PAN Card: ಡಿಜಿಲಾಕರ್​ನಲ್ಲಿ PAN ಕಾರ್ಡ್​ ಸ್ಟೋರ್ ಹೇಗೆ?

ಭಾರತದ ನಾಗರಿಕರು ತಮ್ಮ ಮುಖ್ಯವಾದ ದಾಖಲಾತಿಗಳನ್ನು ಸಂಗ್ರಹಿಸುವುದಕ್ಕೆ ಡಿಜಿಲಾಕರ್ ಸಹಾಯ ಮಾಡುತ್ತದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಕೂಡ ಡಿಜಿಲಾಕರ್ ಜತೆಗೆ ಸಹಭಾಗಿ ಆಗಿದ್ದು, PAN ಕಾರ್ಡ್ ಇಂಟಿಗ್ರೇಷನ್ ವ್ಯವಸ್ಥೆ ಮಾಡಿದೆ. PAN ಕಾರ್ಡ್ ಮಾಹಿತಿಯನ್ನು ಡಿಜಿಲಾಕರ್​ನಲ್ಲಿ ಸಂಗ್ರಹಿಸುವ ಮಾಹಿತಿ ಇಲ್ಲಿದೆ.

PAN Card: ಡಿಜಿಲಾಕರ್​ನಲ್ಲಿ PAN ಕಾರ್ಡ್​ ಸ್ಟೋರ್ ಹೇಗೆ?
ಪ್ರಾತಿನಿಧಿಕ ಚಿತ್ರ
Follow us
| Edited By: Srinivas Mata

Updated on:Jul 20, 2021 | 12:57 PM

ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಅಥವಾ ಒಂದು ದೇಶದಿಂದ ಮತ್ತೊಂದಕ್ಕೆ ತೆರಳುವಾಗ ಎಲ್ಲಿ ಕಳೆದುಕೊಂಡು ಬಿಡ್ತಿವೋ ಎಂಬ ಆತಂಕದಲ್ಲಿ ವೈಯಕ್ತಿಕವಾದ ಕೆಲವು ಮುಖ್ಯ ದಾಖಲೆಗಳನ್ನು ಒಯ್ಯುವುದಿಲ್ಲ. ಇದಕ್ಕೆ ಪರಿಹಾರ ಅನ್ನೋ ಹಾಗೆ ಡಿಜಿ ಲಾಕರ್ ಇದೆ. ವೈಯಕ್ತಿಕ ದಾಖಲಾತಿಗಳನ್ನು ಭೌತಿಕವಾಗಿ (Physical) ತೆಗೆದುಕೊಂಡು ಹೋಗಬೇಕು ಅಂತೇನೂ ಇಲ್ಲ. ಸರ್ಕಾರಿ ಸಂಸ್ಥೆಗಳೆಲ್ಲದರ ಇ-ದಾಖಲಾತಿಗಳಿಗೆ ಸಂಪರ್ಕ ಒದಗಿಸುತ್ತದೆ ಡಿಜಿ ಲಾಕರ್. ಡಿಜಿ ಲಾಕರ್​ನಲ್ಲಿ ಡ್ರೈವಿಂಗ್ ಲೈಸೆನ್ಸ್, PAN ಕಾರ್ಡ್, ಮತದಾರ ಗುರುತಿನ ಚೀಟಿ, ಪಾಲಿಸಿ ದಾಖಲಾತಿಗಳು ಮುಂತಾದವನ್ನು ಸಂಗ್ರಹಿಸಬಹುದು. ಡಿಜಿಲಾಕರ್​ ಅಕೌಂಟ್​ನಲ್ಲಿ ಒಮ್ಮೆ ಸೈನ್ ಅಪ್ ಮಾಡಿದರೆ ದಾಖಲಾತಿಗಳು ಸುರಕ್ಷಿತ ಮತ್ತು ನಿರ್ದಿಷ್ಟ ಕ್ಲೌಡ್ ಸ್ಟೋರೇಜ್​ಗೆ ಸುಲಭವಾಗಿ ಅಪ್​ಲೋಡ್ ಆಗುತ್ತದೆ; ಆಧಾರ್​ ಕಾರ್ಡ್​ನಂತೆ.

ಭಾರತದ ನಾಗರಿಕರು ತಮ್ಮ ಮುಖ್ಯವಾದ ದಾಖಲಾತಿಗಳನ್ನು ಸಂಗ್ರಹಿಸುವುದಕ್ಕೆ ಡಿಜಿಲಾಕರ್ ಸಹಾಯ ಮಾಡುತ್ತದೆ. ಈ ಪ್ರಕ್ರಿಯೆಯ ಮೂಲಕ ಕಾಗದ-ಪತ್ರಗಳ ಕೆಲಸ ಕಡಿಮೆ ಆಗುತ್ತದೆ. ಜತೆಗೆ ದಾಖಲೆ ವಿತರಿಸುವ ಸಂಸ್ಥೆಗಳ ಜತೆಗೆ ನೇರವಾಗಿ, ರಿಯಲ್​ ಟೈಮ್​ನಲ್ಲಿ ಸಮಗ್ರತೆ ಸಾಧಿಸುತ್ತದೆ. ಬಳಕೆದಾರರ ಸಹಮತ ಪಡೆದುಕೊಂಡು, ವಿತರಣೆ ಮಾಡಿದವರಿಂದಲೇ ಸರ್ಕಾರದ ಸಂಸ್ಥೆಗಳು ಪರಿಶೀಲನೆ ಮಾಡುತ್ತವೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಕೂಡ ಡಿಜಿಲಾಕರ್ ಜತೆಗೆ ಸಹಭಾಗಿ ಆಗಿದ್ದು, PAN ಕಾರ್ಡ್ ಇಂಟಿಗ್ರೇಷನ್ ವ್ಯವಸ್ಥೆ ಮಾಡಿದೆ.

ಡಿಜಿಲಾಕರ್​ನಲ್ಲಿ PAN ಸ್ಟೋರ್ ಮಾಡವುದಕ್ಕೆ ಹಂತಹಂತವಾದ ವಿವರಣೆ ಇಲ್ಲಿದೆ: ಹಂತ 1. ಡಿಜಿಲಾಕರ್ ಅಧಿಕೃತ ವೆಬ್​ಸೈಟ್: https://www.digilocker.gov.in/dashboard ಕ್ಲಿಕ್ ಮಾಡಬೇಕು. ಹಂತ 2. ಡಿಜಿಲಾಕರ್ ಖಾತೆಗೆ ಲಾಗ್ ಇನ್ ಆಗಬೇಕು. ಹಂತ 3. ಆ ನಂತರ ಎಡ ಭಾಗದಲ್ಲಿ ಇರುವ “issued documents”ಗೆ ತೆರಳಬೇಕು. ಹಂತ 4. ವಿತರಣೆ ಆದ ದಾಖಲಾತಿಗಳು ನೋಂದಾಯಿತ ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳಿಂದ ನೇರವಾಗಿ ಡಿಜಿ ಲಾಕರ್​ಗೆ ಬರುತ್ತದೆ. ಅಥವಾ ಅದನ್ನು ಕೆಲವು ಸಹಭಾಗಿಗಳ ಮೂಲಕ ತೆಗೆದುಕೊಳ್ಳಬೇಕಾಗುತ್ತದೆ ಮತ್ತು ವಿತರಣೆಯಾದ ದಾಖಲಾತಿಗಳಿಗೆ ಅವುಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು. ಹಂತ 5. ದಾಖಲಾತಿಗಳನ್ನು ತೆಗೆಯಲು ಲಿಂಕ್​ ಕಾಣಿಸುತ್ತದೆ ಮತ್ತು ಅದರ ಮೇಲೆ ಕ್ಲಿಕ್ ಮಾಡಬೇಕು. ಹಂತ 6. ಸಹಭಾಗಿಯ ಡೇ ಡ್ರಾಪ್​ಡೌನ್​ನಲ್ಲಿ “Income Tax Department” ಆಯ್ಕೆ ಮಾಡಬೇಕು. ಹಂತ 7: ದಾಖಲಾತಿ ಬಗೆಯಲ್ಲಿ “PAN Card” ಆರಿಸಿಕೊಳ್ಳಬೇಕು. ಹಂತ 8: ಆಧಾರ್ ಮಾಹಿತಿ ಮೂಲಕ ಜನ್ಮ ದಿನಾಂಕ, ಹೆಸರಿನ ಮಾಹಿತಿ ಭರ್ತಿ ಆಗಿರುತ್ತದೆ. PAN ಮಾಹಿತಿ ಜತೆಗೆ ಪರಿಶೀಲನೆ ಮಾಡಬೇಕು. ಹಂತ 9: ಈಗ PAN ಸಂಖ್ಯೆಯನ್ನು ನಮೂದಿಸಿ ಮತ್ತು ಡ್ರಾಪ್​ ಡೌನ್​ನಿಂದ ಲಿಂಗ- ಆಯ್ಕೆ ಮಾಡಬೇಕು. ಹಂತ 10: ಒಪ್ಪಿಗೆಯ ಬಾಕ್ಸ್​ಗೆ ಟಿಕ್​ ಮಾಡಿ, Get Document ಎಂಬುದರ ಮೇಲೆ ಕ್ಲಿಕ್ ಮಾಡಬೇಕು. ಹಂತ 11: ಅಂತಿಮವಾಗಿ PAN ಮಾಹಿತಿ ಡಿಜಿಲಾಕರ್​ನಲ್ಲಿ ಸ್ಟೋರ್ ಆಗುತ್ತದೆ ಮತ್ತು Issued documents ಅಡಿಯಲ್ಲಿ ಲಿಂಕ್​ಗೆ ಸಂಪರ್ಕ ಸಿಗುತ್ತದೆ.

ಇದನ್ನೂ ಓದಿ: ಡಿಜಿ ಲಾಕರ್ ಹಾಗೂ ಎಂಪರಿವಾಹನ್ ಆ್ಯಪ್​ಗಳ ಮೂಲಕವೇ ಪೊಲೀಸರಿಗೆ ಡ್ರೈವಿಂಗ್ ಲೈಸೆನ್ಸ್, ಆರ್ ಸಿ ಬುಕ್ ತೋರಿಸಿ; ಭೌತಿಕ ದಾಖಲೆ ಅಗತ್ಯವಿಲ್ಲ

(How to save PAN card details in DigiLocker, which is available for Indian citizens. Here is the step by step details)

Published On - 12:52 pm, Tue, 20 July 21

ತಾಜಾ ಸುದ್ದಿ