Viral Video: ನಡುರಸ್ತೆಯಲ್ಲಿ ಮಹಿಳೆಗೆ ಥಳಿಸಿ, ಚಲಿಸುತ್ತಿದ್ದ ಕಾರಲ್ಲಿ ಎಳೆದೊಯ್ದ ಯುವಕರು; ಶಾಕಿಂಗ್ ವಿಡಿಯೋ ವೈರಲ್
Shocking Video: ದೆಹಲಿಯ ಅಮರ್ ಕಾಲೋನಿ ಪ್ರದೇಶದಲ್ಲಿ ಚಲಿಸುತ್ತಿದ್ದ ಕಾರಿನಿಂದ ಮಹಿಳೆಯೊಬ್ಬರನ್ನು ಎಳೆದೊಯ್ಯುವ ಶಾಕಿಂಗ್ ವೀಡಿಯೋ ಸಾಕಷ್ಟು ಕೋಲಾಹಲವನ್ನು ಸೃಷ್ಟಿಸಿದೆ.
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಅಮರ್ ಕಾಲೋನಿಯಲ್ಲಿ ಇಬ್ಬರು ವ್ಯಕ್ತಿಗಳು ಮಹಿಳೆಯ ಮೇಲೆ ಹಲ್ಲೆ ನಡೆಸಿ, ಚಲಿಸುತ್ತಿರುವ ಕಾರಿನಲ್ಲಿ ಆಕೆಯನ್ನು ಎಳೆದುಕೊಂಡು ಹೋದ ಪರಿಣಾಮ ಆಕೆ ರಸ್ತೆ ಮೇಲೆ ಬಿದ್ದು ಗಾಯಗೊಂಡಿರುವ ಆಘಾತಕಾರಿ ಘಟನೆ (Shocking News) ನಡೆದಿದೆ. ಖಾಸಗಿ ಕ್ಯಾಬ್‌ನಲ್ಲಿ ಕುಳಿತಿದ್ದ ಮಹಿಳೆ ರಸ್ತೆಯಲ್ಲಿ ಇಬ್ಬರು ಚಾಲಕರ ನಡುವೆ ಜಗಳ ನಡೆಯುತ್ತಿದ್ದಾಗ ಮಧ್ಯ ಪ್ರವೇಶಿಸಿದ್ದಾರೆ. ಈ ವೇಳೆ ಆಕೆಗೆ ಥಳಿಸಿ, ಕಾರಿಂದ ಡಿಕ್ಕಿ ಹೊಡೆದು, ರಸ್ತೆಯಲ್ಲಿ ಎಳೆದೊಯ್ಯಲಾಗಿದೆ.
ಆಗ್ನೇಯ ದೆಹಲಿಯ ಅಮರ್ ಕಾಲೋನಿ ಪ್ರದೇಶದಲ್ಲಿ ಚಲಿಸುತ್ತಿದ್ದ ಕಾರಿನಿಂದ ಮಹಿಳೆಯೊಬ್ಬರನ್ನು ಎಳೆದೊಯ್ಯುವ ಶಾಕಿಂಗ್ ವೀಡಿಯೋ ಸಾಕಷ್ಟು ಕೋಲಾಹಲವನ್ನು ಸೃಷ್ಟಿಸಿದೆ. ವರದಿಗಳ ಪ್ರಕಾರ, ಮಹಿಳೆಯು ತನ್ನ ಕ್ಯಾಬ್ ಹಾದುಹೋಗುತ್ತಿದ್ದಾಗ ಇಬ್ಬರು ಚಾಲಕರ ನಡುವೆ ಜಗಳವಾಗುತ್ತಿರುವುದನ್ನು ಕಂಡು ಮಧ್ಯ ಪ್ರವೇಶಿಸಲು ಪ್ರಯತ್ನಿಸಿದ್ದಾಳೆ. ಇದರಿಂದ ಆಕೆಯ ಮೇಲೆ ಹಲ್ಲೆ ನಡೆಸಲಾಗಿದೆ.
ಆ ಕಾರಿನಲ್ಲಿದ್ದ ಇಬ್ಬರು ಯುವಕರು ಆಕೆಗೆ ಕಪಾಳಮೋಕ್ಷ ಮಾಡಿ ಎಳೆದೊಯ್ದಿದ್ದಾರೆ ಎನ್ನಲಾಗಿದೆ. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಸ್ಥಳದ ಬಳಿ ಹಲವಾರು ಜನರು ಜಮಾಯಿಸಿದಾಗ ಚಲಿಸುತ್ತಿದ್ದ ಕಾರಿನಿಂದ ಮಹಿಳೆಯನ್ನು ತಳ್ಳಿ ಎಳೆದಾಡಿದ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ರಸ್ತೆ ಮೇಲೆ ಬಿದ್ದಿದ್ದರಿಂದ ತನ್ನ ಮೊಣಕೈಗೆ ಗಾಯವಾಗಿದೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.
#दिल्ली के अमर कॉलोनी इलाके में हौजखास से लौट रही एक महिला को कार से रौंदने की कोशिश, आरोप है कि घटना के बाद अपनी शिकायत लेकर कालका जी थाने गयी थी महिला से बदसलूकी,एक सब इंस्पेक्टर समेत 3 पर कार्रवाई की खबर @DelhiPolice @DCPNewDelhi @DCPSouthDelhi @DCPEastDelhi @DCPNEastDelhi pic.twitter.com/XrI9yoUTjj
— Saurabh Pandey (@Journo_Saurabh) May 4, 2022
ಕಾರಿನ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಪೊಲೀಸರು ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಲ್ಲಿ ಒಬ್ಬನನ್ನು ಫರಿದಾಬಾದ್ ನಿವಾಸಿ ಉದಯವೀರ್ ಸಿಂಗ್ (25) ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಯುವಕ ತಲೆಮರೆಸಿಕೊಂಡಿದ್ದಾನೆ. ಏಪ್ರಿಲ್ 29ರಿಂದ 30ರ ಮಧ್ಯರಾತ್ರಿ ತಾನು ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದು, ಓಖ್ಲಾ ಮಂಡಿ ಚೌಕ್ ತಲುಪಿದಾಗ ಅದರಲ್ಲಿ ಇಬ್ಬರು ಯುವಕರಿದ್ದ ಬಲೆನೋ ಮತ್ತು ಸ್ಕಾರ್ಪಿಯೋವನ್ನು ಗಮನಿಸಿರುವುದಾಗಿ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಅವರ ಚಾಲಕರ ನಡುವಿನ ವಾಗ್ವಾದದಿಂದಾಗಿ ರಸ್ತೆಯನ್ನು ನಿರ್ಬಂಧಿಸಲಾಗಿತ್ತು. ಕ್ಯಾಬ್ ಡ್ರೈವರ್ ದಾರಿ ಮಾಡಿಕೊಡುವಂತೆ ಕೇಳಿದಾಗ, ಬಲೆನೋ ಕಾರಿನಲ್ಲಿದ್ದ ಉದಯ್ವೀರ್ ಆತನನ್ನು ನಿಂದಿಸಲು ಪ್ರಾರಂಭಿಸಿದರು ಎಂದು ಮಹಿಳೆ ಹೇಳಿದ್ದಾರೆ. “ತನ್ನ ಕ್ಯಾಬ್ನ ಚಾಲಕನನ್ನು ನಿಂದಿಸಬೇಡಿ ಎಂದು ನಾನು ಅವನಿಗೆ ಹೇಳಿದಾಗ ಈ ವಿಷಯಕ್ಕೆ ನಾನು ತಲೆಹಾಕಬಾರದು ಎಂದು ಹೇಳಿದನು” ಎಂದು ಅವರು ದೂರಿನಲ್ಲಿ ಹೇಳಿದ್ದಾರೆ. ನಂತರ ಆತ ನನಗೆ ಕಪಾಳಮೋಕ್ಷ ಮಾಡಿ, ನನ್ನ ಬೆನ್ನಿಗೆ ಹಲವು ಬಾರಿ ಚಪ್ಪಲಿಯಿಂದ ಹೊಡೆದು ಆ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಆಕೆ ತಿಳಿಸಿದ್ದಾರೆ.
In an incident of attack on a woman in the area of PS Amar Colony involving a Baleno car, FIR was registered on the same day and one person has been arrested and the offending vehicle seized. Further investigation in the matter is underway.
— Delhi Police (@DelhiPolice) May 4, 2022
ಅಷ್ಟರೊಳಗೆ ಆತನ ಸ್ನೇಹಿತ ಕೂಡ ನನ್ನ ಬಳಿ ಬಂದು ಮತ್ತೆ ಕಪಾಳಮೋಕ್ಷ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ವೇಗವಾಗಿ ಹೋಗುತ್ತಿದ್ದ ಅವರ ಕಾರನ್ನು ನಾನು ನಿಲ್ಲಿಸಲು ಪ್ರಯತ್ನಿಸಿದಾಗ, ಅವರು ಕಾರಿನ ವೇಗವನ್ನು ಹೆಚ್ಚಿಸಿದರು. ನನ್ನನ್ನು ಕೆಲವು ಮೀಟರ್ಗಳಷ್ಟು ದೂರಕ್ಕೆ ಎಳೆದುಕೊಂಡು ಹೋದರು ಎಂದು ಆಕೆ ದೂರಿನಲ್ಲಿ ವಿವರಿಸಿದ್ದಾರೆ.