Viral Video : ಪೊಲೀಸ್ ಆಂಟೀ, ನಿಮ್ಮ ಲಾಠಿ ನನಗೆ ಬೇಕು ಅಂದ್ರೆ ಬೇಕು ಅಷ್ಟೆ!
Little Girl in Mumbai : ರಾತ್ರಿಯಾಗಿದೆ. ಮುಂಬೈನ ಮಹಿಳಾ ಪೊಲೀಸ್ ತಮ್ಮಪಾಡಿಗೆ ತಾವು ಕರ್ತವ್ಯ ನಿರತರಾಗಿದ್ದಾರೆ. 21ತಿಂಗಳ ಈ ಹೆಣ್ಣುಮಗು, ತನಗೆ ಲಾಠಿ ಬೇಕು ಎಂದು ದುಂಬಾಲುಬಿದ್ದಿದೆ. ಎಂಟು ಮಿಲಿಯನ್ ನೆಟ್ಟಿಗರು ಈ ಮುದ್ದಾದ ವಿಡಿಯೋಗೆ ಫಿದಾ!
Viral Video : ಪೊಲೀಸ್ ಎಂದರೆ ಮಕ್ಕಳಲ್ಲಿ ಭಯಹುಟ್ಟಿಸಿದ ಪೋಷಕರು ಸಾಕಷ್ಟಿದ್ದಾರೆ. ಹಾಗೆಯೇ ಪೊಲೀಸ್ ಎಂದರೆ ಫ್ರೆಂಡ್ ಎಂದು ಪ್ರೀತಿಯಿಂದ ಅವರೊಂದಿಗೆ ಒಡನಾಟ ಹುಟ್ಟಿಸಿದ ಪೋಷಕರೂ ನಮ್ಮ ನಡುವೆ ಇದ್ದಾರೆ. ಆದರೆ ಕೆಲ ಮಕ್ಕಳು ತಾವಾಗಿಯೇ ಪೊಲೀಸರನ್ನು ಸ್ನೇಹಿತರನ್ನಾಗಿಸಿಕೊಳ್ಳುವ ಪ್ರಯತ್ನ ಮಾಡುತ್ತಾರಲ್ಲ! ಅದು ಬಹಳ ವಿಶೇಷ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿ. ಮುಂಬೈನಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಕೈಯಲ್ಲಿರುವ ಲಾಠಿ ತನಗೆ ಬೇಕೇ ಬೇಕೆಂದು ಈ ಹೆಣ್ಣುಮಗು ಹಠ ಹಿಡಿದಿದೆ. 8 ಮಿಲಿಯನ್ ವೀಕ್ಷಣೆಗೆ ಒಳಗಾಗಿರುವ ಈ ವಿಡಿಯೋ ಬಹಳ ಮುದ್ದಾಗಿದೆ.
View this post on Instagram
ಇನ್ಸ್ಟಾಗ್ರಾಮ್ನಲ್ಲಿ ಕನಿಷ್ಕಾ ಬಿಷ್ಣೋಯ್ ಎಂಬ ಪುಟದಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕನಿಷ್ಕಾಗೆ 21 ತಿಂಗಳು. ಲಾಠಿಯನ್ನು ಆಟಿಕೆ ಎಂದುಕೊಂಡಿದೆಯೋ ಏನೋ. ತನಗದು ಬೇಕು ಎಂದು ಕೇಳುವ ರೀತಿಗೆ ಪೊಲೀಸ್ ಅದು ನಿನಗೆ ಯಾಕೆ ಬೇಕು, ಯಾರಿಗೆ ಹೊಡೆಯಲು ಬೇಕು ಎಂದು ತಮಾಷೆ ಮಾಡಿದ್ದಾರೆ. ಅಮ್ಮನಿಗಾ? ಎಂದಾಗ ಅಸ್ಪಷ್ಟವಾಗಿ ಹೂಂ ಎಂದ ಹಾಗಿದೆ.
ದಿನಗಟ್ಟಲೆ ನಿಂತು ಜಂಜಾಟದಲ್ಲಿ ಕಳೆದುಹೋಗುವ ಪೊಲೀಸ್ ಮುಖದಲ್ಲಿ ಹೀಗೆ ಈ ಮುದ್ದುಕೂಸು ನಗುತರಿಸಿದೆ. ಸಾಕಷ್ಟು ನೆಟ್ಟಿಗರು ಈ ವಿಡಿಯೋ ಮೆಚ್ಚಿ ಕೊಂಡಾಡಿದ್ದಾರೆ. ಮತ್ತೆ ಮತ್ತೆ ನೋಡಿ ನಗುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:24 am, Mon, 5 September 22