ಬ್ರಿಟಿಷರು ಅಕ್ಟೋಬರ್ 31ರಂದು ಹ್ಯಾಲೋವೀನ್ ಆಚರಣೆಯನ್ನು (halloween costume viral) ಮಾಡುತ್ತಾರೆ. ಈ ಆಚರಣೆಯ ದಿನದಂದು ಭೂತಗಳ ವೇಷ ಹಾಕಿಕೊಂಡು ತಿರುಗಾಡುತ್ತಾರೆ. ಭಾರತದ ಕೆಲವು ಕಡೆ ಈ ಆಚರಣೆಯನ್ನು ಮಾಡುತ್ತಾರೆ. ಈ ವರ್ಷ ಹ್ಯಾಲೋವೀನ್ ಆಚರಣೆ ಪ್ರಯುಕ್ತ ಸುಶ್ಮಿತಾ ಎಂಬುವವರು ತಮ್ಮ ಕಚೇರಿಗೆ ನಾಗವಲ್ಲಿ ವೇಷ ಹಾಕಿಕೊಂಡು ಬಂದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಶ್ಮಿತಾ ಅವರು ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಮಿಲಿಯನ್‌ಗಟ್ಟಲೆ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋ ನೋಡಿ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ಸುಶ್ಮಿತಾ ಅವರು “ಇದು ಹ್ಯಾಲೋವೀನ್ ಪ್ರಯುಕ್ತ ನಾನು ಭಾರತದ ಭೂತ ನಾಗವಲ್ಲಿ ವೇಷದಲ್ಲಿ ಆಫೀಸ್ಗೆ ಹೋಗಿದ್ದೆ” ಎಂದು ಶೀರ್ಷಿಕೆಯನ್ನು ಕೂಡ ಬರೆದುಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಸುಶ್ಮಿತಾ ಅವರು ನಾಗವಲ್ಲಿ ವೇಷದಲ್ಲಿ ಕಚೇರಿಗೆ ಬರುವುದನ್ನು ನೋಡಬಹುದು, ನಡಿಗೆ, ನಟನೆ ಎಲ್ಲವೂ ಕೂಡ ನಾಗವಲ್ಲಿಯಂತೆ ಇದೆ. ಅವರ ನಟನೆಗೆ ಅಲ್ಲಿದ್ದ ಸಹೋದ್ಯೋಗಿಗಳು ಚಪ್ಪಾಳೆ, ಶಿಳ್ಳೆಯನ್ನು ಹಾಕುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಜತೆಗೆ ಅಲ್ಲಿದ್ದ ಇತರ ಉದ್ಯೋಗಿಗಳು ಕೂಡ ಹ್ಯಾಲೋವೀನ್ ವೇಷಭೂಷಣಗಳನ್ನು ಧರಿಸಿದ್ದರು. ಇನ್ನುಸುಶ್ಮಿತಾ ಅವರು ನಾಗವಲ್ಲಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ ಎಂದು ನೆಟ್ಟಿಗರು ಹೇಳಿದ್ದಾರೆ. ಈ ಪಾತ್ರಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ಕೂಡ ಬಂದಿದೆ.
ಇದನ್ನೂ ಓದಿ: ತಡರಾತ್ರಿ ಮನೆಗೆ ಬಂದ ಮಗನನ್ನು ಆರತಿ ಎತ್ತಿ ಮನೆಯೊಳಗೆ ಬರಮಾಡಿಕೊಂಡ ತಂದೆ
ಮಹಿಳೆ ನಾಗವಲ್ಲಿ ಪಾತ್ರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ನಾನು ನೋಡಿದ ನಿಜವಾದ ನಾಗವಲ್ಲಿ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಹ್ಯಾಲೋವೀನ್ ಆಚರಣೆಗೆ ಸರಿಯಾದ ಭೂತ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಒಂದು ವೇಳೆ ಆ ಮಹಿಳೆ ನನ್ನ ಮುಂದೆ ಬಂದಿದ್ದಾರೆ ನಾನು ಅಲ್ಲಿಂದ ಓಡುತ್ತಿದ್ದೆ ಎಂದು ಕಮೆಂಟ್ ಮಾಡಿದ್ದಾರೆ. ಇದೊಂದು ಈ ವರ್ಷದ ಅತ್ಯುತ್ತಮ ಹ್ಯಾಲೋವೀನ್ ವೇಷಭೂಷಣ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ