ಹರ್ಯಾಣದಲ್ಲಿ ನಾಲ್ವರು ಶಂಕಿತ ಖಲಿಸ್ತಾನಿ ಉಗ್ರರ ಬಂಧನ; ಇವರಿಗೆ ಪಾಕ್​​ನಿಂದ ಶಸ್ತ್ರಾಸ್ತ್ರ ಪೂರೈಕೆಯಾಗುತ್ತಿತ್ತು ಎಂದ ಭದ್ರತಾ ಸಿಬ್ಬಂದಿ

ಆರೋಪಿಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ಹರ್ಜಿಂದರ್ ಸಿಂಗ್​, ಮೂಲತಃ  ಪಂಜಾಬ್​​ನ ತರ್ನ್​ ತಾರನ್​ ಜಿಲ್ಲೆಯವನು. 11ನೇ ವರ್ಷದಲ್ಲಿದ್ದಾಗ ತನ್ನ ಕುಟುಂಬದ ಜತೆ ಮಹಾರಾಷ್ಟ್ರದ ನಂದೇಡ್​ ಸಾಹೀಬ್​​ಗೆ ಸ್ಥಳಾಂತರಗೊಂಡಿದ್ದಾನೆ.

ಹರ್ಯಾಣದಲ್ಲಿ ನಾಲ್ವರು ಶಂಕಿತ ಖಲಿಸ್ತಾನಿ ಉಗ್ರರ ಬಂಧನ; ಇವರಿಗೆ ಪಾಕ್​​ನಿಂದ ಶಸ್ತ್ರಾಸ್ತ್ರ ಪೂರೈಕೆಯಾಗುತ್ತಿತ್ತು ಎಂದ ಭದ್ರತಾ ಸಿಬ್ಬಂದಿ
ಪಂಜಾಬ್​​ನಲ್ಲಿ ಖಲಿಸ್ತಾನಿ ಉಗ್ರರ ಬಂಧನ
Follow us
TV9 Web
| Updated By: Lakshmi Hegde

Updated on:May 05, 2022 | 4:47 PM

ಹರ್ಯಾಣದ ಕರ್ನಲ್​ನಲ್ಲಿ ನಾಲ್ವರು ಖಲಿಸ್ತಾನಿ ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಇವರಿಗೆ ಡ್ರೋನ್​ ಮೂಲಕ ಶಸ್ತ್ರಾಸ್ತ್ರ ಪೂರೈಕೆಯಾಗುತ್ತಿತ್ತು ಎಂದು ಭದ್ರತಾ ಸಿಬ್ಬಂದಿ ಹೇಳಿದ್ದಾರೆ. ಶಂಕಿತರನ್ನು ಗುರ್​ಪ್ರೀತ್​, ಅಮಂದೀಪ್​, ಪರ್ಮಿಂದರ್​ ಮತ್ತು ಭೂಪಿಂದರ್​ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಪಂಜಾಬ್​​ನವರು ಎನ್ನಲಾಗಿದೆ.  ಬಂಧಿತರಿಂದ ಪಿಸ್ತೂಲ್​, 21 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರಿಗೆಲ್ಲ ಪಾಕಿಸ್ತಾನದ ಫೀರೋಜ್​​ಪುರ ಜಿಲ್ಲೆಯಿಂದ ಖಲಿಸ್ತಾನಿ ಉಗ್ರ ಹರ್ಜಿಂದರ್ ಸಿಂಗ್​ ರಿಂಡಾ ಶಸ್ತ್ರಾಸ್ತ್ರ ಒದಗಿಸುತ್ತಿದ್ದ. ಡ್ರೋನ್​ ಮೂಲಕ ಶಸ್ತ್ರಾಸ್ತ್ರಗಳನ್ನು ತಂದು ಕೊಡಲಾಗುತ್ತಿತ್ತು ಎಂದೂ ಅಧಿಕಾರಿಯೊಬ್ಬರು ಹೇಳಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ. 

ಕರ್ನಲ್​ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಆರೋಪಿಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ಹರ್ಜಿಂದರ್ ಸಿಂಗ್​, ಮೂಲತಃ  ಪಂಜಾಬ್​​ನ ತರ್ನ್​ ತಾರನ್​ ಜಿಲ್ಲೆಯವನು. 11ನೇ ವರ್ಷದಲ್ಲಿದ್ದಾಗ ತನ್ನ ಕುಟುಂಬದ ಜತೆ ಮಹಾರಾಷ್ಟ್ರದ ನಂದೇಡ್​ ಸಾಹೀಬ್​​ಗೆ ಸ್ಥಳಾಂತರಗೊಂಡಿದ್ದಾನೆ. 18ನೇ ವರ್ಷದಲ್ಲಿಯೇ ತರ್ನ್​ ತಾರನ್​​ನಲ್ಲಿ ತನ್ನ ಸಂಬಂಧಿಯೊಬ್ಬರನ್ನು ಕೊಲ್ಲುವ ಮೂಲಕ ಪೊಲೀಸರ ವಾಂಟೆಡ್​ ಪಟ್ಟಿಯಲ್ಲಿ ಸೇರಿಕೊಂಡಿದ್ದ. ನಾಂದೇಡ್ ಸಾಹೀಬ್​​ನಲ್ಲಿ ಸ್ಥಳೀಯ ವ್ಯಾಪಾರಿಗಳಿಂದ ಹಣ ಸುಲಿಗೆ ಮಾಡುತ್ತಿದ್ದ. ಈ ವೇಳೆ ಇಬ್ಬರನ್ನು ಹತ್ಯೆ ಗೈದಿದ್ದ. ನಂತರ ಪಾಕಿಸ್ತಾನಕ್ಕೆ ಹೋಗಿ ಅಡಗಿದ್ದಾನೆ. ಈಗಲೂ ಕೂಡ ಆತ ಅಲ್ಲಿಯೇ ಇದ್ದಾನೆ. ಆದರೆ ಈತ ಪಾಕಿಸ್ತಾನಕ್ಕೆ ನುಸುಳಿದ್ದೂ ಕೂಡ ಅಕ್ರಮವಾಗಿಯೇ.  ನಕಲಿ ಪಾಸ್​ಪೋರ್ಟ್​ ಮೂಲಕ ನೇಪಾಳಕ್ಕೆ ಹೋಗಿ, ಅಲ್ಲಿಂದ ಪಾಕಿಸ್ತಾನಕ್ಕೆ ಹೋಗಿದ್ದಾನೆ ಎಂದೂ ಹೇಳಲಾಗಿದೆ.

ರಿಂಡಾ ಈಗ ಲಾಹೋರ್​​ನಲ್ಲಿ ಇದ್ದರೂ ಪಂಜಾಬ್​​ ಮೂಲದ ಖಲಿಸ್ತಾನಿ ಉಗ್ರರರಿಗೆ ಸಹಾಯ ಮಾಡುತ್ತಿದ್ದಾನೆ. ಅವರನ್ನು ಪ್ರಚೋದಿಸುವ ಪ್ರಯತ್ನದಲ್ಲಿದ್ದಾನೆ. ಈ ಮೂಲಕ ಪಂಜಾಬ್​​ನಲ್ಲಿ ಖಲಿಸ್ತಾನಿ ಹೋರಾಟವನ್ನು ಹೆಚ್ಚಿಸುವ ಪ್ರಯತ್ನದಲ್ಲಿ ತೊಡಗಿದ್ದಾನೆ. ಈಗ  ಇವರಿಗೂ ಆತನೇ ಶಸ್ತ್ರಾಸ್ತ್ರ ಪೂರೈಸುತ್ತಿರುವ ಬಗ್ಗೆ ಬಲವಾದ ಶಂಕೆ ವ್ಯಕ್ತವಾಗಿದೆ  ಎಂದು ಭದ್ರತಾ ಸಿಬ್ಬಂದಿ ಹೇಳಿದ್ದಾರೆ.

ಇದನ್ನೂ ಓದಿ: Viral Video: ನಡುರಸ್ತೆಯಲ್ಲಿ ಮಹಿಳೆಗೆ ಥಳಿಸಿ, ಚಲಿಸುತ್ತಿದ್ದ ಕಾರಲ್ಲಿ ಎಳೆದೊಯ್ದ ಯುವಕರು; ಶಾಕಿಂಗ್ ವಿಡಿಯೋ ವೈರಲ್

Published On - 2:32 pm, Thu, 5 May 22

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ