Viral Video : ವಾವ್ ಏನ್​​​​​ ಡೈ ಹೊಡೆದೆ ಹುಲಿಯಣ್ಣ! ಇಲ್ಲಿದೆ ವಿಡಿಯೋ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 26, 2024 | 12:38 PM

ಕಾಡು ಪ್ರಾಣಿಗಳೆಂದರೆ ಭಯವನ್ನು ಹುಟ್ಟಿಸುವ ಪ್ರಾಣಿಗಳು. ಹೀಗಾಗಿ ಕ್ರೂರ ಪ್ರಾಣಿಗಳನ್ನು ದೂರದಿಂದಲೇ ನೋಡಿ ಖುಷಿ ಪಡುವವರೇ ಹೆಚ್ಚು. ಸೋಶಿಯಲ್ ಮೀಡಿಯಾದಲ್ಲಿ ಈ ಕಾಡು ಪ್ರಾಣಿಗಳ ಅಪರೂಪದ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆದರೆ ಇದೀಗ ಸುಂದರಬನ್ಸ್ ರಾಷ್ಟ್ರೀಯ ಉದ್ಯಾನವನದ ಪ್ರಮುಖ ಆಕರ್ಷಣೆ ಎಂದು ಕರೆಯಲ್ಪಡುವ ಬಂಗಾಳ ಹುಲಿಯು ಲಾಂಗ್ ಜಂಪ್ ಮಾಡುವ ಮೂಲಕ ನದಿಯನ್ನು ದಾಟಿದ ವೀಡಿಯೋವೊಂದು ವೈರಲ್ ಆಗಿದ್ದು ಇಂಟರ್ನೆಟ್‌ನಲ್ಲಿ ನೆಟ್ಟಿಗರ ಹೃದಯಗಳನ್ನು ಗೆದ್ದಿದೆ.

ಕ್ರೂರ ಪ್ರಾಣಿಗಳ ಜಾತಿಗೆ ಸೇರಿರುವ ಹುಲಿಗಳು ಬೇಟೆಯಲ್ಲಿ ಪಳಗಿರುವ ಪ್ರಾಣಿಗಳು ಎನ್ನುವುದು ಗೊತ್ತಿರುವ ವಿಚಾರ. ಕ್ರೂರ ಪ್ರಾಣಿಯೆನಿಸಿರುವ ಈ ಹುಲಿಗಳ ಘರ್ಜನೆ, ಗಾಂಭೀರ್ಯದ ನಡಿಗೆ, ಆಕ್ರಮಣಕಾರಿ ಬೇಟೆಯ ರೀತಿಯೇ ಭಿನ್ನ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತಾದ ವಿಡಿಯೋಗಳು ಆಗಾಗ ವೈರಲ್ ಆಗುವುದನ್ನು ಕಾಣಬಹುದು. ಹುಲಿಯೊಂದು ಒಂದೇ ಜಿಗಿತದಿಂದ ನದಿಯನ್ನು ದಾಟಿದ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆಯುತ್ತಿವೆ.

ಹೌದು, ಪಶ್ಚಿಮ ಬಂಗಾಳದ ಸುಂದರಬನ್ ರಾಷ್ಟ್ರೀಯ ಉದ್ಯಾನವನದ ಕ್ಯಾಮೆರಾದಲ್ಲಿ ಈ ಆಘಾತಕಾರಿ ದೃಶ್ಯ ಸೆರೆಯಾಗಿದೆ. ನದಿ ದಾಟಲು ಹುಲಿ ತಾನು ನಿಂತಿರುವ ಜಾಗದಿಂದ 20 ಅಡಿ ದೂರ ಜಿಗಿದಿದೆ ಎನ್ನಲಾಗಿದೆ. ಈ ಗಮನಾರ್ಹ ವೀಡಿಯೊವನ್ನು ಭಾರತೀಯ ರೈಲ್ವೆ ಖಾತೆಗಳ ಸೇವೆ (IRAS) ಅಧಿಕಾರಿ ಅನಂತ್ ರೂಪನಗುಡಿ ಅವರು X (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋವನ್ನು ಹಂಚಿಕೊಂಡ ಶ್ರೀ ರೂಪಂಗುಡಿ, “ಸುಂದರಬನ್ಸ್‌ನಲ್ಲಿ ನಿಂತಿರುವ ಸ್ಥಾನದಿಂದ 20 ಅಡಿಗಳಷ್ಟು ಜಿಗಿತವನ್ನು ಜೀವಿತಾವಧಿಯಲ್ಲಿ ಒಮ್ಮೆ ಚಿತ್ರೀಕರಿಸಲಾಗಿದೆ! ಅದು ವೈರಲ್ ಆಗಿದೆ ಎಂದು ನನಗೆ ತಿಳಿದಿದೆ. ಒಬ್ಬರು ಅದನ್ನು ಸಾಕಷ್ಟು ಪಡೆಯಲು ಸಾಧ್ಯವಿಲ್ಲ! ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಮಾಲ್​​​​ಗಳ ಪಾರ್ಕಿಂಗ್​​ ಸ್ಥಳಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಅವಕಾಶ ಇಲ್ಲ, ಯಾಕೆ?

ಈ ವಿಡಿಯೋದಲ್ಲಿ, ಪಶ್ಚಿಮ ಬಂಗಾಳದ ಸುಂದರ್‌ಬನ್ಸ್ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಯೊಂದು ನದಿಯತ್ತ ನಡೆಯುವುದರೊಂದಿಗೆ ಕ್ಲಿಪ್ ಪ್ರಾರಂಭವಾಗುತ್ತದೆ. ಆದಾದ ಬಳಿಕ ಹುಲಿಯು ನದಿಯ ಒಂದು ತಟದಿಂದ ಇನ್ನೊಂದು ತಟಕ್ಕೆ ಜಿಗಿಯುತ್ತದೆ. ಈ ಕ್ಲಿಪ್ ಅನ್ನು ಆರಂಭದಲ್ಲಿ ವನ್ಯಜೀವಿ ಛಾಯಾಗ್ರಾಹಕ ಹರ್ಷಲ್ ಮಾಲ್ವಂಕರ್ ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋವು 6 ​​ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿವೆ.

ಸದ್ಯಕ್ಕೆ ವೈರಲ್ ಆಗಿರುವ ವಿಡಿಯೋಗೆ ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಬಳಕೆದಾರರೊಬ್ಬರು, “ಚುರುಕುತನ ಮತ್ತು ನಮ್ಯತೆ ಉತ್ತಮವಾಗಿದೆ” ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, “ಅಯ್ಯೋ, ಹಿಂದೆಂದೂ ಈ ರೀತಿಯದ್ದನ್ನು ನೋಡಿಲ್ಲ” ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

 

 

Published On - 12:35 pm, Tue, 26 March 24