Viral Video : ಜಿಮ್ ಸಲಕರಣೆಯಲ್ಲಿ ತಲೆಕೆಳಗಾಗಿ ಸಿಲುಕಿದ ಮಹಿಳೆ, ಸ್ಮಾರ್ಟ್ವಾಚ್ ಮೂಲಕ 911ಗೆ ಕರೆ
Woman Stuck in Gym : ಬೆಳಗಿನ ಜಾವ 3ರ ಹೊತ್ತು. ಜಿಮ್ ಮಶೀನ್ನಲ್ಲಿ ಈಕೆ ತಲೆಕೆಳಗಾಗಿ ಸಿಲುಕಿಕೊಂಡಿದ್ಧಾರೆ. ಎಷ್ಟು ಕೂಗಿದರೂ ಸಹಾಯಕಿಗೆ ಕೇಳುತ್ತಿಲ್ಲ. ಆಗ ದಾರಿಗಾಣದೆ ತುರ್ತು ಸಹಾಯಕ್ಕೆ ಮೊರೆ ಹೋಗಿದ್ದಾರೆ.
Viral Video : ಓಹಿಯೋದ ಮಹಿಳೆಯೊಬ್ಬರು ಜಿಮ್‌ನಲ್ಲಿ ವರ್ಕ್‌ಔಟ್ ಮಾಡುವಾಗ ಜಿಮ್ ಸಲಕರಣೆಯಲ್ಲಿ ತಲೆಕೆಳಗಾಗಿ ಸಿಲುಕಿಕೊಂಡು ಬಿಟ್ಟಿದ್ದಾರೆ. ಸುತ್ತಮುತ್ತಲೂ ಯಾರೂ ಇಲ್ಲ. ಜಿಮ್ ಸಹಾಯಕರನ್ನು ಕೂಗಿದರೆ ಅವರು ಆ ಸ್ಥಳದಲ್ಲಿರಲಿಲ್ಲ. ಇವರ ಕೂಗು ಅವರಿಗೆ ಕೇಳಿಯೇ ಇಲ್ಲ. ಎಷ್ಟಂತ ತಲೆಕೆಳಗಾಗಿ ಇರುವುದು? ತಲೆ ಭಾರವೆನ್ನಿಸತೊಡಗಿದೆ. ಮೇಲೇಳಲಾಗುತ್ತಿಲ್ಲ. ಇದಕ್ಕೆ ಪರಿಹಾರವೇ ಇಲ್ಲ ಎಂದೆನ್ನಿಸಿ ಕೊನೆಗೆ ಮುಜುಗರದಿಂದಲೇ 911 ಗೆ ತುರ್ತು ಅವರು ಕರೆ ಮಾಡಿದ್ದಾರೆ. ಕ್ರಿಸ್ಟಿನ್ ಫಾಲ್ಡ್ಸ್ ತಮ್ಮ ಈ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ ನಂತರ ಸಾಕಷ್ಟು ವೈರಲ್ ಆಗಿದೆ.
‘This is so embarrassing’ — A woman went viral after getting stuck upside down on an exercise machine and calling 911 for help ? pic.twitter.com/8nod8P6oQl
ಇದನ್ನೂ ಓದಿ— NowThis (@nowthisnews) September 5, 2022
ಕ್ರಿಸ್ಟಿನ್ ಬೆಳಗ್ಗೆ 3ಗಂಟೆಗೆ ಮಾಡುತ್ತಿದ್ದ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ಧಡೂತಿ ದೇಹ ಬೇರೆ. ಬೆನ್ನು ನೋವಿನ ಸಲುವಾಗಿ ಅವರು ಈ ವ್ಯಾಯಾಮವನ್ನು ಮಾಡುತ್ತಿದ್ದರು. ಹೀಗಿರುವಾಗಲೇ ಆ ಜಿಮ್ ಮಶೀನ್ ಕೈಕೊಟ್ಟಿದೆ. ಅವರ ಕಾಲುಗಳು ಆ ಮಶೀನಿನೊಳಗೆ ಬಂಧಿಯಾದಾಗ ಏನು ಮಾಡಲು ಸಾಧ್ಯ? ಜಗತ್ತು ಉಲ್ಟಾ ಕಾಣತೊಡಗಿದೆ! ಜಿಮ್‌ನಲ್ಲಿ ಪ್ಲೇ ಆಗುತ್ತಿದ್ದ ಜೋರಾದ ಮ್ಯೂಸಿಕ್ನಿಂದಾಗಿ ಕ್ರಿಸ್ಟಿನ್ ತನ್ನ ಸಹಾಯಕರಿಗೆ ಕರೆದರೂ ಅದು ಅವರಿಗೆ ತಲುಪದೇ ಇದ್ದಾಗ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ ಆಕೆ. ಆಗ ಅವರಿಗೆ ಉಳಿದದ್ದು ಒಂದೇ ಆಯ್ಕೆ 911 ಗೆ ಕರೆ ಮಾಡುವುದು.
ಸುಮಾರು ಐದರಿಂದ ಆರು ನಿಮಿಷಗಳ ನಂತರ ಅವರು ಸ್ಮಾರ್ಟ್ ವಾಚ್ ಮೂಲಕ 911 ಗೆ ಕರೆ ಮಾಡಿದ್ದಾರೆ. ‘ಹಾಯ್, ಜಿಮ್‌ನಲ್ಲಿ ನಾನೊಬ್ಬಳೇ ಇದ್ದೇನೆ. ತಲೆಕೆಳಗಾಗಿ ಮಶೀನ್ನಲ್ಲಿ ಸಿಲುಕಿಕೊಂಡಿದ್ದೇನೆ. ಇದರಿಂದ ಪಾರಾಗುವುದು ಹೇಗೆಂದು ನಿಮಗೆ ಗೊತ್ತೇ? ಎಂದು ತುರ್ತು ಪರಿಸ್ಥಿತಿ ಸಿಬ್ಬಂದಿಗೆ ಕೇಳಿದ್ದಾರೆ.
ಕೆಲ ನಿಮಿಷಗಳ ನಂತರ ತುರ್ತು ತಂಡದವರು ಬಂದು ಕ್ರಿಸ್ಟಿನ್ಗೆ ಸಹಾಯ ಮಾಡಿದ್ದಾರೆ. ನಂತರ ತನಗೆ ಸ್ವಲ್ಪ ಕಾಲ ತಲೆನೋವು ಇತ್ತು ಎಂದು ಕ್ರಿಸ್ಟಿನ್ ಹೇಳಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:44 am, Mon, 5 September 22