Uttar Pradesh: ಸೆಪ್ಟೆಂಬರ್ 26, 2023 ರ ರಾತ್ರಿ, ದೆಹಲಿಯ ಶಕುರ್ ಬಸ್ತಿಯಿಂದ ಹೊರಟ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (EMU) ರೈಲು ಮಥುರಾ ಜಂಕ್ಷನ್ನಲ್ಲಿ ಹಳಿತಪ್ಪಿ ಪ್ಲ್ಯಾಟ್ಫಾರ್ಮ್ ಸಂಖ್ಯೆ 2A ಗೆ ಏರಿತ್ತು. ಅದೃಷ್ಟವಶಾತ್ ಆ ರಾತ್ರಿ 10.49 ಕ್ಕೆ ಈ ಅವಘಡ ಸಂಭವಿಸುವ ಮೊದಲೇ ಪ್ರಯಾಣಿಕರು ರೈಲಿನಿಂದ ಇಳಿದಿದ್ದರು. ಹಾಗಾಗಿ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಈ ಘಟನೆಯ ಕುರಿತು ತನಿಖೆ ನಡೆಸಲು ರೈಲ್ವೇ ಇಲಾಖೆಯು (Indian Railway) ಆದೇಶಿಸಿತ್ತು. ಆ ಪ್ರಕಾರ, ರೈಲು ಸಿಬ್ಬಂದಿ ಸಚಿನ್ ಕುಡಿದ ಅಮಲಿನಲ್ಲಿ ಇದ್ದುದರಿಂದ ಈ ದುರ್ಘಟನೆ ಸಂಭವಿಸಿದೆ ಎನ್ನುವುದು ಪತ್ತೆಯಾಗಿದೆ. ಸಚಿನ್ ಜೊತೆ ನಾಲ್ವರು ಸಿಬ್ಬಂದಿಯನ್ನೂ ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ : Viral Video: ಹುಲಿಗೆ ನೆಗಡಿಯಾಗಿದೆ; ಸೀನುವಾಗಲೂ ಇದು ಎಷ್ಟು ಮುದ್ದು ಎಂದ ನೆಟ್ಟಿಗರು
ಟ್ರೇಲರ್‌ನಲ್ಲಿದ್ದ ಕೀ ತೆಗೆದುಕೊಂಡು ಬರಲು ಸಹಾಯಕ ಸಚಿನ್ನನ್ನು ಕಳಿಸಲಾಗಿತ್ತು. ಆಗ ಅವನು ತನ್ನ ಬ್ಯಾಗ್ ತೆಗೆದು ಎಂಜಿನ್ನ ಥ್ರೊಟಲ್ ಮೇಲೆ ಇರಿಸಿಬಿಟ್ಟನು. ಇದರಿಂದಾಗಿ ರೈಲು ಹಠಾತ್ತನೇ ವೇಗ ಪಡೆದುಕೊಂಡು ಪ್ಲ್ಯಾಟ್ಫಾರ್ಮ್ಗೆ ಅಪ್ಪಳಿಸಿತು. ಸಚಿನ್ ಕುಡಿದ ಅಮಲಿನಲ್ಲಿ ಮೊಬೈಲ್ ನೋಡುತ್ತಿರುವುದು ಮತ್ತು ರೈಲು ಅಪ್ಪಳಿಸಿದ ತಕ್ಷಣ ಗಾಬರಿಗೆ ಬೀಳುವುದೆಲ್ಲವೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಂತೆಯೇ ನಿರ್ಲಕ್ಷ್ಯದಿಂದ ರೈಲು ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ತೊಡಗಿದ್ದ ಸಚಿನ್ ಮತ್ತು ಇತರ ನಾಲ್ವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಈ ಅವಘಡದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ರೈಲಿನ ಇಂಜಿನ್‌ನಿಂದ ಪ್ಲಾಟ್‌ಫಾರ್ಮ್‌ನ ಒಂದು ಭಾಗ ಮತ್ತು ವಿದ್ಯುತ್ ಕಂಬ ಹಾನಿಗೊಳಗಾಗಿದೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:36 pm, Thu, 28 September 23