Viral Video : ನಾಗರಹಾವಿನೊಂದಿಗೆ ಈ ತಾಯಿಕೋಳಿಯ ಕಾಳಗ
Fighting with Cobra : ತಾಯಿಕೋಳಿಯೊಂದು ನಾಗರಹಾವಿನಿಂದ ತನ್ನ ಮರಿಗಳನ್ನು ರಕ್ಷಿಸುವ ಈ ವಿಡಿಯೋ 3 ಕೋಟಿಯಷ್ಟು ಜನರನ್ನು ಸೆಳೆದಿದೆ. ಇದು ಪೂರ್ವಯೋಜಿತ ವಿಡಿಯೋ ಎಂದು ಕೆಲವರು ಆಕ್ಷೇಪಿಸಿದ್ಧಾರೆ. ನೀವೇನು ಹೇಳುತ್ತೀರಿ?
Viral Video : ಪಕ್ಷಿಯೇ ಆಗಲಿ, ಪ್ರಾಣಿಯೇ ಆಗಲಿ ಅಥವಾ ಮನುಷ್ಯರೇ ಆಗಲಿ. ತಾಯಿಯ ಪ್ರೀತಿ ಎನ್ನುವುದು ಪರಿಶುದ್ಧ. ತಾಯಂದಿರೂ ಯಾವ ಸಂದರ್ಭದಲ್ಲಿಯೂ ಮಕ್ಕಳನ್ನು ರಕ್ಷಿಸಲು ಕಂಕಣಬದ್ಧರಾಗಿರುತ್ತಾರೆ. ಇದಕ್ಕೆ ಸಾಕ್ಷಿ ಈ ವಿಡಿಯೋ. ನಾಗರಹಾವಿನಿಂದ ತನ್ನ ಮರಿಗಳನ್ನು ರಕ್ಷಿಸಲು ಈ ತಾಯಿಕೋಳಿ ಹೇಗೆ ಹೋರಾಡಿದೆ ನೋಡಿ. ನಾಗರಹಾವು ಕೋಳಿ ಮತ್ತದರ ಮರಿಗಳ ಕಡೆಗೆ ಸಮೀಪಿಸುತ್ತಿದ್ದಂತೆ ತಾಯಿಕೋಳಿ ಎಚ್ಚರಗೊಳ್ಳುತ್ತದೆ. ಒಂದು ಸಲ ಅದನ್ನು ಓಡಿಸಲು ಪ್ರಯತ್ನಿಸುತ್ತದೆ ತಾಯಿಕೋಳಿ. ಆದರೂ ನಾಗರಹಾವು ಮತ್ತೆ ಬರುತ್ತದೆ. ಆಗ ತಾಯಿಕೋಳಿ ತನ್ನ ಮರಿಗಳನ್ನು ದೂರ ಓಡಿಸಲು ಪ್ರಯತ್ನಿಸಿ ಇತ್ತ ನಾಗರಹಾವಿನೊಂದಿಗೆ ಕಾದಾಡುತ್ತದೆ.
ಯೂಟ್ಯೂಬ್ನಲ್ಲಿ Wild Cobra ಎಂಬ ಖಾತೆದಾರರಿಂದ ಈ ವಿಡಿಯೋ ಪೋಸ್ಟ್ ಆಗಿದ್ದು ಇದೀಗ ವೈರಲ್ ಆಗಿದೆ. ಈತನಕ ಈ ವಿಡಿಯೋ 3 ಕೋಟಿಯಷ್ಟು ವೀಕ್ಷಣೆಗೆ ಒಳಗಾಗಿದೆ. ಸುಮಾರು 10,000 ಪ್ರತಿಕ್ರಿಯೆಯನ್ನು ಪಡೆದಿದೆ.
‘ಮನುಷ್ಯರಾಗಲಿ ಅಥವಾ ಪ್ರಾಣಿಗಳಾಗಲಿ ತನ್ನ ತಾಯ್ತನದ ಪ್ರೀತಿಯನ್ನು ಕಾಪಾಡಿಕೊಳ್ಳುತ್ತಾರೆ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ಕೋಳಿಮರಿಗಳ ಗುಂಪಿನಲ್ಲಿ ಬಾತುಮರಿಗಳೂ ಇದ್ದವು ಎಂಬುದನ್ನು ನೆಟ್ಟಿಗರೊಬ್ಬರು ಗುರುತಿಸಿ, ‘ಈ ತಾಯಿ ಕೋಳಿ ತನ್ನೊಂದಿಗೆ ಬಾತುಕೋಳಿಗಳನ್ನು ಹೇಗೆ ಹೊಂದಾಣಿಕೆ ಮಾಡಿಕೊಂಡು ಸಾಕುತ್ತಿದೆ. ಪ್ರಶಂಸನೀಯ. ಈ ತಾಯಿಕೋಳಿ ಅದ್ಭುತ’ ಎಂದಿದ್ದಾರೆ.
ಮತ್ತೊಬ್ಬರು, ‘ಇದು ಆಕಸ್ಮಿಕವಾಗಿ ನಡೆದ ಘಟನೆಯಲ್ಲ. ಕ್ಯಾಮೆರಾ ಮೊದಲೇ ಫಿಕ್ಸ್ ಮಾಡಿಟ್ಟಿದ್ದಾರೆ’ ಎಂದಿದ್ದಾರೆ. ಈ ಜಾಗದಲ್ಲಿ ಒಣಹುಲ್ಲು ಇಲ್ಲ, ಆಹಾರದ ಬಟ್ಟಲುಗಳಿಲ್ಲ. ಹಾಗಾಗಿ ಇದು ಸಹಜವಾಗಿ ನಡೆದದ್ದಲ್ಲ’ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಇದೊಂದು ಯೋಜಿತ ಪ್ರಕ್ರಿಯೆ ಎಂಬುದು ಕೆಲ ನೆಟ್ಟಿಗರು ಅಭಿಪ್ರಾಯ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:00 pm, Mon, 5 September 22