್​ ನೀಡಲಿವೆ. ಚಂದಾದಾರರು ತಮ್ಮ ಡಿಜಿಟಲ್ ಅಗತ್ಯಗಳಿಗೆ ಸರಿಹೊಂದುವಂತೆ ಪ್ಲಾನ್‍ ಗಳನ್ನು ಆರಿಸಿಕೊಳ್ಳಬಹುದು.

Jio 4G in MM Hills: ಮಲೆ ಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ಇನ್ಮುಂದೆ ಜಿಯೋ 4ಜಿ ಸೇವೆ ನಿತ್ಯೋತ್ಸವ
Jio 4G in MM Hills: ಮಲೆ ಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ಇನ್ನು ಮುಂದೆ ಜಿಯೋ 4ಜಿ ಸೇವೆ ನಿತ್ಯೋತ್ಸವ
Follow us
| Updated By: ಸಾಧು ಶ್ರೀನಾಥ್​

Updated on:Apr 06, 2022 | 2:17 PM

ಚಾಮರಾಜನಗರ: ಮೊಬೈಲ್ ದೂರವಾಣಿ ಸಂಪರ್ಕ ಅಂತರ್ಜಾಲ ಕಂಪನಿ ರಿಲಯನ್ಸ್ ಜಿಯೋ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಐತಿಹಾಸಿಕ, ಪೌರಾಣಿಕ ಮಲೆ ಮಹದೇಶ್ವರ ಬೆಟ್ಟದಲ್ಲಿ ತನ್ನ 4ಜಿ ಸೇವೆಯನ್ನು ಪ್ರಾರಂಭಿಸಿದೆ. ಮಲೆ ಮಹದೇಶ್ವರ ಬೆಟ್ಟವು (Male Mahadeshwara Hills) ದಟ್ಟ ಅರಣ್ಯ ಶ್ರೇಣಿಯಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ ಮತ್ತು ಇದು ಸಮುದ್ರ ಮಟ್ಟದಿಂದ 3,200 ಅಡಿ ಎತ್ತರದಲ್ಲಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಈ ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ಇದುವರೆಗೂ ಸಮರ್ಪಕ ಮೊಬೈಲ್‍ ನೆಟ್‍ ವರ್ಕ್‍ ಸಂಪರ್ಕ ಇರಲಿಲ್ಲ. ಇದರಿಂದಾಗಿ ಸ್ಥಳೀಯ ಜನರಿಗೆ ಮಾತ್ರವಲ್ಲ, ಬೆಟ್ಟಕ್ಕೆ ದೂರ ದೂರ ಪ್ರದೇಶಗಳಿಂದ ಆಗಮಿಸುವ ಭಕ್ತಾದಿಗಳಿಗೆ ದೂರವಾಣಿ ಸಂವಹನಕ್ಕೆ ಬಹಳ ತೊಂದರೆಯಾಗಿತ್ತು.

ಇದನ್ನರಿತ ಜಿಯೋ 4ಜಿ ಡಿಜಿಟಲ್‍ ಸಂಸ್ಥೆಯು ತನ್ನ ಸೇವೆಯನ್ನು (Jio True 4G Digital Life) ಮಲೆ ಮಹದೇಶ್ವರ ಬೆಟ್ಟದ ಮೇಲೆ ಆರಂಭಿಸಿದೆ. ಇದರಿಂದ ಆ ಪ್ರದೇಶದ ಜನರು ಸಂವಹನ ಸಾಧಿಸಲು, ವಿದ್ಯಾರ್ಥಿಗಳು ಆನ್‍ ಲೈನ್‍ ಪಾಠ ಆಲಿಸಲು, ಯುವ ಜನರು ತಮ್ಮ ಉದ್ಯೋಗಾವಕಾಶಗಳನ್ನು ತಾವಿರುವ ಸ್ಥಳದಿಂದಲೇ ನಿರ್ವಹಿಸಲು ಸಹಾಯಕವಾಗಿದೆ.

ನೆಟ್‍ ವರ್ಕ್‍ ಸಮಸ್ಯೆಯಿಂದ ಬೆಟ್ಟಕ್ಕೆ ಬರುವ ಭಕ್ತಾದಿಗಳು ತಮ್ಮ ಮನೆಗಳಿಗೆ ಕರೆ ಮಾಡಲು ಅಥವಾ ಆನ್‍ಲೈನ್‍ ಸಂಪರ್ಕ ಸಾಧಿಸಲು ಕಷ್ಟಪಡಬೇಕಾಗಿತ್ತು. ಈಗ ಜಿಯೋ 4ಜಿ ನೆಟ್‍ ವರ್ಕ್ ವ್ಯವಸ್ಥೆಯಿಂದಾಗಿ ಸರಾಗ ಸಂವಹನಕ್ಕೆ ನೆರವಾಗಿದೆ. ಸ್ಥಳೀಯ ಕುಟುಂಬಗಳಿಗೂ ಇದು ಬಹಳ ಪ್ರಯೋಜನಕಾರಿ. ಗ್ರಾಹಕರ ಸಂತೋಷವೇ ಜಿಯೋದ ಮೂಲಾಧಾರ ಸ್ತಂಭ. ಮಲೆ ಮಹದೇಶ್ವರ ಬೆಟ್ಟದಂಥ ದುರ್ಗಮ ಪ್ರದೇಶದಲ್ಲಿ ಸಂಪರ್ಕ ನೀಡುವ ಮೂಲಕ ಜಿಯೋ, ಜಿಲ್ಲೆಯಾದ್ಯಂತ ತನ್ನ ಸದೃಢ ನೆಟ್‌ವರ್ಕ್ ಅನ್ನು ಮತ್ತಷ್ಟು ಬಲಪಡಿಸಿದೆ. ಮುಂದೆಯೂ ಮಲೆ ಮಹದೇಶ್ವರ ಬೆಟ್ಟದ ಯಾತ್ರಾರ್ಥಿಗಳಿಗೆ ಅಡಚಣೆ ರಹಿತ ಸೇವೆಯನ್ನು ಸದಾ ನೀಡುತ್ತದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಎಂಎಂ ಹಿಲ್ಸ್‌ಗೆ ಆಗಮಿಸುವ ತೀರ್ಥಯಾತ್ರಿಗಳು ಈಗ ಜಿಯೋ ಡಿಜಿಟಲ್ ಲೈಫ್ ಅನ್ನು ಇನ್ನಷ್ಟು ಅನುಕೂಲಕರವಾಗಿ ಬಳಸಬಹುದು. ಜಿಯೋದ ಕೈಗೆಟುಕುವ ದರದ ಪ್ಲಾನ್‍ಗಳು ಇದಕ್ಕೆ ಸಾಥ್​ ನೀಡಲಿವೆ. ಚಂದಾದಾರರು ತಮ್ಮ ಡಿಜಿಟಲ್ ಅಗತ್ಯಗಳಿಗೆ ಸರಿಹೊಂದುವಂತೆ ಪ್ಲಾನ್‍ ಗಳನ್ನು ಆರಿಸಿಕೊಳ್ಳಬಹುದು.

ಇನ್ನು,ಜಿಯೋ ಡಿಜಿಟಲ್ ಭಾರತಕ್ಕೆಅಗತ್ಯವಿರುವ ವೇಗವರ್ಧಕವಾಗಿದೆ. ತನ್ನ ಸೇವೆಗಳ ಪ್ರಾರಂಭದಿಂದಲೂ, ಜಿಯೋ ಡಿಜಿಟಲ್ ಕ್ರಾಂತಿ ಮಾಡಿದೆ ಮತ್ತು ಪ್ರತಿಯೊಬ್ಬ ಭಾರತೀಯನಿಗೂ ಕೈಗೆಟುಕುವ ದರದಲ್ಲಿ ಡೇಟಾ ಬಲ ನೀಡುತ್ತಾ ಬಂದಿದೆ. ಈ ಡಿಜಿಟಲ್ ಕ್ರಾಂತಿಯಿಂದಾಗಿ ದೇಶದಲ್ಲಿ ದೂರ ಸಂಪರ್ಕ ನೆಟ್ ವರ್ಕ್ ದೊರಕದ ಕುಗ್ರಾಮಗಳಿಗೂ ಸಂಪರ್ಕ ಒದಗಿಸಿದಂತಾಗಿದೆ.

Also Read: Hampi: ವಿಶ್ವ ಪರಂಪರೆಯ ತಾಣವಾದ ವಿಜಯನಗರ ಸಾಮ್ರಾಜ್ಯದ ಮೇಲೆ ಕಣ್ಣಿಟ್ಟ ಜಿಯೋ! ಹಂಪಿಯಲ್ಲಿನ್ನು ನೈಜ 4G ಡಿಜಿಟಲ್ ಲೈಫ್‌! Also Read: Kannada Language in Colleges: ಕಾಲೇಜು ಹಂತದಲ್ಲಿ ಕನ್ನಡ ಕಲಿಕೆ ಕಡ್ಡಾಯ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

Published On - 2:12 pm, Wed, 6 April 22