Viral Video : ಅಯ್ಯೋ ಈ ಕ್ಯಾರೆಟ್, ಈ ಬ್ರೊಕೋಲಿ, ಈ ಕುಂಬಳಕಾಯಿ; ನಿಲ್ಸಿ ಅಗ್ನಿಪರೀಕ್ಷೆ

Golden Retriever : ನನಗೆ ನಾಲಗೆಗೆ ರುಚಿಯಾದದ್ದು ಕೊಡಿ. ಆರೋಗ್ಯಕ್ಕೆ ಒಳ್ಳೆಯದು ಅನ್ನೋದನ್ನೆಲ್ಲ ನೀವೇ ತಿನ್ನಿ ಎಂದು ಹಠ ಹಿಡಿದಿದ್ದಾರೆ ಇದರಲ್ಲೊಬ್ಬ ಗೋಲ್ಡನ್​ ರಿಟ್ರೈವರ್ ಮಹಾರಾಜರು.

Viral Video : ಅಯ್ಯೋ ಈ ಕ್ಯಾರೆಟ್, ಈ ಬ್ರೊಕೋಲಿ, ಈ ಕುಂಬಳಕಾಯಿ; ನಿಲ್ಸಿ ಅಗ್ನಿಪರೀಕ್ಷೆ
ನನಗಿಷ್ಟವಾದದ್ದನ್ನೇನೂ ಕೊಡ್ತಿಲ್ಲ ಇವರು!
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 05, 2022 | 2:57 PM

Viral Video : ರುಚಿರುಚಿಯಾದುದನ್ನು ಮಾತ್ರ ತಿನ್ನುವುದನ್ನು ರೂಢಿಸಿಕೊಂಡವರಿಗೆ ಆರೋಗ್ಯಕ್ಕೆ ಉಪಯಯಕ್ತವಾದುದನ್ನು ತಿನ್ನಲು ಕೊಟ್ಟು ನೋಡಿ. ದೊಡ್ಡ ಅಗ್ನಿಪರೀಕ್ಷೆ ಎಂಬಂತೆ ಅವರು ವರ್ತಿಸುತ್ತಾರೆ. ಇದು ಮನುಷ್ಯರಿಗಷ್ಟೇ ಅಲ್ಲ ಪ್ರಾಣಿಗಳಿಗೂ ಅನ್ವಯಿಸುತ್ತದೆ. ಇನ್​ಸ್ಟಾಗ್ರಾಂನಲ್ಲಿ ಇತ್ತೀಚೆಗೆ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಅಗ್ನಿಪರೀಕ್ಷೆಗೆ ಒಳಗಾದವರ ಮುಖ ಹೇಗಿರುತ್ತದೆ ಎಂದು ನೋಡಬಹುದು! ಇಲ್ಲಿ ಎರಡು ಗೋಲ್ಡನ್​ ರಿಟ್ರೈವರ್ ನಾಯಿಗಳಿವೆ. ಇವುಗಳಿಗೆ ಕೆಲ ತರಕಾರಿಗಳು, ಹಣ್ಣುಗಳನ್ನು ತಿನ್ನಲು ಕೊಡಲಾಗಿದೆ. ಒಂದು ನಾಯಿ ಎಷ್ಟು ಖುಷಿಯಿಂದ ತಿನ್ನುತ್ತದೆ ಇನ್ನೊಂದು ಏನೆಲ್ಲ ಎಕ್ಸ್​ಪ್ರೆಷನ್ ಕೊಡುತ್ತದೆ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋದಲ್ಲಿ ಏನು ನಡೆಯುತ್ತಿದೆ ಎಂದು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಟೆಕ್ಸ್ಟ್​ ಕೊಡಲಾಗಿದೆ. ಬಹುಶಃ ಅದನ್ನು ಓದಬೇಕಂತೇನಿಲ್ಲ, ನಾಯಿಗಳ ಮುಖ ನೋಡಿದರೆ ಸಾಕು ಎಲ್ಲವೂ ಅರ್ಥವಾಗಿಬಿಡುತ್ತದೆ. ಬಹಳ ಮುದ್ದನ್ನು ಬಯಸುವ ಈ ಗೋಲ್ಡನ್ ರಿಟ್ರೈವರ್ ನಾಯಿಗಳದ್ದು ತಮಗೆ ಬೇಕಿರುವುದನ್ನು ಬೇಡವಾಗಿರುವುದನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವ ಚುರುಕು ಬುದ್ಧಿಮತ್ತೆ.

ಸಾಮಾನ್ಯವಾಗಿ ಮಾಂಸಾಹಾರಿಗಳಾದ ನಾಯಿಗಳು ಹೇಗೆ ತಿಂದಾವು ಬ್ರೊಕೋಲಿ, ಕುಂಬಳಕಾಯಿ, ಕ್ಯಾರೆಟ್, ಬಾಳೆಹಣ್ಣು ಮುಂತಾದವನ್ನು? ಆದರೂ ಕೆಲ ಸಾಕುಪ್ರಾಣಿಗಳಿಗೆ ಏನು ಅಭ್ಯಾಸ ಮಾಡಿಸುತ್ತೇವೋ ಅದನ್ನೇ ತಿನ್ನುತ್ತವೆ. ಇನ್ನೂ ಕೆಲವು ಹೀಗೆ ಮುದ್ದು ಬರುವ ಹಾಗೆ ಮುಖ ಮಾಡಿಕೊಂಡು ಕುಳಿತುಕೊಳ್ಳುತ್ತವೆ. ಕೊನೆಗೆ ಅವುಗಳಿಗೆ ಏನಿಷ್ಟವೋ ಅದನ್ನೇ ಕೊಟ್ಟು ಶರಣಾಗಬೇಕಾಗುತ್ತದೆ ಅವುಗಳ ಪೋಷಕರು. ಎಷ್ಟೇ ಆದರೂ ಇವೂ ಮಕ್ಕಳೇ ತಾನೆ ಸಾಕಿದವರಿಗೆ, ಮನನೋಯಿಸಲಾದೀತೆ?

ವಿವಿಧ ರೀತಿಯಲ್ಲಿ ಈ ಮುದ್ದು ದೃಶ್ಯವನ್ನು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:54 pm, Mon, 5 September 22

ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು
ಹ್ಯಾಟ್ರಿಕ್ ಅರ್ಧಶತಕ ಸಿಡಿಸಿದ ಗ್ಲೆನ್ ಮ್ಯಾಕ್ಸ್‌ವೆಲ್..!
ಹ್ಯಾಟ್ರಿಕ್ ಅರ್ಧಶತಕ ಸಿಡಿಸಿದ ಗ್ಲೆನ್ ಮ್ಯಾಕ್ಸ್‌ವೆಲ್..!