Viral Video: ಮಹಿಳೆಯೊಬ್ಬಳ ಐಡಿಯಾಕ್ಕೆ ಮತ್ತೊಬ್ಬ ಮಹಿಳೆ ಆಸ್ಪತ್ರೆಗೆ ದಾಖಲು!
ಮಹಿಳೆಯೊಬ್ಬರು ತಮ್ಮ ಮನಸ್ಸಿಗೆ ಹೊಳೆದ ಐಡಿಯಾವನ್ನು ಎಸ್ಕಲೇಟರ್ನಲ್ಲಿ ಪ್ರಯೋಗಿಸಿದ ಪರಿಣಾಮ ಎಸ್ಕಲೇಟರ್ ಮೂಲಕ ಕೆಳಗಡೆಗೆ ಹೋಗುತ್ತಿದ್ದ ಮಹಿಳೆ ನೇರವಾಗಿ ಆಸ್ಪತ್ರೆಗೆ ಹೋಗುವಂತಾಗಿದೆ.
ಕೆಲವರ ಐಡಿಯಾಗಳಿಂದ ಸಂಭವಿಸುವ ಅವಘಡಗಳಿಗೆ ಮತ್ತೊಬ್ಬರು ಬಲಿಯಾಗುವುದು ಅಪರೂಪಕ್ಕೊಂದು ಅಲ್ಲೊಂದು ಇಲ್ಲೊಂದು ನಡೆಯುತ್ತಿರುತ್ತದೆ. ಇದೀಗ ಮಹಿಳೆಯೊಬ್ಬರು ತಮ್ಮ ಮನಸ್ಸಿಗೆ ಹೊಳೆದ ಐಡಿಯಾವನ್ನು ಎಸ್ಕಲೇಟರ್ನಲ್ಲಿ ಪ್ರಯೋಗಿಸಿದ ಪರಿಣಾಮ ಎಸ್ಕಲೇಟರ್ ಮೂಲಕ ಕೆಳಗಡೆಗೆ ಹೋಗುತ್ತಿದ್ದ ಮಹಿಳೆ ನೇರವಾಗಿ ಆಸ್ಪತ್ರೆಗೆ ಹೋಗುವಂತಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ.
ಇಬ್ಬರು ಮಹಿಳೆಯರು ಲಗೇಜ್ಗಳನ್ನು ಹಿಡಿದುಕೊಂಡು ಕೆಳಗಿನ ಮಹಡಿಗೆ ಹೋಗಲು ಮುಂದಾಗಿದ್ದಾರೆ. ಇದನ್ನು ಹಿಡಿದುಕೊಂಡು ಹೋಗಲು ಸಾಧ್ಯವಾಗದ ಹಿನ್ನೆಲೆ ಮಹಿಳೆಯೊಬ್ಬರು ತಮ್ಮ ಸೂಟ್ಕೇಸ್ ಅನ್ನು ಎಸ್ಕಲೇಟರ್ನಲ್ಲಿ ಇಟ್ಟು ಸಾಗಿಸುವ ಪ್ರಯತ್ನ ಮಾಡಿದ್ದಾರೆ. ಕಳಮುಖವಾಗಿ ಹೋಗುತ್ತಿದ್ದ ಹಿನ್ನೆಲೆ ಬ್ಯಾಗ್ ಪಲ್ಟಿ ಹೊಡೆದುಕೊಂಡೇ ವೇಗವಾಗಿ ಕೆಳಗಡೆ ಹೋಗಿದೆ. ಈ ವೇಳೆ ಅದೇ ಎಸ್ಕಲೇಟರ್ನಲ್ಲಿ ಹೋಗುತ್ತಿದ್ದ ಮಹಿಳೆಗೆ ಗುದ್ದಿ ಆಕೆ ಜಾರಿ ಬೀಳುವಂತೆ ಮಾಡಿದೆ. ಘಟನೆಯಲ್ಲಿ ಮಹಿಳೆತೀವ್ರ ಗಾಯಗೊಂಡಂತೆ ವಿಡಿಯೋದಲ್ಲಿ ಕಾಣುತ್ತಿದ್ದು, ಆಕೆಯ ನೆರವಿಗೆ ಬಂದ ಒಂದಷ್ಟು ಮಂದಿ ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ.
ವಿಡಿಯೋವನ್ನು Tansu YEGEN ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಕೇವಲ 14 ಸೆಕೆಂಡ್ಗಳಿರುವ ಈ ವಿಡಿಯೋ ಇದುವರೆಗೆ 1.28 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, 2 ಸಾವಿರಕ್ಕೂ ಹೆಚ್ಚು ಲೈಕ್ಗಳು ಬಂದಿವೆ. ವಿಡಿಯೋ ನೋಡಿದ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
OMG? pic.twitter.com/9NRSx7DHLY
— Tansu YEĞEN (@TansuYegen) September 2, 2022
ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ
Published On - 5:23 pm, Sun, 4 September 22