ಕಾರು ಕಳ್ಳನಿಂದ ಮಹಿಳೆ ಮತ್ತು ಆಕೆಯ ಮಗುವನ್ನು ರಕ್ಷಿಸಿದ ನಂತರ ಯುಎಸ್‌ನಲ್ಲಿ ರೆಸ್ಟೋರೆಂಟ್ ಸಿಬ್ಬಂದಿಯೊಬ್ಬರು ಹೀರೋ ಆಗಿದ್ದಾರೆ. ಫ್ಲೋರಿಡಾದ ಫೋರ್ಟ್ ವಾಲ್ಟನ್ ಬೀಚ್‌ನಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ. ಒಕಲೂಸಾ ಕೌಂಟಿ ಶೆರಿಫ್ ಕಚೇರಿಯು ಟ್ವಿಟರ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು, ವಿಡಿಯೋ ಕೂಡ ಹಂಚಿಕೊಂಡಿದೆ.
ಕೌಂಟಿ ಶೆರಿಫ್ ಬಿಡುಗಡೆ ಮಾಡಿದ ಒಂದು ನಿಮಿಷದ ವೀಡಿಯೊದಲ್ಲಿ ರೆಸ್ಟೋರೆಂಟ್ ಸಿಬ್ಬಂದಿ ಕಳ್ಳನೊಂದಿಗೆ ಹೋರಾಡುತ್ತಾ ಕಾರಿನಿಂದ ಹೊರಕ್ಕೆ ಎಳೆದ ನೆಲದಲ್ಲೂ ಹೋರಾಡಿದ್ದಾರೆ. ಘಟನೆಯ ವಿಡಿಯೋವನ್ನು ಹತ್ತಿರದ ವಾಹನದಿಂದ ತೆಗೆಯಲಾಗಿದೆ. ಸಿಬ್ಬಂದಿಯ ಸಾಹಸದ ವೇಳೆ ಸ್ಥಳದಲ್ಲಿ ಜನರು ಜಮಾಯಿಸಿದರು. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 7.9 ಮಿಲಿಯನ್ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅಲ್ಲದೆ 34,000ಕ್ಕೂ ಹೆಚ್ಚು ಲೈಕ್‌ಗಳನ್ನು ಮತ್ತು 5,000 ಕ್ಕೂ ಹೆಚ್ಚು ರೀಟ್ವೀಟ್‌ಗಳನ್ನು ಸ್ವೀಕರಿಸಿದೆ.
ಟ್ವಿಟರ್ ಬಳಕೆದಾರರು ರೆಸ್ಟೋರೆಂಟ್ ಕೆಲಸಗಾರನ ಧೈರ್ಯವನ್ನು ಶ್ಲಾಘಿಸಿದ್ದಾರೆ. ವೀಡಿಯೊ ಕುರಿತು ಕಾಮೆಂಟ್ ಮಾಡಿದ ಬಳಕೆದಾರರೊಬ್ಬರು, “ನಾನು ನೂರು ಬಾರಿ ಹೇಳುತ್ತೇನೆ: ಚಿಕ್ ಫಿಲ್ ರೆಸ್ಟೋರೆಂಟ್ ಉತ್ತಮ ಗ್ರಾಹಕ ಸೇವೆಯನ್ನು ಹೊಂದಿದೆ” ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ ಕಾಮೆಂಟ್ ಮಾಡಿ ಸಿಬ್ಬಂದಿಯನ್ನು ಹೀರೋ ಎಂದು ಕರೆದಿದ್ದಾರೆ.
ಹೀರೋ ಕಳ್ಳನ ವಿರುದ್ದ ಹೋರಾಡುವ ಮುನ್ನ ಆಗಿದ್ದೇನು?
ಡಿಫುನಿಯಾಕ್ ಸ್ಪ್ರಿಂಗ್ಸ್‌ನಲ್ಲಿರುವ ವಿಕ್ಲಿಯಮ್ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಕಾರು ಕಳ್ಳ ಚಿಕ್-ಫಿಲ್-ಎ ರೆಸ್ಟೋರೆಂಟ್‌ನ ಹೊರಗೆ ಮಹಿಳೆಯಿಂದ ಕಾರಿನ ಕೀ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಶಸ್ತ್ರಸಜ್ಜಿತ ಕಳ್ಳನನ್ನು ಕಂಡು ಕಿರುಚಿದಳು. ಕೂಡಲೆ ಧೈರ್ಯ ತೋರಿದ ರೆಸ್ಟೋರೆಂಟ್ ಸಿಬ್ಬಂದಿ ಮಹಿಳೆಯ ನೆರವಿಗೆ ದಾವಿಸಿದ್ದಾರೆ. ಘಟನೆಯ ನಂತರ, ಚಿಕ್-ಫಿಲ್-ಎ ರೆಸ್ಟೋರೆಂಟ್‌ನ ಫೇಸ್‌ಬುಕ್ ಪುಟದಲ್ಲಿ ಸಿಬ್ಬಂದಿಯ ಫೋಟೋ ಹಂಚಿಕೊಂಡು “ಇವರೇ ಹೀರೋ! ಇವರು ಮೈಕೆಲ್ ಗಾರ್ಡನ್!” ಎಂದು ಬರೆಯಲಾಗಿದೆ.
In reference to the FWB Chick-fil-A employee who ran to help a woman with a baby who was being carjacked, we want to say a sincere thank you to Ms. Kelner for providing video of a portion of the encounter. (see prior post). A major shout-out to this young man for his courage! pic.twitter.com/2Lcwe46azv
— OkaloosaSheriff (@OCSOALERTS) September 14, 2022
ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published On - 7:26 am, Sat, 17 September 22