ತಾಯಿಯ ಮೊಬೈಲ್‌ಗೆ ಮೆಸೇಜ್ ಕಳುಹಿಸಿ ಹದಿಹರೆಯದ ಬಾಲಕಿ ಕೆರೆಗೆ ಹಾರಿ ಆತ್ಮಹತ್ಯೆ
ಸತ್ಯಮಂಗಲ ಬಡಾವಣೆಯ ಪ್ರಸಾದ್ ಮತ್ತು ಸುಬ್ಬಲಕ್ಷ್ಮಿ ಎಂಬುವವರ ಪುತ್ರಿ ಪೂರ್ವಿಕಾ. ತಾಯಿ ಮೊಬೈಲ್‌ಗೆ ಮೆಸೇಜ್ ಕಳುಹಿಸಿ ಬೆಳಗಿನ ಜಾವ ಮನೆಯಿಂದ ಹೊರ ಹೋಗಿರುವ ವಿದ್ಯಾರ್ಥಿನಿ ಪೂರ್ವಿಕಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹಾಸನ : ಹದಿಹರೆಯದ ಬಾಲಕಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಾಸನದ ಖಾಸಗಿ ಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಪೂರ್ವಿಕಾ (15) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಹಾಸನ ಹೊರವಲಯದ ಕೆರೆಯಲ್ಲಿ ಘಟನೆ ನಡೆದಿದೆ. ಸತ್ಯಮಂಗಲ ಬಡಾವಣೆಯ ಪ್ರಸಾದ್ ಮತ್ತು ಸುಬ್ಬಲಕ್ಷ್ಮಿ ಎಂಬುವವರ ಪುತ್ರಿ ಪೂರ್ವಿಕಾ. ತಾಯಿ ಮೊಬೈಲ್‌ಗೆ ಮೆಸೇಜ್ ಕಳುಹಿಸಿ ಬೆಳಗಿನ ಜಾವ ಮನೆಯಿಂದ ಹೊರ ಹೋಗಿರುವ ವಿದ್ಯಾರ್ಥಿನಿ ಪೂರ್ವಿಕಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ‘ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ನನ್ನನ್ನು ಕ್ಷಮಿಸಿ‘ ಎಂದು ತಾಯಿ ಮೊಬೈಲ್ ಗೆ ಪೂರ್ವಿಕಾ ಮೆಸೇಜ್ ಮಾಡಿದ್ದಳು.
ಅಗ್ನಿಶಾಮಕ ದಳದಿಂದ ಬಾಲಕಿ ಶವಕ್ಕಾಗಿ ಶೋಧಕಾರ್ಯ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕರ ಪುಂಡಾಟಕ್ಕೆ ಕಡಿವಾಣ ಹಾಕಲು ಮನವಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕರ ಹುಚ್ಚಾಟ ನಡೆದಿದೆ. ಕೈಯಲ್ಲಿ ತಲ್ವಾರ್ ಹಿಡಿದು ಬೈಕ್‌ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಯುವಕರ ಹುಚ್ಚಾಟಕ್ಕೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಯುವಕರ ಪುಂಡಾಟಕ್ಕೆ ಕಡಿವಾಣ ಹಾಕಲು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಜೀನ್ಸ್ ಧರಿಸಿ ಅಂಗಡಿಗೆ ಬಂದ ಬಾಲಕಿಗೆ ಒದ್ದು ಕಳಿಸಿದ ಮಾಲೀಕ; ಇನ್ನೊಮ್ಮೆ ಬರಬೇಡ ಎಂಬ ಎಚ್ಚರಿಕೆ !
Bike Wheeling: ಚನ್ನರಾಯಪಟ್ಟಣದ ಹೆದ್ದಾರಿಯಲ್ಲಿ ಯುವಕರ ಹುಚ್ಚಾಟ|Tv9kannada
Published On - 9:56 am, Fri, 26 November 21