Viral Video: ಟಿಪ್ ಟಿಪ್ ಬರಸಾ ಪಾನಿ, ಊ ಅಂತವಾ ಹಾಡಿಗೆ ಸೊಂಟ ಬಳುಕಿಸಿದ ಕನ್ಯಾಮಣಿಗಳು
ಊ ಅಂತವಾ ಮತ್ತು ಟಿಪ್ ಟಿಪ್ ಬರಸಾ ಪಾನಿ ಹಾಡಿಗೆ ಮೂವರು ಯುವತಿಯರು ಬೆಲ್ಲಿ ಡಾನ್ಸ್ ಮಾಡಿದ್ದಾರೆ. ಕಣ್ಯಮಣಿಗಳು ಸೊಂಟ ಬಳುಕಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ತಿಂಗಳುಗಳೇ ಕಳೆದಿವೆ, ಆದರೆ ತೆಲುಗು ಬ್ಲಾಕ್‌ಬಸ್ಟರ್ ಪುಷ್ಪಾ ಸಿನಿಮಾದ ಊ ಅಂತವಾ ಹಾಡಿನ ಕ್ರೇಸ್ ಮಾತ್ರ ಇನ್ನೂ ನಿಂತಿಲ್ಲ. ಇಂಟರ್ನೆಟ್‌ನಲ್ಲಿ ಇನ್ನೂ ಈ ಹಾಡಿನ ಅಲೆ ನಿಂತಿಲ್ಲ, ಆಗಾಗ್ಗೆ ಈ ಹಾಡಿಗೆ ನೆಟ್ಟಿಗರು ರೀಲ್ಸ್ ಮಾಡುತ್ತಿರುತ್ತಾರೆ, ಮನರಂಜನಾ ಕಾರ್ಯಕ್ರಮಗಳಲ್ಲಿ ಡಾನ್ಸ್ ಮಾಡುತ್ತಿರುತ್ತಾರೆ. ಇನ್ನೊಂದೆಡೆ ಟಿಪ್ ಟಿಪ್ ಬರಸಾ ಪಾನಿ ಹಾಡು ಹಳೆಯದಾದರೂ ಈಗಲೂ ಹೆಚ್ಚಿನ ಯುವತಿಯರಿಗೆ ಅಚ್ಚುಮೆಚ್ಚಿನ ಹಾಡು. ಈ ಎರಡು ಹಿಟ್ ಸಾಂಗ್ಗಳನ್ನು ಹಿಡಿದುಕೊಂಡು ಮೂವರು ಯುವತಿಯರು ಬೆಲ್ಲಿ ಡಾನ್ಸ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುವ ಮೂಲಕ ಗಮನಸೆಳೆಯುತ್ತಿದೆ.
ಇತ್ತೀಚೆಗೆ ನೋಯ್ಡಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸೀರೆಯುಟ್ಟ ಮೂವರು ಯುವತಿಯರು ಬೆಲ್ಲಿ ಡ್ಯಾನ್ಸ್ ಪ್ರದರ್ಶನವನ್ನು ಮಾಡಿದ್ದಾರೆ. ಸಮಂತಾ ರುತ್ ಪ್ರಭು ಒಳಗೊಂಡ ಊ ಅಂಟವಾ ಹಾಡಿಗೆ ಮೂವರು ಮಹಿಳೆಯರು ಬೆಲ್ಲಿ ಡಾನ್ಸ್ ಮಾಡಿದರು. ಈ ಹಾಡಿನ ಮಧ್ಯೆ ಟಿಪ್ ಟಿಪ್ ಬರಸಾ ಪಾನಿ ಹಾಡು ಪ್ಲೇ ಆಗಿದ್ದು, ಇದಕ್ಕೂ ಸಖತ್ ಆಗಿಯೇ ಸೊಂಟ ಬಳುಕಿಸಿದ್ದಾರೆ. ಮಧ್ಯದಲ್ಲಿರುವ ಯುವತಿ ಖುಷಿ ಶರ್ಮಾ ಕೆಂಪು ಸೀರೆಯನ್ನು ಧರಿಸಿದ್ದರೆ, ಉಳಿದ ಇಬ್ಬರು ಯುವತಿಯರು ಅವ್ನಿ ಮತ್ತು ಹನಿ ಕಿತ್ತಳೆ ಬಣ್ಣದ ಸೀರೆಯನ್ನು ಧರಿಸಿದ್ದರು. ಖುಷಿ ಶರ್ಮಾ ಬೆಲ್ಲಿ ಡ್ಯಾನ್ಸ್ ಬೋಧಕರಾಗಿದ್ದು, ಉಳಿದ ಇಬ್ಬರು ಅವರೊಂದಿಗೆ ಬೆಲ್ಲಿ ಡಾನ್ಸ್ ಕಲಿಯುತ್ತಿರುವ ಶಿಷ್ಯಂದಿರಾಗಿದ್ದಾರೆ.
ಬೆಲ್ಲಿ ಡಾನ್ಸ್ ಪ್ರದರ್ಶನದ ವಿಡಿಯೋವನ್ನು ಖುಷಿ ಶರ್ಮಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಮೊದಲ ಬಾರಿ ನಾನು ನನ್ನ ವಿದ್ಯಾರ್ಥಿಗಳೊಂದಿಗೆ ಲೈವ್ ಪ್ರೇಕ್ಷಕರೊಂದಿಗೆ ಪ್ರದರ್ಶನ ನೀಡಿದೆ” ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಈ ರೀಲ್ 13.7 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, 1,100ಕ್ಕೂ ಹೆಚ್ಚು ಲೈಕ್ಗಳು ಬಂದಿವೆ. ಫೇಸ್‌ಬುಕ್‌ನಲ್ಲಿ ಇದೇ ವೀಡಿಯೋ 8 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.
View this post on Instagram
ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ
Published On - 3:41 pm, Sun, 4 September 22