Viral Video: ಪಾಕಶಾಲೆಯ ಗ್ರೇವಿಯಲ್ಲಿ ಕುಸ್ತಿಯಾಡುವುದರನ್ನು ಎಂದಾದರೂ ನೋಡಿದ್ದೀರಾ? ಇಲ್ಲಿದೆ ನೋಡಿ ವಿಡಿಯೋ

ಕ್ರೇಜಿಯೆಸ್ಟ್ ಪಾಕಶಾಲೆಯ ಸ್ಪರ್ಧೆಗಳಲ್ಲಿ ವಿಶ್ವ ಗ್ರೇವಿ ವ್ರೆಸ್ಲಿಂಗ್ ಚಾಂಪಿಯನ್‌ಶಿಪ್ ಒಂದಾಗಿದೆ. ಗ್ರೇವಿಯಲ್ಲಿ ಯುವಕ ಯುವತಿಯರು ಕುಸ್ತಿಯಾಡುವ ವಿಡಿಯೋ ವೈರಲ್ ಆಗುತ್ತಿದೆ. ಆ ವಿಡಿಯೋ ಇಲ್ಲಿದೆ ನೋಡಿ.

Viral Video: ಪಾಕಶಾಲೆಯ ಗ್ರೇವಿಯಲ್ಲಿ ಕುಸ್ತಿಯಾಡುವುದರನ್ನು ಎಂದಾದರೂ ನೋಡಿದ್ದೀರಾ? ಇಲ್ಲಿದೆ ನೋಡಿ ವಿಡಿಯೋ
ವಿಶ್ವ ಗ್ರೇವಿ ಕುಸ್ತಿ ಚಾಂಪಿಯನ್‌ಶಿಪ್ ವಿಡಿಯೋ ವೈರಲ್
Updated By: Rakesh Nayak Manchi

Updated on: Sep 04, 2022 | 1:53 PM

ನೀವು ಎಂದಾದರೂ ವಿಶ್ವ ಗ್ರೇವಿ ಕುಸ್ತಿ ಚಾಂಪಿಯನ್‌ಶಿಪ್ ಬಗ್ಗೆ ಕೇಳಿದ್ದೀರಾ? ಹೆಸರೇ ಸೂಚಿಸುವಂತೆ ಸ್ಪರ್ಧೆಯು ಅಕ್ಷರಶಃ ಪಾಕಶಾಲೆಯ ಗ್ರೇವಿಯಲ್ಲಿ ಕುಸ್ತಿಯಾಡುವುದಾಗಿದೆ. ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನವೂ ಇದೆ. ಈ ವಾರ್ಷಿಕ ಸ್ಪರ್ಧೆಯನ್ನು ಇಂಗ್ಲೆಂಡ್​ನಲ್ಲಿ ಸ್ಥಳೀಯ ಚಾರಿಟಿಗಾಗಿ ಹಣವನ್ನು ಸಂಗ್ರಹಿಸಲು ಆಯೋಜಿಸಲಾಗುತ್ತದೆ. ಪಂದ್ಯದಲ್ಲಿ ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಕುಸ್ತಿಗಳಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾಳುಗಳು ಭಾಗಿಯಾಗುತ್ತಾರೆ.

ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಈ ಸ್ಪರ್ಧೆಯನ್ನು ಆಗಸ್ಟ್ 29ರಂದು ನಡೆಸಲಾಯಿತು. ಲಂಕಾಷೈರ್‌ನ ರೊಸೆಂಡೇಲ್‌ನಲ್ಲಿರುವ ರೋಸ್ ‘ಎನ್’ ಬೌಲ್ ಪಬ್‌ನ ಹೊರಗೆ ನಡೆದ ವಾರ್ಷಿಕ ಈವೆಂಟ್‌ನಲ್ಲಿ ಅನೇಕ ಕುಸ್ತಿಪಟುಗಳು ಭಾಗವಹಿಸಿದರು. ಸ್ಪರ್ಧೆಯ ನಿಯಮಗಳ ಪ್ರಕಾರ, ಎಲ್ಲಾ ಕುಸ್ತಿಪಟುಗಳು 2 ನಿಮಿಷ ಗ್ರೇವಿಯ ಕೊಳದಲ್ಲಿ ಪರಸ್ಪರ ಹಿಡಿತ ಸಾಧಿಸಬೇಕು.

ವರದಿಯ ಪ್ರಕಾರ, 12ನೇ ವಿಶ್ವ ಗ್ರೇವಿ ವ್ರೆಸ್ಲಿಂಗ್ ಚಾಂಪಿಯನ್‌ಶಿಪ್‌ನ ಪುರುಷರ ಸ್ಪರ್ಧೆಯನ್ನು ಲಾಯ್ಡ್ ಕ್ಲಾರ್ಕ್ಸನ್ ಗೆದ್ದಿದ್ದು, ಮಹಿಳಾ ವಿಭಾಗದಲ್ಲಿ ಇಮೋಜೆನ್ ಯಂಗ್ ಎಂಬವರು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಸದ್ಯ ಈ ಪಂದ್ಯದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನೌ ದಿಸ್ ನ್ಯೂಸ್ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, 1.18 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದ್ದು, 50ಸಾವಿರಕ್ಕೂ ಹೆಚ್ಚು ಲೈಕ್​ಗಳನ್ನು ಗಳಿಸಿದೆ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ