AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಬಂದ ‘ಶಕ್ತಿಮಾನ್’: ಆದರೆ ನೀವು ಇದನ್ನು ನೋಡೋಕೆ ಆಗಲ್ಲ

Shaktimaan Returns: ಮುಕೇಶ್ ಖನ್ನಾ ಅವರು ಪ್ರಸಿದ್ಧ ಶಕ್ತಿಮಾನ್ ಪಾತ್ರವನ್ನು ಪಾಕೆಟ್ ಎಫ್ಎಂನಲ್ಲಿ ಆಡಿಯೋ ಸರಣಿಯಾಗಿ ಮತ್ತೆ ತರುತ್ತಿದ್ದಾರೆ. ಇದು ಕೇವಲ ಒಂದು ಕಾರ್ಯಕ್ರಮವಲ್ಲ, ಲಕ್ಷಾಂತರ ಜನರ ಹೃದಯದಲ್ಲಿರುವ ಭಾವನೆ ಎಂದು ಅವರು ಹೇಳಿದ್ದಾರೆ. ಹೊಸ ಕಥೆಗಳೊಂದಿಗೆ ಈ ಆಡಿಯೋ ಸರಣಿಯು ಹೊಸ ಪೀಳಿಗೆಯನ್ನು ತಲುಪುವ ನಿರೀಕ್ಷೆಯಿದೆ.

ಮತ್ತೆ ಬಂದ ‘ಶಕ್ತಿಮಾನ್’: ಆದರೆ ನೀವು ಇದನ್ನು ನೋಡೋಕೆ ಆಗಲ್ಲ
Shakthimaan
 ಶ್ರೀಲಕ್ಷ್ಮೀ ಎಚ್
| Edited By: |

Updated on:May 21, 2025 | 3:03 PM

Share

ಮುಕೇಶ್ ಖನ್ನಾ (Mukesh Khanna) ಅವರು ಶಕ್ತಿಮಾನ್ (Shaktimaan) ಮೂಲಕ ಫೇಮಸ್ ಆಗಿದ್ದರು ಅನ್ನೋದು ಎಲ್ಲರಿಗೂ ಗೊತ್ತು. 90ರ ದಶಕದಲ್ಲಿ ಈ ಶೋ ಸಾಕಷ್ಟು ಮನ್ನಣೆ ಪಡೆದಿತ್ತು. ಈ ಶೋ ಮೂಲಕ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಂತೂ ಸತ್ಯ. ಈ ಶೋ ಮೇಲೆ ಅವರು ವಿಶೇಷ ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ. ಕಳೆದ ವರ್ಷ ಈ ಶೋನ ಮತ್ತೆ ತರೋದಾಗಿ ಮುಕೇಶ್ ಹೇಳಿದ್ದರು. ಈಗ ಈ ಶೋ ಮತ್ತೆ ಬರೋಕೆ ರೆಡಿ ಆಗಿದೆ. ಆದರೆ, ಇದನ್ನು ನೋಡೋಕೆ ಆಗೋದಿಲ್ಲ. ಏಕೆಂದರೆ, ಆಡಿಯೋ ರೀತಿಯಲ್ಲಿ ಈ ಶೋ ಬರಲಿದೆಯಂತೆ.

ಪಾಕೆಟ್ ಎಫ್​ಎಂನಲ್ಲಿ ಒರಿಜಿನಲ್ ಆಡಿಯೋ ಸೀರಿಸ್ ಆಗಿ ‘ಶಕ್ತಿಮಾನ್’ ಬರಲಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ಶಕ್ತಿಮಾನ್ ಕೇವಲ ಒಂದು ಕಾರ್ಯಕ್ರಮವಲ್ಲ, ಇದು ಲಕ್ಷಾಂತರ ಜನರ ಹೃದಯಗಳಲ್ಲಿರುವ ಒಂದು ಭಾವನೆ. ಶಕ್ತಿಮಾನ್ ಧ್ವನಿ ಮೂಲಕ ಹೊಸ ಪೀಳಿಗೆಯ ಕೇಳುಗರೊಂದಿಗೆ ಸಂಪರ್ಕ ಸಾಧಿಸಲು ನಾನು ರೋಮಾಂಚನಗೊಂಡಿದ್ದೇನೆ. ಈ ವೇದಿಕೆಯು ಶಕ್ತಿಮಾನ್ ಹಾಗೂ ಆತನ ಮೌಲ್ಯಗಳು, ಶಕ್ತಿ ಮತ್ತು ಪುನಃ ಪರಿಚಯಿಸಲು ಉತ್ತಮ ಮಾರ್ಗ ಇದು. ಇಂದಿನ ಯುವಕರಿಗೆ ಅವರು ಇಷ್ಟಪಡುವ ಸ್ವರೂಪದಲ್ಲಿ ಹೊಸ ಕಥೆಗಳೊಂದಿಗೆ ಬರುತ್ತೇನೆ’ ಎಂದು ಅವರು ಹೇಳಿದ್ದಾರೆ.

ಶಕ್ತಿಮಾನ್ ಅನ್ನೋದು ವೀಕ್ಷಣೆಗೆ ಸಿಕ್ಕರೆ ಚೆನ್ನಾಗಿ ಇರುತ್ತದೆ. ಆದರೆ, ಈ ಕಥೆಗಳನ್ನು ಕೇವಲ ಕೇಳಬೇಕು ಎಂದರೆ ಫ್ಯಾನ್ಸ್ ಥ್ರಿಲ್ ಆಗಿ ಬಿಡುತ್ತಾರೆ ಎಂದು ಹೇಳೋಕೆ ಆಗುವುದಿಲ್ಲ. ಹೀಗಾಗಿ, ಈ ಸೂಪರ್ ಹೀರೋ ಕಥೆ ಹಿಟ್ ಆಗಿಯೇ ಬಿಡುತ್ತದೆ ಎಂದು ಹೇಳೋಕೆ ಸಾಧ್ಯವಿಲ್ಲ ಎನ್ನುವ ಮಾತು ವ್ಯಕ್ತವಾಗಿದೆ.

ಶೋ ತರ್ತೀನಿ ಎಂದಿದ್ದ ಮುಕೇಶ್ ಖನ್ನಾ

ಕಳೆದ ವರ್ಷ ಈ ಶೋನ ಮತ್ತೆ ತರೋದಾಗಿ ಅವರು ಹೇಳಿದ್ದರು. ‘ಈ ಬಟ್ಟೆ ನನ್ನಲ್ಲೇ ಇದೆ. ನನ್ನಲ್ಲೇ ಬೆರೆತು ಹೋಗಿದೆ. ಶಕ್ತಿಮಾನ್​ನಲ್ಲಿ ನಾನು ಉತ್ತಮವಾಗಿ ನಟಿಸಿದ್ದೆ. ಶೂಟಿಂಗ್ ಮಾಡುವಾಗ ಕ್ಯಾಮೆರಾ ಇದೆ ಎಂಬುದನ್ನೇ ಮರೆತಿದ್ದೆ. 1997ರಿಂದ 20005ರವರೆಗೆ ಶೋ ನಡೆದಿತ್ತು. ಈ ಪಾತ್ರ ಈಗಿನ ಜನರೇಷನ್ ತಲುಪಬೇಕು’ ಎಂದಿದ್ದರು. 2027ರ ವೇಳೆಗೆ ಈ ಶೋ ಪ್ರಸಾರ ಕಾಣುವ ಭರವಸೆಯನ್ನು ಅವರು ಹೊರಹಾಕಿದ್ದರು.

‘ಶಕ್ತಿಮಾನ್’ ಹೆಸರಲ್ಲಿ ಸಿನಿಮಾ ಒಂದು ಮೂಡಿ ಬರುತ್ತಿದೆ ಎನ್ನುವ ಸುದ್ದಿ ಇದೆ. ಇದನ್ನು ರಣವೀರ್ ಸಿಂಗ್ ಮಾಡುತ್ತಾರೆ ಎಂದು ಈ ಮೊದಲು ವರದಿ ಆಗಿದೆ. ಈ ಬಗ್ಗೆ ಮುಕೇಶ್​ಗೆ ಅಸಮಾಧಾನ ಇದೆ. ರಣವೀರ್ ಬೆತ್ತಲೆ ಆಗಿ ಕಾಣಿಸಿಕೊಂಡಿದ್ದರು. ಇಂಥವರಿಂದ ಸಿನಿಮಾ ಮಾಡಿಸಬಾರದು ಎಂದು ಅವರು ಆಗ್ರಹಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:02 pm, Wed, 21 May 25

ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಶಾಲಾ ಬಸ್​ ಚಾಲಕರ ತಪಾಸಣೆ: ಮದ್ಯಪಾನ ಮಾಡಿ ಸಿಕ್ಕಿಬಿದ್ದ 26 ಚಾಲಕರು
ಶಾಲಾ ಬಸ್​ ಚಾಲಕರ ತಪಾಸಣೆ: ಮದ್ಯಪಾನ ಮಾಡಿ ಸಿಕ್ಕಿಬಿದ್ದ 26 ಚಾಲಕರು