ರಸ್ತೆಯಲ್ಲಿ ಅಪಾಯಕಾರಿ ಬೈಕ್ ಸ್ಟಂಟ್ ಮಾಡುತ್ತಾ ಅದನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಡುವವರ ಸಂಖ್ಯೆ ಹೆಚ್ಚಾಗಿದೆ. ಇದೀಗ ಹದಿಯರೆಯದವರಿಗೆ ಸವಾಲೆಸೆಯುಂತೆ ಮಹಿಳೆಯೊಬ್ಬರು ತನ್ನ ಸ್ಕೂಟಿಯಲ್ಲಿ ಸ್ಟಂಟ್ ಮಾಡಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಸದ್ಯ ವಾಹನದಲ್ಲಿ ಡ್ರೈವಿಂಗ್ ಮಾಡುತ್ತಲೇ ಮಹಿಳೆ ಮಾಡುವ ಸಾಹಸ ಕಂಡು ನೆಟ್ಟಿಗರು ಬೆರಗಾಗಿ ಹೋಗಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
@hutia_minati ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಜೂನ್ 17ರಂದು ಹಂಚಿಕೊಂಡಿರುವ ಈ ವಿಡಿಯೋ ಇಲ್ಲಿಯವರೆಗೆ 4ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಮಹಿಳೆಯ ಸ್ಟಂಟ್ಗೆ 18ಸಾವಿರಕ್ಕೂ ಹೆಚ್ಚಿನ ಜನರು ಲೈಕ್ ಮಾಡಿದ್ದಾರೆ. ಯುವಕರಿಗೆ ಸವಾಲೆಸೆಯುಂತೆ ಸ್ಕೂಟರ್ನಲ್ಲಿ ಮಹಿಳೆ ಸ್ಟಂಟ್ ಮಾಡಿದ್ದು, ನೆಟ್ಟಿಗರು ಬಗೆರ ಬಗೆಯಾಗಿ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ರೀಲ್ಸ್ ಗಾಗಿ ಜೀವ ಪಣಕ್ಕಿಟ್ಟು ಬಹು ಮಹಡಿಯ ಕಟ್ಟಡದ ಮೇಲೆ ಯುವತಿಯ ಸ್ಟಂಟ್
ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆ ಕ್ಯಾಮೆರಾಗೆ ಪೋಸ್ ಕೊಡುತ್ತಾ ಸ್ಕೂಟರ್ ಸೀಟಿನಿಂದ ಎದ್ದು ಚಲಿಸುತ್ತಿದ್ದ ಸ್ಕೂಟರ್ ಮೇಲೆ ನಿಂತು ಡ್ಯಾನ್ಸ್ ಮಾಡುತ್ತಿರುವುದನ್ನು ಕಾಣಬಹುದು. ಇತ್ತೀಚಿಗಷ್ಟೇ ಯುವಕನೊಬ್ಬ ಯುವತಿಯನ್ನು ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿಕೊಂಡು ರೋಮ್ಯಾನ್ಸ್ ಮಾಡುತ್ತಾ ಅಪಾಯಕಾರಿಯಾಗಿ ದ್ವಿಚಕ್ರ ವಾಹನ ಚಲಾಯಿಸಿದ್ದ ವಿಡಿಯೋ ವೈರಲ್ ಆಗಿತ್ತು. ವಿಡಿಯೋ ವೈರಲ್ ಆದ ಬೆನ್ನಲ್ಲೇ ಬೈಕ್ ಸವಾರನನ್ನು ಬೆಂಗಳೂರಿನ ಹೆಬ್ಬಾಳ ಸಂಚಾರ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದರು.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ