Viral Video : ಈಗ ವೆಡ್ಡಿಂಗ್ ಪ್ಲ್ಯಾನರ್ (Wedding Planners) ಗಳಿಗಂತೂ ಮೈತುಂಬಾ ತಲೆತುಂಬಾ ಕೆಲಸ. ಡಿಫರೆಂಟ್ ಆಗಿ ಆಗಬೇಕು ನಮ್ಮ ಮದುವೆ ಎಂದು ಕೇಳಿಕೊಂಡು ಬರುವವರಿಗೆ ಬಜೆಟ್ಗೆ ತಕ್ಕಂತೆ ಪ್ಲ್ಯಾನ್ ಮಾಡುವುದೇ ಮಾಡುವುದು. ಪ್ಲ್ಯಾನ್ ಮಾಡಿಕೊಟ್ಟ ಮೇಲೆ ವಿಡಿಯೋ ಮಾಡುವುದು ಮತ್ತು ಸೋಶಿಯಲ್ ಮೀಡಿಯಾಗೆ ಹಾಕುವುದು ಮುಂದಿನ ಹಂತದ ಕೆಲಸ. ಇದು ಈಗಿನ ವೆಡ್ಡಿಂಗ್ ಟ್ರೆಂಡ್. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಮದುವೆಯ ಗಂಡು ಹೆಣ್ಣು ಡ್ಯಾನ್ಸ್ ಮಾಡುತ್ತಾ ಪುಲ್ಅಪ್ಸ್ (Pullups) ತೆಗೆಯುತ್ತಾರೆ. ಗಮನಿಸಿದ್ರಾ ಜಿಮ್ ಸಲಕರಣೆಯೂ ಮದುವೆ ಮಂಟಪಕ್ಕೆ ಬಂದಿದೆ!
@manishmalhotravows ಇನ್ಸ್ಟಾ ಪುಟವು ಈ ವಿಡಿಯೋ ಹಂಚಿಕೊಂಡಿದೆ. ಆರಂಭದಲ್ಲಿ ಇಬ್ಬರೂ ಭಾಂಗ್ರಾ ಡ್ಯಾನ್ಸ್ ಮಾಡುತ್ತಾರೆ. ಡ್ಯಾನ್ಸ್ ಮಾಡುತ್ತಲೇ ಒಬ್ಬೊಬ್ಬರೇ ಪುಲ್ಅಪ್ಸ್ ತೆಗೆಯುತ್ತಾರೆ. ಮರಳಿ ಮತ್ತೆ ಭಾಂಗ್ರಾಗೆ ಹೆಜ್ಜೆ ಹಾಕುತ್ತಾರೆ. ಸುತ್ತಮುತ್ತಲಿನ ಜನ ಇವರಿಬ್ಬರನ್ನೂ ಹುರಿದುಂಬಿಸುತ್ತಾರೆ. ಈತನಕ ಈ ವಿಡಿಯೋ ಅನ್ನು 13,000ಕ್ಕೂ ಹೆಚ್ಚು ಜನ ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : ತನ್ನ ಮದುವೆಯಲ್ಲಿ ಚಂಡೆವಾದ್ಯ ನುಡಿಸಿ ನೆಟ್ಟಿಗರ ಗಮನ ಸೆಳೆದ ಕೇರಳದ ವಧು
ಈ ವಧು ಜಿಮ್ಪ್ರಿಯೆ ಎನ್ನಿಸುತ್ತದೆ. ಅವಳ ದೇಹವನ್ನು ಗಮನಿಸಿ ABS (Advanced Body System) ಹೊಂದಿದ್ದಾಳೆ ಎಂದಿದ್ದಾರೆ ಒಬ್ಬರು. ಬಹುಶಃ ಈ ಲೆಹೆಂಗಾ 12 ಕಿ. ಗ್ರಾಂ. ಖಂಡಿತ ಇದೆ ಎಂದಿದ್ದಾರೆ ಇನ್ನೊಬ್ಬರು. ಬಹಳ ಚೆನ್ನಾಗಿದ್ದಾಳೆ ವಧು. ದೇಹವೇ ದೇಗುಲ, ದೇಹ ಚೆನ್ನಾಗಿಟ್ಟುಕೊಂಡರೆ ಉಳಿದೆಲ್ಲವೂ ಚೆನ್ನಾಗಿರುತ್ತದೆ ಎಂಬ ಅರಿವು ಈಕೆಗಿದೆ ಎಂದಿದ್ದಾರೆ ಹಲವರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ