Video: ಜೆಸಿಬಿ ಟೈಯರ್​ಗೆ ಗಾಳಿ ತುಂಬಿಸುತ್ತಿದ್ದಾಗ ಸ್ಫೋಟ; ಇಬ್ಬರು ಕಾರ್ಮಿಕರ ದುರ್ಮರಣ, ಗಾಳಿಯಲ್ಲಿ ಹಾರಿಬಿದ್ದ ಮೃತದೇಹ

ರಾಯ್ಪುರದ ಸಿಲ್ಟಾರಾ ಕೈಗಾರಿಕಾ ಪ್ರದೇಶದಲ್ಲಿ ಎರಡು ದಿನಗಳ ಹಿಂದೆಯೇ ಘಟನೆ ನಡೆದಿದ್ದು ಈಗ ವಿಡಿಯೋ ವೈರಲ್ ಆಗಿದ್ದಾಗಿ ವರದಿಯಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ಸಿಕ್ಕಾಪಟೆ ಹರಿದಾಡುತ್ತಿದೆ. 

Video: ಜೆಸಿಬಿ ಟೈಯರ್​ಗೆ ಗಾಳಿ ತುಂಬಿಸುತ್ತಿದ್ದಾಗ ಸ್ಫೋಟ; ಇಬ್ಬರು ಕಾರ್ಮಿಕರ ದುರ್ಮರಣ, ಗಾಳಿಯಲ್ಲಿ ಹಾರಿಬಿದ್ದ ಮೃತದೇಹ
ಟೈಯರ್​ ಸ್ಫೋಟದ ಚಿತ್ರ
Follow us
TV9 Web
| Updated By: Lakshmi Hegde

Updated on:May 05, 2022 | 5:23 PM

ಜೆಸಿಬಿ ಬುಲ್ಡೋಜರ್​ನ ಟೈಯರ್​ ಸ್ಫೋಟವಾಗಿ ಇಬ್ಬರು ಕೆಲಸಗಾರರು ಮೃತಪಟ್ಟ ದುರ್ಘಟನೆ ಛತ್ತೀಸ್​ಗಢ್​​ನ ರಾಯ್ಪುರದಲ್ಲಿ ನಡೆದಿದೆ. ಟೈಯರ್​ಗೆ ಗಾಳಿ ತುಂಬಿಸುತ್ತಿದ್ದಾಗ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಈ ಭಯಾನಕ ದೃಶ್ಯ ವೈರಲ್ ಆಗಿದೆ.  ಈ ಇಬ್ಬರು ಕಾರ್ಮಿಕರು ಜೆಸಿಬಿಯಿಂದ  ಟೈಯರ್​​ ತೆಗೆದು, ಅದಕ್ಕೆ ಗಾಳಿ ತುಂಬುವ ಜತೆ ಅದನ್ನು ಒತ್ತಿ ಚೆಕ್​ ಮಾಡುತ್ತಿದ್ದರು. ಆಗ ಟೈಯರ್ ಸ್ಫೋಟಗೊಂಡು ಇವರಿಬ್ಬರೂ ಗಾಳಿಯಲ್ಲಿ ಹಾರಿ ಬಿದ್ದು ಮೃತಪಟ್ಟಿದ್ದಾರೆ. 

ರಾಯ್ಪುರದ ಸಿಲ್ಟಾರಾ ಕೈಗಾರಿಕಾ ಪ್ರದೇಶದಲ್ಲಿ ಎರಡು ದಿನಗಳ ಹಿಂದೆಯೇ ಘಟನೆ ನಡೆದಿದ್ದು ಈಗ ವಿಡಿಯೋ ವೈರಲ್ ಆಗಿದ್ದಾಗಿ ವರದಿಯಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ಸಿಕ್ಕಾಪಟೆ ಹರಿದಾಡುತ್ತಿದೆ.  ಜೆಸಿಬಿ ಟೈಯರ್​​ಗಳು ಸಹಜವಾಗಿಯೇ ದೊಡ್ಡದಾಗಿರುತ್ತವೆ.  ಅದಕ್ಕೆ ಇವರಿಬ್ಬರೂ ಸೇರಿ ಗಾಳಿ ತುಂಬುತ್ತಿದ್ದರು. ಗಾಳಿ ತುಂಬಿದ್ದು ಸಾಕೋ, ಇನ್ನಷ್ಟು ತುಂಬಬೇಕೋ ಎಂದು ನೋಡಲು ಶಕ್ತಿ ಹಾಕಿ ಒತ್ತುತ್ತಿದ್ದರು. ದುರದೃಷ್ಟಕ್ಕೆ ಅದು ಸ್ಫೋಟಗೊಂಡಿದೆ. ಈ ಟೈಯರ್​​ಗೆ ಅಗತ್ಯಕ್ಕಿಂತ ಹೆಚ್ಚು ಗಾಳಿ ತುಂಬಿದ್ದರಿಂದ ಹೀಗಾಯಿತೋ ಅಥವಾ ಟೈಯರ್​​ ಹಾನಿಯಾಗಿತ್ತಾ ಎಂಬುದು ಗೊತ್ತಾಗಿಲ್ಲ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು, ತನಿಖೆ ಶುರು ಮಾಡಿದ್ದಾರೆ.

ಇದನ್ನೂ ಓದಿ: BMTC Protest: ಮುಷ್ಕರದಲ್ಲಿ ಭಾಗಿಯಾಗಿದ್ದಕ್ಕೆ ಕೆಲಸದಿಂದ ವಜಾಗೊಂಡಿದ್ದ ಬಿಎಂಟಿಸಿ ಚಾಲಕ ಬೇಸತ್ತು ಆತ್ಮಹತ್ಯೆ

Published On - 5:22 pm, Thu, 5 May 22