AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಕ್ತಿಯ ಗಮನ ಬೇರೆಡೆ ಸೆಳೆದು ಐದು ಲಕ್ಷ ಹಣ ಪಂಗನಾಮ, ಹಾಡುಹಗಲೆ ಹಚ್ಚಾಯಿತು ಖದೀಮರ ಹಾವಳಿ

ಬಿದ್ದ ಹಣ ತೆಗೆದುಕೊಂಡು ಬರುವಷ್ಟರಲ್ಲಿ ಬೈಕ್ ನಲ್ಲಿದ್ದ ಐದು ಲಕ್ಷ ಮಂಗಮಾಯವಾಗಿದೆ. ಐದು ಲಕ್ಷ‌‌ ಹಣ ಎಗರಿಸಿ ಸ್ಥಳದಿಂದ ಖದೀಮ ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ ಯಾದಗಿರಿ ಎಸ್​ಪಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. 

ವ್ಯಕ್ತಿಯ ಗಮನ ಬೇರೆಡೆ ಸೆಳೆದು ಐದು ಲಕ್ಷ ಹಣ ಪಂಗನಾಮ, ಹಾಡುಹಗಲೆ ಹಚ್ಚಾಯಿತು ಖದೀಮರ ಹಾವಳಿ
ಪ್ರಾತಿನಿಧಿಕ ಚಿತ್ರ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: May 05, 2022 | 5:27 PM

Share

ಯಾದಗಿರಿ: ವ್ಯಕ್ತಿಯ ಗಮನ ಬೇರೆಡೆ ಸೆಳೆದು ಕ್ಷಣಮಾತ್ರದಲ್ಲೇ ಐದು ಲಕ್ಷ ಹಣ ಎಗರಿಸಿ ಪಂಗನಾಮ ಹಾಕಿರುವಂತಹ ಘಟನೆ ನಗರದ ಹಳೆ ಬಸ್ ನಿಲ್ದಾಣದ ಬಳಿ ನಡೆದಿದೆ. ನಗರದಲ್ಲಿ ಹಾಡುಹಗಲೆ ಖರ್ನಾಕ್ ಖದೀಮರ ಹಾವಳಿ ಹೆಚ್ಚಾಗಿದೆ. ಜಿಲ್ಲೆಯ ವಡಗೇರ ತಾಲೂಕಿನ ಕೊನಹಳ್ಳಿ ಗ್ರಾಮದ ಖಾಜಾಸಾಬ್ ಹಣ ಕಳೆದುಕೊಂಡ ವ್ಯಕ್ತಿ. ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್ ಹಣ ಡ್ರಾ ಮಾಡಿಕೊಂಡು ಹೋಗುತ್ತಿದ್ದ ಖಾಜಾಸಾಬ್, ಬೈಕ್​ನ ಹಿಂಬದಿ ನಾಲ್ಕೈದು ನೋಟುಗಳನ್ನ ಹಾಕಿ ನಿಮ್ದೆ ದುಡ್ಡು ಬಿದ್ದಿದೆ ಎಂದು ಹೇಳಿದ ಖದೀಮ, ಬೈಕ್​ನ ಟ್ಯಾಂಕ್ ಕವರ್​ನಲ್ಲಿ ಐದು ಲಕ್ಷ ಹಣ ಇಟ್ಟಿರೋದ್ದನ್ನ ಮರೆತು ಬಿದ್ದಿರುವ ನೋಟುಗಳನ್ನ ತೆಗೆದುಕೊಳ್ಳಲು ಹೋಗಿದ್ದಾರೆ. ಬಿದ್ದ ಹಣ ತೆಗೆದುಕೊಂಡು ಬರುವಷ್ಟರಲ್ಲಿ ಬೈಕ್ ನಲ್ಲಿದ್ದ ಐದು ಲಕ್ಷ ಮಂಗಮಾಯವಾಗಿದೆ. ಐದು ಲಕ್ಷ‌‌ ಹಣ ಎಗರಿಸಿ ಸ್ಥಳದಿಂದ ಖದೀಮ ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ ಯಾದಗಿರಿ ಎಸ್​ಪಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಆಕಸ್ಮಿಕ ಅಗ್ನಿ ಅವಘಡ; ಸುಟ್ಟು ಕರಕಲಾದ ಸಾಮಾಗ್ರಿಗಳು:

ವಿಜಯಪುರ: ಕೂಡಗಿಯ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಆವರಣದಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿರುವಂತಹ ಘಟನೆ ನಿಡಗುಂದಿ ತಾಲೂಕಿನ ಕೂಡಗಿ ಬಳಿ ನಡೆದಿದೆ. ಎನ್ಟಿಪಿಸಿ ಆವರಣದಲ್ಲಿನ ನಿರುಪಯುಕ್ತ ವಸ್ತುಗಳಿಗೆ ಹೊತ್ತಿದ ಬೆಂಕಿ, ಪೆಟ್ರಾನ್ ಕಂಪನಿಗೆ ಸೇರಿದ ಕೆಲ ನಿರುಪಯುಕ್ತ ವಸ್ತುಗಳು ಬೆಂಕಿಗಾಹುತಿಯಾಗಿವೆ. ಬೆಂಕಿಯ ಕೆನ್ನಾಲಿಗೆ ದಟ್ಟ ಹೊಗೆ ಎಲ್ಲೆಡೆ ಆವರಿಸಿದ್ದು, ನಿರುಪಯುಕ್ತ ಸಾಮಗ್ರಿಗಳು ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ದೌಡಾಯಿಸಿ ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದ್ದು, ಭಾರೀ ದುರಂತ ತಪ್ಪಿದೆ ಎಂದು ಎನ್ಟಿಪಿಸಿ ಅಧಿಕಾರಿಗಳ ಮಾಹಿತಿ ನೀಡಿದ್ದಾರೆ. ಕೂಡಗಿ ಎನ್‌ಟಿಪಿಸಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

ರಸ್ತೆ ಅಪಘಾತ:ನರಳಾಡಿ ಜೀವ ಬಿಟ್ಟ ಬೈಕ್​ ಸವಾರರು:

ತುಮಕೂರು: ರಸ್ತೆ ಅಪಘಾತದಲ್ಲಿ ನರಳಾಡಿ ಜೀವ ಬಿಟ್ಟ ಬೈಕ್​ ಸವಾರರು ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಕಣಿವೇನಹಳ್ಳಿ ಗೇಟ್ ಬಳಿ ಭೀಕರ ಅಪಘಾತ ಸಂಭವಿಸಿದೆ. ರಸ್ತೆ ಅಪಘಾತದಲ್ಲಿ ಬೈಕ್​ ಸವಾರರು ನರಳಾಡಿ ಜೀವ ಬಿಟ್ಟಿದ್ದಾರೆ. ರಾಂಗ್​ ಸೈಡ್​ನಲ್ಲಿ ಬಂದು ಟಾಟಾ ಏಸ್​​ಗೆ ಬೈಕ್ ಡಿಕ್ಕಿ ಹೊಡೆದಿದೆ. ಈ ಪರಿಣಾಮ ರಾಮಗಿರಿ ಮೂಲದ ಇಬ್ಬರು ಬೈಕ್​ ಸವಾರರು ಮೃತಪಟ್ಟಿದ್ದಾರೆ. ​ಡಿಕ್ಕಿ ಬಳಿಕ ವಾಹನ ಓರ್ವನನ್ನು 200 ಮೀ. ದೂರ ಎಳೆದುತಂದಿದೆ. ಬಳಿಕ ಕೆಲಕಾಲ ರಸ್ತೆಯಲ್ಲೇ ನರಳಾಡಿ ಸವಾರ ಕೊನೆಯುಸಿರೆಳೆದಿದ್ದಾನೆ. ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.