ಅಂಬೆಗಾಲಿಡುವ ಮಗು ತನ್ನ ಪುಟ್ಟ ಹೆಜ್ಜೆಗಳನ್ನಿಡುತ್ತಾ ನಡೆಯಲು ಕಲಿಯುವಾಗ ಇದ್ದಕ್ಕಿದಂತೆ ನೃತ್ಯ ಮಾಡುತ್ತದೆ. ಈ ವೈರಲ್ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ವೈರಲ್ ಆಗಿರುವ ಮುದ್ದಾದ ಈ ವಿಡಿಯೋದಲ್ಲಿ ಪುಟ್ಟ ಮಗುವೊಂದು ನಡೆಯಲು ಕಲಿಯುತ್ತಿರುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ನೃತ್ಯ ಮಾಡಲು ಪ್ರಾರಂಭಿಸುತ್ತದೆ. ಈ ವಿಡಿಯೋ ಇನ್ಟಾಗ್ರಾಮ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮಕ್ಕಳು ನಡೆಯಲು ಕಲಿಯುತ್ತಿರುವುದನ್ನು ತೋರಿಸುವ ವಿಡಿಯೋಗಳು ಸಾಮಾನ್ಯವಾಗಿ ಜನರು ಅಯ್ಯೋ ಅನ್ನುವಂತೆ ಮಾಡುತ್ತದೆ. ಆದರೆ ಇಲ್ಲೊಂದು ಮುದ್ದಾದ ವಿಡಿಯೋ ನೆಟ್ಟಿಗರನ್ನು ನಗುವಂತೆ ಮಾಡುತ್ತಿದೆ. ಅದ್ಭುತವಾದ ಈ ವಿಡಿಯೋವು ಮಗು ನಡೆಯಲು ಕಲಿಯುತ್ತಿರುವಾಗ ನೃತ್ಯ ಮಾಡುವುದನ್ನು ತೋರಿಸುತ್ತದೆ.
ಮಗುವಿನ ತಾಯಿ ಅಮಂಡಾ ರಸೆಲ್ ಕಳೆದ ವರ್ಷವೇ ಈ ವಿಡಿಯೋವನ್ನು ಇನ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಪತ್ರಕರ್ತೆ ಮರಿಯಾ ಶ್ರೀವರ್ ಅವರು ತನ್ನ ಇನ್ಟಾಗ್ರಾಮ್ ಪೇಜ್‌ನಲ್ಲಿ ಈ ವಿಡಿಯೋವನ್ನು ಮರು ಹಂಚಿಕೊಂಡ ನಂತರ ಅದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಮೊದಲಿಗೆ ಮಗು ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತಾ ಮುಂದೆ ಬರುತ್ತದೆ. ಒಮ್ಮೆಲೆ ಮುಂದಕ್ಕೆ ಹೆಜ್ಜೆ ಇಡುವುದನ್ನು ನಿಲ್ಲಿಸಿ, ನೃತ್ಯ ಮಾಡಲು ಪ್ರಾರಂಭಿಸುತ್ತದೆ. ಆ ವಿಡಿಯೋದಲ್ಲಿ ಮಗು ನೃತ್ಯ ಮಾಡುವಾಗ ಹಿನ್ನೆಲೆಯಲ್ಲಿ ಮನೆಯವರ ಉನ್ಮಾದದ ನಗುವೇ ವಿಡಿಯೋವನ್ನು ವೀಕ್ಷಿಸಲು ಇನಷ್ಟು ಮನರಂಜನೆ ನೀಡುತ್ತದೆ.
ಇದನ್ನೂ ಓದಿ: Viral Video : ಮದುವೆಗೆ ಬಂದವರು ಆಧಾರ ಕಾರ್ಡ್ ತೋರಿಸಿದರೆ ಮಾತ್ರ ಔತಣ
ವೈರಲ್ ಆಗಿರುವ ಈ ವಿಡಿಯೋ ಇಲ್ಲಿಯವರೆಗೆ 4.4ಮಿಲಿಯಲ್ ವೀಕ್ಷಣೆಗಳನ್ನು ಪಡೆದಿದೆ. ಹಾಗೂ ವಿಡಿಯೋಗೆ ಲೈಕ್ಸ್ ಮತ್ತು ಕಮೆಂಟ್‌ಗಳ ಭರಪೂರವೇ ಹರಿದು ಬಂದಿದೆ. ಇನ್ಟಾಗ್ರಾಮ್ ಬಳಕೆದಾರರು ಈ ವಿಡಿಯೋಗೆ ಹೇಗೆಲ್ಲಾ ಪ್ರತಿಕ್ರಿಯಿಸಿದ್ದಾರೆ ಎಂಬುದು ಇಲ್ಲಿದೆ:
ಈ ವಿಡಿಯೋವನ್ನು ನೋಡಿ ಒಬ್ಬ ಬಳಕೆದಾರರು ಈ ಪೋಷಕತ್ವವೇ ಹಾಗೆ ನಮಗೆ ಸಂತೋಷವನ್ನು ತರುತ್ತದೆ. ಪ್ರತಿ ನಿದ್ದೆಯಿಲ್ಲದ ರಾತ್ರಿ ಮತ್ತು ಮನ ಕಳೆದುಹೋಗುವಂತೆ ಮಾಡುವ ಕ್ಷಣವನ್ನು ಮೌಲ್ಯಯುತವಾಗಿಸುತ್ತದೆ’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾದರು ‘ನಿಮ್ಮ ಮುಂದಿನ ನಡೆಯನ್ನು ಯಾರಿಗೂ ತಿಳಿಸಬೇಡಿ’ ಎಂದು ತಮಾಷೆಯ ಕಮೆಂಟ್ ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಧನ್ಯವಾದಗಳು ಈ ವಿಡಿಯೋ ಶೇರ್ ಮಾಡಿದ್ದಕ್ಕಾಗಿ. ಹಿನ್ನೆಲೆಯಲ್ಲಿ ಜೋರಾಗಿ ನಗುತ್ತಿರುವವರು ಯಾರೆಂಬುದುವುದ ನನಗೆ ಗೊತ್ತಾಗಬೇಕು ಎಂದು ತಮಾಷೆಯ ಕಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:10 pm, Wed, 22 February 23