AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ತಿನ್ನೋದಕ್ಕೆ ಏನಾದರೂ ಕೊಟ್ರೆ ಮಾತ್ರ ಇವರು ನಿಮಗೆ ಡ್ರಾಪ್ ಕೊಡ್ತಾರೆ

Parrot : ಎಲ್ರಿ ಹೋಗಬೇಕು? ಬನ್ನಿ ಡ್ರಾಪ್​ ಕೊಡ್ತೀನಿ. ಆದರೆ ಮೊದಲು ನನಗೆ ತಿನ್ನೋದಕ್ಕೆ ಏನಾದರೂ ಕೊಡಿ. ಆಮೇಲೆ ಉಳಿದದ್ದು ಅಂತಿದೆ ಈ ಗಿಳಿ. ಇನ್​ಸ್ಟಾಗ್ರಾಂನ ಈ ಗಿಳಿಯ ಪುಟಕ್ಕೆ 74,000 ಫಾಲೋವರ್ಸ್​ ಇದ್ದಾರೆ.

Viral Video : ತಿನ್ನೋದಕ್ಕೆ ಏನಾದರೂ ಕೊಟ್ರೆ ಮಾತ್ರ ಇವರು ನಿಮಗೆ ಡ್ರಾಪ್ ಕೊಡ್ತಾರೆ
ಹೇಗಿದೆ ನನ್ ಸೈಕಲ್!
TV9 Web
| Edited By: ಶ್ರೀದೇವಿ ಕಳಸದ|

Updated on:Sep 05, 2022 | 3:51 PM

Share

Viral Video : ಇನ್​ಸ್ಟಾಗ್ರಾಮ್​ನಲ್ಲಿ ತಮ್ಮ ಸಾಕುಪ್ರಾಣಿ ಪಕ್ಷಿಗಳಿಗೆಂದೇ ಪುಟಗಳನ್ನು ತೆರೆದವರ ಸಂಖ್ಯೆ ಮಿಲಿಯಗಟ್ಟಲೆ ಇದೆ. ಸಾಕುಪ್ರಾಣಿ ಪಕ್ಷಿಗಳಿಗೆ ಕೌಶಲಯುತವಾದ ಅಥವಾ ಸಹಜವಾದ ಚಟುವಟಿಕೆಗಳನ್ನು ವಿಡಿಯೋ ಮಾಡಿ ಅಪ್​ಲೋಡ್ ಮಾಡುವುದು ಪ್ರಾಣಿಪ್ರಿಯರ ದೊಡ್ಡ ಹವ್ಯಾಸವಾಗಿ ರೂಪುಗೊಂಡಿದೆ. ಈ ರೀಲ್​ಗಳಿಂದ ಆನ್​ಲೈನ್​ನಲ್ಲಿ ಹಣ ಗಳಿಕೆಯನ್ನೂ ಮಾಡಬಹುದು ಎನ್ನುವುದು ಗೊತ್ತಾದ ಬಳಿಕವಂತೂ ಅನೇಕರು ಇಂಥ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಕೊಳ್ಳಲು ಪ್ರಾರಂಭಿಸಿದ್ದಾರೆ. ಈ ಗಿಳಿ ಪುಟ್ಟ ಬೈಸಿಕಲ್​ ಓಡಿಸಿದ ವಿಡಿಯೋ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಆಗುತ್ತಿದ್ದಂತೆ ವೈರಲ್ ಆಗಿದೆ. Mauiconure ಎಂಬ ಇನ್​ಸ್ಟಾಗ್ರಾಂ ಖಾತೆದಾರರು ಆಗಾಗ ಈ ಗಿಳಿಯ ಪುಟಾಣಿ ಜಗತ್ತಿನ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ವಿಡಿಯೋ ನೋಡಿದ ನೆಟ್ಟಿಗರು, ಎಂಥ ಪ್ರತಿಭಾವಂತ ಗಿಳಿ ಇದು, ಎಷ್ಟು ಚೆನ್ನಾಗಿ ಸೈಕಲ್​ ಓಡಿಸಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪುಟ್ಟ ಪಾದಗಳಿಂದ ಅದು ಪೆಡಲ್ ಮಾಡುವುದಂತೂ ಅದ್ಭುತ. ನೋಡಿ ಮೋಯಿ ಎಂಬ ಗಿಳಿಯ ಈ ವಿಡಿಯೋ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಇನ್​ಸ್ಟಾಗ್ರಾಂ ಪುಟಕ್ಕೆ ಈಗಾಗಲೇ 74,000 ಫಾಲೋವರ್ಸ್​ಗಳಿದ್ದಾರೆ. ‘ಇವನಿಗೆ ಬೀಜಗಳನ್ನು ತಿನ್ನುವುದೆಂದರೆ ಬಹಳ ಪ್ರೀತಿ. ಅದಕ್ಕೆ ಯಾವಾಗಲೂ ಹುಡುಕುತ್ತಿರುತ್ತಾನೆ. ಅದನ್ನು ಅವನಿಂದ ಮರೆಮಾಚಿಡಲೇಬೇಕು’ ಎಂಬ ಒಕ್ಕಣೆಯೊಂದಿಗೆ ಈ ವಿಡಿಯೋ ಶುರುವಾಗುತ್ತದೆ. ಆಗಸ್ಟ್ 22 ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಇದು ಸುಮಾರು 43,000 ಲೈಕ್ಸ್​ ಪಡೆದಿದೆ.

ನೆಟ್ಟಿಗರು ಈ ಗಿಳಿಗೆ ಮನಸೋತು ಸಾಕಷ್ಟು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ನಮ್ಮ ಮನೆಗೆ ಬರುತ್ತೀಯಾ ಎಂದೊಬ್ಬರು ಕೇಳಿದ್ದಾರೆ. ಪೆಡಲಿಂಗ್​​ನಲ್ಲಿ ಎಷ್ಟು ಹಿಡಿತವಿದೆ ಇವನಿಗೆ ಎಂದು ಮತ್ತೊಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ತರಬೇತಿ ಕೊಟ್ಟರೆ ಯಾರೂ ಯಾವುದನ್ನೂ ಕಲಿಯಬಹುದು ಅನ್ನೋದಕ್ಕೆ ಈ ಗಿಳಿಯೇ ಸಾಕ್ಷಿ. ಅನೇಕ ಕೌಶಲಗಳನ್ನು ಇದು ರೂಢಿಸಿಕೊಂಡು ಪ್ರದರ್ಶಿಸಿಕೊಂಡ ಅನೇಕ ವಿಡಿಯೋಗಳು ಇನ್​ಸ್ಟಾಗ್ರಾಂನಲ್ಲಿ ಲಭ್ಯವಿವೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 3:38 pm, Mon, 5 September 22

Follow Us
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು