ಹಾಸನದಲ್ಲಿ 24 ಆನೆಗಳ ದಾಳಿಗೆ ಅಪಾರ ಬೆಳೆ ಹಾನಿ! ಸಾಲಾಗಿ ಹೆಜ್ಜೆ ಹಾಕುತ್ತಿರುವ ಗಜಪಡೆಗಳ ವಿಡಿಯೋ ವೈರಲ್

ಭತ್ತದ ಗದ್ದೆಗಳಲ್ಲಿ ಸುಮಾರು 24 ಆನೆಗಳ ಪರೇಡ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 3 ಚಿಕ್ಕ ಮರಿಗಳು ಸೇರಿ ಒಂದೇ ಗುಂಪಿನಲ್ಲಿರುವ 24 ಕಾಡಾನೆಗಳು ಸಂಚಾರ ನಡೆಸಿವೆ. ಕಾಡಾನೆಗಳ ಹಿಂಡು ತೋಟದಿಂದ ಭತ್ತದ ಗದ್ದೆಗಳಿದು ಸಾಗಿವೆ.

ಹಾಸನದಲ್ಲಿ 24 ಆನೆಗಳ ದಾಳಿಗೆ ಅಪಾರ ಬೆಳೆ ಹಾನಿ! ಸಾಲಾಗಿ ಹೆಜ್ಜೆ ಹಾಕುತ್ತಿರುವ ಗಜಪಡೆಗಳ ವಿಡಿಯೋ ವೈರಲ್
ಸಾಲಾಗಿ ಹೆಜ್ಜೆ ಹಾಕುತ್ತಿರುವ ಆನೆಗಳು
Follow us
TV9 Web
| Updated By: sandhya thejappa

Updated on: Nov 27, 2021 | 9:23 AM

ಹಾಸನ: ಜಿಲ್ಲೆಯಲ್ಲಿ ಆನೆಗಳ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ. ರೈತರು ಬೆಳೆದ ಬೆಳೆ ಗಜಪಡೆಗಳ ಪಾಲಾಗುತ್ತಿದೆ. ಫಸಲು ರೈತರ ಕೈ ಸೇರುವ ಮೊದಲು ಆನೆಗಳ ದಾಳಿಗೆ ನಾಶವಾಗುತ್ತಿದೆ. ಈ ಹಿನ್ನೆಲೆ ಜಿಲ್ಲೆಯಲ್ಲಿ ಬೆಳೆಗಳನ್ನು ಆನೆಗಳಿಂದ ಕಾಪಾಡಿಕೊಳ್ಳುವುದು ಬೆಳೆಗಾರರಿಗೆ ದೊಡ್ಡ ಸವಾಲಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕುಂಬಾರಗಟ್ಟೆ ಗ್ರಾಮದಲ್ಲಿ ಸುಮಾರು 24 ಆನೆಗಳ ಹಿಂಡು ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿವೆ. ಕಾಫಿ, ಭತ್ತ ಸೇರಿದಂತೆ ಅಪಾರ ಬೆಳೆ ಹಾನಿಯಾಗಿವೆ. ಕಾಡಾನೆಗಳ ಉಪಟಳದಿಂದ ಕಂಗಾಲಾದ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಭತ್ತದ ಗದ್ದೆಗಳಲ್ಲಿ ಸುಮಾರು 24 ಆನೆಗಳ ಪರೇಡ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 3 ಚಿಕ್ಕ ಮರಿಗಳು ಸೇರಿ ಒಂದೇ ಗುಂಪಿನಲ್ಲಿರುವ 24 ಕಾಡಾನೆಗಳು ಸಂಚಾರ ನಡೆಸಿವೆ. ಕಾಡಾನೆಗಳ ಹಿಂಡು ತೋಟದಿಂದ ಭತ್ತದ ಗದ್ದೆಗಳಿದು ಸಾಗಿವೆ. ಭತ್ತದ ಗದ್ದೆಯ ಬದುಗಳ ಮೇಲೆ ಗಜಪಡೆ ಸಾಲಾಗಿ ಸಾಗುತ್ತಿದ್ದ ವಿಡಿಯೋ ವೈರಲ್ ಆಗಿದೆ. ಆನೆಗಳು ಗದ್ದೆಗಳಲ್ಲಿ ಸಾಗುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದರು.

ಶ್ವಾನಗಳನ್ನು ಅಟ್ಟಾಡಿಸಿದ ಆನೆ ಇನ್ನು ಸಕಲೇಶಪುರ ತಾಲೂಕಿನ ಹೊಸಗದ್ದೆ ಗ್ರಾಮದಲ್ಲಿ ನಾಯಿಗಳ ಮೇಲೆ ಒಂಟಿ ಸಲಗ ದಾಳಿ ನಡೆಸಲು ಮುಂದಾಗಿದೆ. ತನ್ನ ಹಿಂಬಾಲಿಸಿದ ಶ್ವಾನಗಳನ್ನ ಆನೆ ಅಟ್ಟಾಡಿಸಿದೆ. ಇಂದು ಬೆಳ್ಳಂಬೆಳಿಗ್ಗೆ ಕಾಡಾನೆ ಗ್ರಾಮಕ್ಕೆ ಬಂದಿತ್ತು. ಗ್ರಾಮದೊಳಗೆ ಸಂಚರಿಸಿ ಹೊರ ಹೋಗುವಾಗ ನಾಯಿಗಳು ಹಿಂಬಾಲಿಸಿವೆ. ನಾಯಿಗಳು ಹಿಂದೆ ಬರುತ್ತಿರುವುದನ್ನು ಗಮನಿಸಿದ ಆನೆ ಅಟ್ಟಾಡಿಸಿದೆ. ಆನೆ ಹಿಂದಿರುಗಿ ಬರುತ್ತಿದ್ದಂತೆ ಶ್ವಾನಗಳು ಎದ್ದು ಬಿದ್ದು ಓಡಿವೆ. ಆನೆ ನಾಯಿಗಳ ಜಟಾಪಟಿ ಮೊಬೈಲ್​ನಲ್ಲಿ ಸೆರೆಯಾಗಿದೆ.

ಆನೆಗಳ ದಾಳಿ ಬಗ್ಗೆ ರೈತರೊಬ್ಬರು ಅರಣ್ಯ ಸಚಿವರು, ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕಾಡಾನೆಗಳ ದಾಳಿಯಿಂದ ನಮ್ಮ ಬದುಕು ಹಾಳಾಗಿದೆ. ಆನೆಗಳ ದಾಳಿ ಹಿನ್ನೆಲೆ ನಾವು ಭತ್ತ ಬೆಳೆಯೋದು ಬಿಟ್ಟಿದ್ದೇವೆ. ಇದೀಗ ಕಾಫಿ ಬೆಳೆಯನ್ನು ಕೂಡ ಆನೆಗಳು ನಾಶ ಮಾಡುತ್ತಿವೆ. ಹೀಗಾದರೆ ಏನು ಬೆಳೆಯಬೇಕು, ನಮ್ಮ ಹೊಟ್ಟೆ ಪಾಡೇನು ಅಂತ ಹೊಸಗದ್ದೆ ಗ್ರಾಮದ ರೈತ ಶಶಿಧರ್ ಹಾನಿಯಾದ ಕಾಫಿ ತೋಟದಲ್ಲಿ ವಿಡಿಯೋ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ

Kerala: ಬುಡಕಟ್ಟು ಜನಾಂಗದ ಕುಗ್ರಾಮದಲ್ಲಿ ಸಾಲುಸಾಲು ಶಿಶುಗಳ ಮರಣ; ತನಿಖೆಗೆ ಆದೇಶಿಸಿ ಕೇರಳ ಸರ್ಕಾರ

200 ಮೆಗಾ ಪಿಕ್ಸೆಲ್ ಮೇನ್ ಕೆಮೆರಾ ಹೊಂದಿರುವ ಸ್ಮಾರ್ಟ್ ಪೋನ್ ಬೇಕಾ? ಸ್ವಲ್ಪ ತಾಳಿ, ಮೊಟೊರೊಲ ಅದನ್ನು ತರುತ್ತಿದೆ!

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು