Trending : ಇಷ್ಟೊಂದು ಹೂವಿನ ರಾಶಿಗಳಲ್ಲಿ ಐದು ಚಿಟ್ಟೆಗಳು ಅಡಗಿವೆ, ಹುಡುಕಬಹುದಾ?
Brain Teaser : ಟೀ ಬ್ರೇಕ್ನಲ್ಲಿ ಈ ಬ್ರೇನ್ ಟೀಸರ್ ಬಿಡಿಸಬಹುದೆ? ಕೆಲಸ ಮಾಡಿ ಸುಸ್ತಾದ ನಿಮಗೆ ಇದು ಖಂಡಿತ ರೀಫ್ರೆಷ್ ಕೊಡುತ್ತದೆ.
Trending : ಮೆದುಳಿಗೆ ಕಸರತ್ತು ನೀಡುವ ಆನ್ಲೈನ್ ಚಟುವಟಿಕೆಗಳಲ್ಲಿ ಈಗಾಗಲೇ ಸಾಕಷ್ಟು ಸಲ ತೊಡಗಿಕೊಂಡಿದ್ದೀರಿ. ಇಲ್ಲಿರುವ ಈ ಚಿತ್ರದಲ್ಲಿ ಇಷ್ಟೊಂದು ಹೂಗಳಲ್ಲಿ ಅಡಗಿರುವ ಚಿಟ್ಟೆಗಳನ್ನು ಹುಡುಕಬಹುದೆ? ಮೇಲ್ನೋಟಕ್ಕೆ ಇದೊಂದು ಸರಳವಾದ ಬ್ರೇನ್ ಟೀಸರ್. ಆದರೆ ನೆಟ್ಟಿಗರು ಚಿಟ್ಟೆಗಳನ್ನು ಹುಡುಕಲು ಸಾಕಷ್ಟು ಸರ್ಕಸ್ ಮಾಡಿದ್ದಾರೆ. ನೀವೂ ಪ್ರಯತ್ನಿಸಬಹುದೆ? ಈ ಬ್ರೇನ್ ಟೀಸರ್ ರಚಿಸಿದವರು ಖ್ಯಾತ ಚಿತ್ರಕಾರ ಗೆರ್ಗೆಲಿ ಡುಡಾಸ್. ಸಾಮಾಜಿಕ ಜಾಲತಾಣದಲ್ಲಿ 1.6 ಲಕ್ಷ ಫಾಲೋವರ್ಸ್ಗಳನ್ನು ಇವರು ಹೊಂದಿದ್ದಾರೆ. ‘ನೀವು ಐದು ಚಿಟ್ಟೆಗಳನ್ನು ಹುಡುಕಬಹುದೇ?’ ಎಂಬ ಶೀರ್ಷಿಕೆಯೊಂದಿಗೆ ಅವರು ಪೋಸ್ಟ್ ಮಾಡಿದ್ದಾರೆ. ವಿವಿಧ ಬಣ್ಣದ, ವಿವಿಧ ಗಾತ್ರಗಳ ಹೂಗಳ ರಾಶಿಯೊಳಗೆ ಕೆಲ ಪ್ರಾಣಿಗಳೂ ಇವೆ. ಕಷ್ಟ ಅಲ್ಲವೆ ಐದು ಚಿಟ್ಟೆಗಳನ್ನು ಗುರುತಿಸುವುದು?
ಆಗಸ್ಟ್ 13 ರಂದು ಈ ಪೋಸ್ಟ್ ಮಾಡಿದ ನಂತರ, ಸುಮಾರು 450 ಪ್ರತಿಕ್ರಿಯೆಗಳನ್ನು ಇದು ಹೊಂದಿದೆ. 110 ಕ್ಕೂ ಹೆಚ್ಚು ಮರುಹಂಚಿಕೆಗಳು ಆಗಿವೆ. ನನಗೆ ಮೂರು ಚಿಟ್ಟೆಗಳು ಸಿಕ್ಕಿವೆ. ಉಳಿದ ಎರಡು ಸಿಕ್ಕಿಲ್ಲ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ನನಗೆ ಎಲ್ಲೂ ಕಾಣುತ್ತಿಲ್ಲ ಚಿಟ್ಟೆಗಳು ಎಂದು ಮತ್ತೊಬ್ಬರು ಹೇಳಿದ್ದಾರೆ.
ಮತ್ತೆ ಈ ಚಿತ್ರ ನೋಡಿ ಚಿಟ್ಟೆಗಳನ್ನು ಹುಡುಕಲು ಪ್ರಯತ್ನಿಸಿ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ