ಶಾಲಾ ಮಕ್ಕಳ ಎದುರಲ್ಲೇ ಪ್ರಿನ್ಸಿಪಾಲ್ ಹಾಗೂ​​​ ಟೀಚರ್ ಜಡೆ ಜಗಳ; ವಿಡಿಯೋ ವೈರಲ್​​

ಮಕ್ಕಳಿಗೆ ಮಾದರಿಯಾಗಬೇಕಾದ ಶಿಕ್ಷಕರೇ ಪರಸ್ಪರ ಗುದ್ದಾಡಿಕೊಂಡಿದ್ದು, ಪ್ರಿನ್ಸಿಪಾಲ್ ಹಾಗೂ​​​ ಟೀಚರ್ ಜಡೆ ಜಗಳದ ವಿಡಿಯೋ ಇದೀಗಾ ಎಲ್ಲೆಡೆ ಭಾರೀ ವೈರಲ್​​ ಆಗಿದೆ.

ಶಾಲಾ ಮಕ್ಕಳ ಎದುರಲ್ಲೇ ಪ್ರಿನ್ಸಿಪಾಲ್ ಹಾಗೂ​​​ ಟೀಚರ್ ಜಡೆ ಜಗಳ; ವಿಡಿಯೋ ವೈರಲ್​​
ಪ್ರಿನ್ಸಿಪಾಲ್ ಹಾಗೂ​​​ ಟೀಚರ್ ಜಡೆ ಜಗಳ
Image Credit source: Twitter

Updated on: May 27, 2023 | 10:37 AM

ಬಿಹಾರ: ಸಾಮಾನ್ಯವಾಗಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪರಸ್ಪರ ಜಗಳ ಮಾಡುವುದುಂಟು, ಆದರೆ ಮಕ್ಕಳಿಗೆ ಮಾದರಿಯಾಗಬೇಕಾದ ಶಿಕ್ಷಕರೇ ಪರಸ್ಪರ ಗುದ್ದಾಡಿಕೊಂಡಿದ್ದು, ಪ್ರಿನ್ಸಿಪಾಲ್ ಹಾಗೂ​​​ ಟೀಚರ್ ಜಡೆ ಜಗಳದ ವಿಡಿಯೋ ಇದೀಗಾ ಎಲ್ಲೆಡೆ ಭಾರೀ ವೈರಲ್​​ ಆಗಿದೆ. ಬಿಹಾರದ ಪಾಟ್ನಾ ಜಿಲ್ಲೆಯ ಕೌರಿಯಾ ಪಂಚಾಯತ್‌ನಲ್ಲಿರುವ ಬಿಹ್ತಾ ಮಿಡ್ಲ್ ಸ್ಕೂಲ್‌ನಲ್ಲಿ ಶಾಲಾ ಪ್ರಾಂಶುಪಾಲರು ಮತ್ತು ಶಿಕ್ಷಕರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಕೆಲ ಹೊತ್ತಿನಲ್ಲಿ ಹೊಡೆದಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಪರಸ್ಪರ ಹೊಡೆದಾಟ ಪ್ರಾರಂಭವಾಗುತ್ತಿದ್ದಂತೆ ವಿಡಿಯೋ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: 194 ಪ್ರಯಾಣಿಕರಿದ್ದ ವಿಮಾನ ಆಗಸದಲ್ಲಿ ಸಾಗುತ್ತಿದ್ದಾಗ ಇದ್ದಕ್ಕಿದ್ದಂತೆ ಬಾಗಿಲು ತೆರೆದುಕೊಂಡಿತು! ಮುಂದೇನಾಯಿತು?

ವೈಯುಕ್ತಿಕ ವಿವಾದದ ಹಿನ್ನೆಲೆಯಲ್ಲಿ ಜಗಳ ನಡೆದಿದ್ದು, ಶಾಲಾ ಮುಖ್ಯೋಪಾಧ್ಯಾಯಿನಿ ಕಾಂತಿ ಕುಮಾರಿ ಹಾಗೂ ಮತ್ತೋರ್ವ ಶಿಕ್ಷಕಿ ಅನಿತಾ ಕುಮಾರಿ ವಾಗ್ವಾದದಲ್ಲಿ ಭಾಗಿಯಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೋ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರಿಂದ ಭಾರೀ ಟೀಕೆ ವ್ಯಕ್ತವಾಗಿದೆ. ಮಕ್ಕಳಿಗೆ ಗುರು ಸ್ಥಾನದಲ್ಲಿರುವ ನೀವೇ ಈ ರೀತಿ ಜಗಳ ಆಡಿಕೊಂಡರೆ ಹೇಗೆ ಎಂದು ಸಾಕಷ್ಟು ಸೋಶಿಯಲ್​​ ಮೀಡಿಯಾ ಬಳಕೆದಾರರು ಕಾಮೆಂಟ್​​ ಮಾಡಿದ್ದಾರೆ. ಈ ರೀತಿಯ ಶಿಕ್ಷಕರನ್ನು ಈ ಕೂಡಲೇ ಕೆಲಸದಿಂದ ತೆಗೆದು ಹಾಕಿ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್​​ನಲ್ಲಿ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: