Viral Video: ಮಳೆಯ ನೀರು ತಾಗಬಾರದೆಂದು ತಂಗಿಯನ್ನು ಬೆನ್ನ ಮೇಲೆ ಕೂರಿಸಿ ರಸ್ತೆ ದಾಟಿಸಿದ ಅಣ್ಣ; ವಿಡಿಯೋ ವೈರಲ್​

| Updated By: Rakesh Nayak Manchi

Updated on: Jul 14, 2022 | 1:22 PM

ತನ್ನ ಬೆನ್ನ ಮೇಲೆ ತಂಗಿಯನ್ನು ಕೂರಿಸಿಕೊಂಡ ಅಣ್ಣ ನೀರು ತುಂಬಿದ ರಸ್ತೆಯನ್ನು ದಾಟಿಸಿದ್ದಾನೆ. ಈ ಹೃದಯಸ್ಪರ್ಷಿ ವಿಡಿಯೋ ವೈರಲ್ ಆಗಿ ನೆಟ್ಟಿಗರ ಹೃದಯ ಗೆದ್ದಿದೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ.

Viral Video: ಮಳೆಯ ನೀರು ತಾಗಬಾರದೆಂದು ತಂಗಿಯನ್ನು ಬೆನ್ನ ಮೇಲೆ ಕೂರಿಸಿ ರಸ್ತೆ ದಾಟಿಸಿದ ಅಣ್ಣ; ವಿಡಿಯೋ ವೈರಲ್​
ತಂಗಿಯನ್ನು ಬೆನ್ನ ಮೇಲೆ ಕೂರಿಸಿ ರಸ್ತೆ ದಾಟಿಸಿದ ಅಣ್ಣ
Follow us on

ಸಾಮಾಜಿಕ ಜಾಲತಾಣವು ಹೃದಯಸ್ಪರ್ಶಿ ವಿಷಯಗಳಿಗೆ ಹಾಟ್​ಸ್ಪಾಟ್ ಆಗಿದೆ. ಕೆಟ್ಟ ವಿಡಿಯೋಗಳ ಹೊರತಾಗಿ ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುವ ವಿಡಿಯೋಗಳು ಆಗೊಂದು ಈಗೊಂದು ಎಂಬಂತೆ ಹರಿದಾಡುತ್ತಲೇ ಇರುತ್ತದೆ. ಅಪ್ಪನ ಹೆಗಲ ಹೊರತಾಗಿ ಅಣ್ಣನ ಬೆನ್ನ ಹಿಂದೆ ಕುಳಿತು ಹೋಗುವುದೆಂದರೆ ಎಲ್ಲಿಲ್ಲದ ಸಂಸತ, ಇದಕ್ಕೆ ಹೊಂದಿಕೆಯಾಗುವ ವಿಡಿಯೋ ವೈರಲ್ (Video Viral) ಆಗುತ್ತಿದ್ದು, ಇದು ನಿಮ್ಮ ಬಾಲ್ಯದ ಜೀವನವನ್ನು ನೆನಪಿಸುವಂತಿದೆ. ಅಣ್ಣನೊಬ್ಬ ತಂಗಿಯ ಕಾಲಿಗೆ ಮಳೆ ನೀರು ತಾಗಬಾರದು ಎಂದು ತನ್ನ ಬೆನ್ನ ಮೇಲೆ ಕೂರಿಸಿ ರಸ್ತೆ ದಾಟಿಸಿದ ಹೃದಯಸ್ಪರ್ಷಿ ವಿಡಿಯೋ ವೈರಲ್ ಆಗುತ್ತಿದೆಇದಾಗಿದೆ.

ಇದನ್ನೂ ಓದಿ: Viral Video: ಬೆಸ್ಟ್ ಫ್ರೆಂಡ್ ಮದುವೆಗೆ ಹೋಗುವ ಮುನ್ನ ‘ಮೆಹಂದಿ ಹೈ ರಚನೇವಾಲಿ’ ಹಾಡಿಗೆ ನೃತ್ಯ ಮಾಡಿದ ಸುಂದರಿಯರು

ಉಮ್ಡಾ ಪಂಕ್ತಿಯಾನ್ ಎಂಬ ಟ್ವಿಟರ್ ಖಾತೆಯಲ್ಲಿ ಅಣ್ಣ ತಂಗಿಯ ಬಾಂಧವ್ಯದ 26 ಸೆಕೆಂಡುಗಳುಳ್ಳ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯವು ಅತ್ಯಂತ ಸುಂದರವಾದ ಮತ್ತು ಶುದ್ಧವಾದ ವಿಷಯವಾಗಿದೆ” ಎಂದು ಶೀರ್ಷಿಕೆ ನೀಡಲಾಗಿದೆ.

ಇದನ್ನೂ ಓದಿ: Viral Video: ವಿಮಾನದ ಕಿಟಕಿಯ ಮೂಲಕ ಹೊರಗಿದ್ದ ಸಿಬ್ಬಂದಿಯೊಂದಿಗೆ ಪ್ರಯಾಣಿಕನ ರಾಕ್ ಪೇಪರ್ ಕತ್ತರಿ ಆಟ

ವಿಡಿಯೋ ಕ್ಲಿಪ್​ನಲ್ಲಿರುವಂತೆ, ಮಳೆಯಿಂದಾಗಿ ರಸ್ತೆ ತುಂಬೆಲ್ಲಾ ನೀರು ನಿಂತಿರುತ್ತದೆ. ಇನ್ನೊಂದು ಕಡೆ ಶಾಲಾ ಸಮವಸ್ತ್ರ ಧರಿಸಿ ಬ್ಯಾಗ್ ಹಾಕಿ, ಶೂ ಧರಿಸಿ ರಸ್ತೆ ದಾಟಲು ನಿಂತಿರುವ ಸಣ್ಣ ಬಾಲಕಿಯೊಬ್ಬಳನ್ನು ಕಾಣಬಹುದು. ಈಕೆಯನ್ನು ತನ್ನ ಸಹೋದರ ಬೆನ್ನ ಮೇಲೆ ಕೂರಿಸಿ ಬರೀಗಾಲಿನಲ್ಲಿ ರಸ್ತೆ ದಾಟಿಸುತ್ತಾನೆ.

ಆನ್‌ಲೈನ್‌ನಲ್ಲಿ ವಿಡಿಯೋ ಹಂಚಿಕೊಂಡ ನಂತರ, ಸುಮಾರು 90 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, 3ಸಾವಿರಕ್ಕೂ ಅಧಿಕ ರೀಟ್ವೀಟ್​ಗಳು ಆಗಿವೆ ಮತ್ತು 28 ಸಾವಿರಕ್ಕೂ ಅಧಿಕ ಲೈಕ್​​ಗಳನ್ನು ಗಿಟ್ಟಿಸಿಕೊಂಡಿದೆ. ವಿಡಿಯೋ ವೀಕ್ಷಣೆ ಮಾಡಿದ ಒಂದಷ್ಟು ಮಂದಿ ತಮ್ಮ ಅಭಿಪ್ರಾಯಗಳನ್ನ ಹಂಚಿಕೊಂಡಿದ್ದಾರೆ. ಟ್ವಿಟರ್​ ಬಳಕೆದಾರರೊಬ್ಬರು, “ಸುಂದರವಾದ ವೀಡಿಯೊ” ಎಂದು ಹೇಳಿಕೊಂಡರೆ, ಮಗದೊಬ್ಬರು, “ಸೋ ಸ್ವೀಟ್” ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Viral Video: ಗೋಲ್ಗಪ್ಪ ಪ್ರಿಯರೇ ಇಲ್ಲಿ ನೋಡಿ… ಗೋಲ್ಗಪ್ಪ ನೀರಿನ ರುಚಿಯನ್ನು ಹೆಚ್ಚಿಸಲು ಟಾಯ್ಲೆಟ್ ಕ್ಲೀನರ್ ಬಳಕೆ

Published On - 1:22 pm, Thu, 14 July 22