ಮಾತೃಭಾಷೆಯ ಹೊರತಾಗಿ ಬೇರೊಂದು ಭಾಷೆಯ ಪದಗಳನ್ನು ಮಾತನಾಡುವಾಗ ಪದಗಳು, ಮಾತನಾಡುವ ಶೈಲಿ ಮತ್ತು ಉಚ್ಚರಣೆ ವಿಭಿನ್ನವಾಗಿ ಇರುತ್ತದೆ. ಇದನ್ನೇ ಮುಂದಿಟ್ಟುಕೊಂಡು ಕ್ರಿಯಾಶೀಲವಾಗಿ ವಿಡಿಯೋ ಮಾಡಿದ ಯುವತಿಯೊಬ್ಬಳು, ಹಿಂದಿ ವಾಕ್ಯವನ್ನು ವಿವಿಧ ವಿದೇಶಿ ಉಚ್ಚಾರಣೆಗಳಲ್ಲಿ ಹೇಳಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ (Video Viral) ಆಗುತ್ತಿದ್ದು, ಯುವತಿ ಅಮೆರಿಕ, ರೂಸಿಯಾನ್ ಸೇರಿದಂತೆ ನಾಲ್ಕೈದು ವಿದೇಶಿ ಭಾಷಾ ಉಚ್ಚಾರಣೆಗಳೊಂದಿಗೆ ಹಿಂದಿಯನ್ನು ಮಾತನಾಡುವುದನ್ನು ತೋರಿಸುವ ವಿಡಿಯೋ ಇದಾಗಿದೆ.
ಅಹಲ್ಯಾ ಬಮ್ರೂ ಅವರು ಈ ವಿಡಿಯೋವನ್ನು ಮಾಡಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ ಅವರು “ಗ್ಲೋಬಲ್ ದೇಸಿ” ಎಂದು ಶೀರ್ಷಿಕೆ ಬರೆದಿದ್ದಾರೆ. ಯುವತಿ ತಾನು ತಾನು ಏನು ಮಾಡಲಿದ್ದೇನೆ ಎಂಬುದನ್ನು ವಿವರಿಸುವಲ್ಲಿಂದ ವಿಡಿಯೋ ಕ್ಲಿಪ್ ಆರಂಭವಾಗುತ್ತದೆ. ನಂತರ ಅವಳು ಅಮೆರಿಕ, ರುಸಿಯಾನ್, ಫ್ರೆಂಚ್, ಬ್ರಿಟಿಷ್ ಭಾಷೆಗಳಲ್ಲಿ ಹಿಂದಿ ಪದಗುಚ್ಛಗಳನ್ನು ಉಚ್ಚಾರಣೆ ಮಾಡುತ್ತಾಳೆ.
ಆರು ದಿನಗಳ ಹಿಂದೆ ಪೋಸ್ಟ್ ಮಾಡಲಾಗಿರುವ ಈ ವಿಡಿಯೋ, 2.1 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದ್ದು, ವೀಕ್ಷಣೆಗಳ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಅಲ್ಲದೆ 3 ಲಕ್ಷಕ್ಕೂ ಹೆಚ್ಚು ಲೈಕ್ಗಳನ್ನು ಗಳಿಸಿದ್ದು, ಹಲವಾರು ಕಾಮೆಂಟ್ಗಳು ಬಂದಿವೆ.
ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, “ನಂಬಲು ಸಾಧ್ಯವಿಲ್ಲ, ಎಂದಿಗೂ ನಿಲ್ಲಿಸಬೇಡಿ” ಎಂದು ಹೇಳಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ, “ನಿಜವಾಗಿಯೂ ಬ್ರಿಟಿಷ್ ಹಿಂದಿಯನ್ನು ಮಾಡಲು ನಾನು ಬಯಸುತ್ತೇನೆ, ನಾನು ಖಚಿತವಾಗಿ ಬ್ರಿಟಿಷ್ ಇಂಗ್ಲಿಷ್ ಉಚ್ಚಾರಣೆಯನ್ನು ಪಡೆಯಲು ಸಾಧ್ಯವಿಲ್ಲ!” ಎಂದು ಹೇಳಿದ್ದಾರೆ. ಮೂರನೆಯವರು ಕಾಮೆಂಟ್ ಮಾಡಿದ್ದಾರೆ. “ನಾನು ಕಲ್ಪನೆಯನ್ನು ಇಷ್ಟಪಟ್ಟೆ ಮತ್ತು ನೀವು ತುಂಬಾ ಪ್ರತಿಭಾವಂತರು! ಇವುಗಳಲ್ಲಿ ಹೆಚ್ಚಿನದನ್ನು ಮಾಡುತ್ತಾ ಇರಿ” ಎಂದು ಹೇಳಿದ್ದಾರೆ.
Published On - 5:48 pm, Fri, 22 July 22