ನೀವು ಮುದ್ದಾದ ಪ್ರಾಣಿಗಳ ವೀಡಿಯೊಗಳ ಅಭಿಮಾನಿಯಾಗಿದ್ದರೆ ಭಾನುವಾರದ ಈ ರಜಾ ದಿನದಂದು ಈ ವಿಡಿಯೋ ನಿಮ್ಮ ಮುಖದಲ್ಲಿ ಖುಷಿ ತರುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ವೈರಲ್ ವಿಡಿಯೋವನ್ನು ನೀವು ತಪ್ಪದೇ ನೋಡಿ ಆನಂದಿಸಿ. ಎರಡು ಸಾಕು ನಾಯಿಗಳು ಪರಸ್ಪರ ಕಣ್ಣಾಮುಚ್ಚಾಲೆ ಆಡುತ್ತಿರುವುದನ್ನು ವೈರಲ್ ವಿಡಿಯೋ (Viral Video) ತೋರಿಸುತ್ತಿದೆ. ಈ ವಿಡಿಯೋವನ್ನು ಡ್ಯಾನಿ ಡೆರಾನಿ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, 64 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು, ಮೂರು ಸಾವಿರಕ್ಕೂ ಹೆಚ್ಚು ಲೈಕ್ಗಳು ಹಾಗೂ ನೂರಾರು ರೀಟ್ವಿಟ್ಗಳು ಆಗಿವೆ.
ವೈರಲ್ ಆಗಿರುವ ವೀಡಿಯೊದಲ್ಲಿ, ಮುದ್ದಾದ ಪುಟ್ಟ ನಾಯಿಮರಿಯು ಗೋಡೆಯ ಹಿಂದೆ ಅಡಗಿಕೊಂಡಿರುತ್ತದೆ. ಇನ್ನೊಂದು ನಾಯಿಮರಿಯು ಅದನ್ನು ಪತ್ತೆಹಚ್ಚುವಲ್ಲಿ ನಿರತವಾಗಿದೆ. ತನ್ನ ಕಣ್ಣಿಗೆ ಕಾಣದೆ ಅವಿತೊಂಡಿರುವ ತನ್ನ ಸೇಹಿತನನ್ನು ಪತ್ತೆ ಹಚ್ಚಲು ಅತ್ತಿತ್ತ ಹುಡುಕಾಡುತ್ತಾ ಇರುತ್ತದೆ. ಅದು ಸ್ವಲ್ಪ ಸಮಯದವರೆಗೆ ತಾಳ್ಮೆಯಿಂದ ಕಾಯುತ್ತದೆ. ಅಡಗಿಕೊಂಡಿರುವ ನಾಯಿ ತನ್ನ ಗೆಳೆಯ ಏನು ಮಾಡುತ್ತಿದ್ದಾನೆ ಎಂದು ಗೋಡೆಯ ಬದಿಯಲ್ಲಿ ನಿಂತು ಇಣುಕಿ ನೋಡುತ್ತದೆ, ಅದು ತನ್ನತ್ತ ತಿರುಗುತ್ತಿದ್ದಂತೆ ಮತ್ತೆ ಮರೆಮಾಚುವುದು ನೆಟ್ಟಿಗರನ್ನು ಫಿದಾ ಮಾಡಿಸಿದೆ. ಬಳಿಕ ಕೆಲವೇ ಕ್ಷಣಗಳಲ್ಲಿ ಹುಡುಕಾಟದ ಸ್ಥಳವನ್ನು ಬದಲಾಯಿಸಿ ಮುಂದಕ್ಕೆ ಸಾಗಿದಾಗ ಅವಿತುಕುಳಿತಿದ್ದ ತನ್ನ ಗೆಳೆಯನನ್ನು ಪತ್ತೆ ಹಚ್ಚಿಯೇ ಬಿಟ್ಟಿತು. ಈ ವೇಳೆ ಎರಡು ನಾಯಿಗಳು ಕೂಡ ಸಂತಸಗೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದು.
ಸದ್ಯ ಕ್ಯೂಟ್ ನಾಯಿಗಳ ಕಣ್ಣಾಮುಚ್ಚಾಲೆಯ ಪುಟ್ಟ ಆಟ ನೆಟ್ಟಿಗರ ಹೃದಯವನ್ನು ಕರಗಿಸುತ್ತಿದೆ. ಕೇವಲ ಎರಡು ನಾಯಿಗಳು ಪರಸ್ಪರ ಕಣ್ಣಾಮುಚ್ಚಾಲೆ ಆಡುತ್ತಿವೆ. ನಾಯಿಗಳು ಅತ್ಯುತ್ತಮ ವ್ಯಕ್ತಿಗಳು ಎಂದು ಡ್ಯಾನಿ ಡೆರಾನಿ ಅವರು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಸೋ ಸ್ವೀಟ್ ಎಂಬಿತ್ಯಾದಿ ಪದಗಳನ್ನು ಬರೆದು ಕಳುಹಿಸಿದ್ದಾರೆ.
Just two dogs playing hide and seek with each other.
Dogs are the best people.
? Imgur pic.twitter.com/iWCri93voE
— Danny Deraney (@DannyDeraney) October 8, 2022
ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published On - 11:36 am, Sun, 9 October 22