Viral Video: ಐಸ್​ಲ್ಯಾಂಡ್ ಜ್ವಾಲಾಮುಖಿ ಸ್ಫೋಟದ ಡ್ರೋನ್ ವಿಡಿಯೋ ವೈರಲ್

| Updated By: ಸುಷ್ಮಾ ಚಕ್ರೆ

Updated on: Nov 27, 2021 | 3:04 PM

ಐಸ್‌ಲ್ಯಾಂಡಿಕ್ ರಾಜಧಾನಿ ರೇಕ್‌ಜಾವಿಕ್‌ನಿಂದ ಸುಮಾರು 40 ಕಿಮೀ ದೂರದಲ್ಲಿರುವ ಫಾಗ್ರಾಡಾಲ್ಸ್‌ಫ್ಜಾಲ್ ಪರ್ವತದಲ್ಲಿ ಈ ಜ್ವಾಲಾಮುಖಿಯ ದೃಶ್ಯವನ್ನು ಚಿತ್ರೀಕರಿಸಲಾಗಿದೆ.

Viral Video: ಐಸ್​ಲ್ಯಾಂಡ್ ಜ್ವಾಲಾಮುಖಿ ಸ್ಫೋಟದ ಡ್ರೋನ್ ವಿಡಿಯೋ ವೈರಲ್
ಜ್ವಾಲಾಮುಖಿ ವಿಡಿಯೋ
Follow us on

ಐಸ್‌ಲ್ಯಾಂಡ್‌ನಲ್ಲಿ ಜ್ವಾಲಾಮುಖಿ ಎದ್ದಿರುವ ಅಚ್ಚರಿಯ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಜ್ವಾಲಾಮುಖಿಯ ಡ್ರೋನ್ ಕ್ಯಾಮೆರಾದ ವಿಡಿಯೊವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ನೋಡಿದವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ನಿಮ್ಮನ್ನು ವಿಸ್ಮಯಗೊಳಿಸುತ್ತದೆ. ಡ್ರೋನ್‌ನಿಂದ ಸೆರೆಹಿಡಿಯಲಾದ ವಿಡಿಯೋದ ತುಣುಕಿನಲ್ಲಿ ಜ್ವಾಲಾಮುಖಿ ಸ್ಫೋಟವಾಗುತ್ತಿರುವುದನ್ನು ನೋಡಬಹುದು. ಈ ವಿಡಿಯೋ ನೋಡಿದರೆ ಕೂದಲು ನಿಮಿರುವುದರಲ್ಲಿ ಎರಡು ಮಾತಿಲ್ಲ.

ಐಸ್‌ಲ್ಯಾಂಡಿಕ್ ರಾಜಧಾನಿ ರೇಕ್‌ಜಾವಿಕ್‌ನಿಂದ ಸುಮಾರು 40 ಕಿಮೀ ದೂರದಲ್ಲಿರುವ ಫಾಗ್ರಾಡಾಲ್ಸ್‌ಫ್ಜಾಲ್ ಪರ್ವತದಲ್ಲಿ ಈ ಜ್ವಾಲಾಮುಖಿಯ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಇದು ಈ ವರ್ಷದ ಆರಂಭದಲ್ಲಿ ಮಾರ್ಚ್ 19ರಂದು ಸ್ಫೋಟಗೊಂಡಿತು. ಇದನ್ನು ನೋಡಿದ ನೆಟ್ಟಿಗರು ಬೆರಗುಗೊಂಡಿದ್ದಾರೆ. ಜ್ವಾಲಾಮುಖಿಯ ಮೇಲ್ಭಾಗದಿಂದ ಸೆರೆಹಿಡಿಯಲಾದ ಡ್ರೋನ್ ಕ್ಯಾಮೆರಾದ ವಿಡಿಯೋದಲ್ಲಿ ಒಂದು ಭಾಗವು ಕುಸಿಯುತ್ತಿರುವುದನ್ನು ನೋಡಬಹುದು.

ಈ ವಿಡಿಯೋವನ್ನು 8,300 ಜನರು ವೀಕ್ಷಿಸಿದ್ದಾರೆ. ನೆಟ್ಟಿಗರಿಂದ ಈ ವಿಡಿಯೋಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜ್ವಾಲಾಮುಖಿ ಸ್ಫೋಟವಾಗುವಾಗ ಐಸ್​ಲ್ಯಾಂಡಿಕ್ ಫೋಟೋಗ್ರಾಫರ್ ಹರೌರ್ ಕ್ರಿಸ್ಟ್ಲೆಫ್ಸನ್ ಐಸ್​ಲ್ಯಾಂಡ್ ಮೇಲೆ ಡ್ರೋನ್ ಕ್ಯಾಮೆರಾವನ್ನು ಹಾರಿಸಿ, ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

ಇದನ್ನೂ ಓದಿ: ಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿಬಿದ್ದ ಮಗನ ಜತೆ ಹೆಮ್ಮೆಯಿಂದ ಪೋಸ್​ ಕೊಟ್ಟ ತಂದೆ; ನಗೆಪಾಟಲಿನ ವಿಡಿಯೋ ವೈರಲ್​

ಹಾಸನದಲ್ಲಿ 24 ಆನೆಗಳ ದಾಳಿಗೆ ಅಪಾರ ಬೆಳೆ ಹಾನಿ! ಸಾಲಾಗಿ ಹೆಜ್ಜೆ ಹಾಕುತ್ತಿರುವ ಗಜಪಡೆಗಳ ವಿಡಿಯೋ ವೈರಲ್