Viral Video: ಜ್ವಾಲಾಮುಖಿಯಲ್ಲಿ ಬೇಯಿಸಿದ ಪಿಝಾ ನಿಮಗೂ ಬೇಕೆ? ಬನ್ನಿ ಗ್ವಾಟಿಮಾಲಾಗೆ

|

Updated on: Jul 15, 2023 | 4:58 PM

Volcano : ಪಕಾಯಾದಲ್ಲಿ 1921ರಲ್ಲಿ ಸ್ಫೋಟಿಸಿದ ಜ್ವಾಲಾಮುಖಿ ಇನ್ನೂ ಜೀವಂತವಾಗಿದೆ. ಇಲ್ಲಿಯ ರಾಷ್ಟ್ರೀಯ ಉದ್ಯಾನಕ್ಕೆ ಹೋದರೆ ಅದರ ಶಾಖದಲ್ಲಿಯೇ ಬೇಯಿಸಿಕೊಟ್ಟ 'ಪಿಝಾ ಪಕಾಯಾ' ಸವಿಯಬಹುದಾಗಿದೆ.

Viral Video: ಜ್ವಾಲಾಮುಖಿಯಲ್ಲಿ ಬೇಯಿಸಿದ ಪಿಝಾ ನಿಮಗೂ ಬೇಕೆ? ಬನ್ನಿ ಗ್ವಾಟಿಮಾಲಾಗೆ
ಗ್ವಾಟಿಮಾಲಾದಲ್ಲಿ ಜ್ವಾಲಾಮುಖಿಯ ಮೇಲೆ ಬೇಯಿಸಿದ ಪಿಝಾ ತಿನ್ನುತ್ತಿರುವ ಮಹಿಳೆ
Follow us on

Guatemala : ನಾವು ಅನೇಕ ಆಹಾರ ಸಂಸ್ಕೃತಿಯನ್ನು ರೂಢಿಸಿಕೊಂಡಿದ್ದೇವೆ, ಹಾಗೆಯೇ ಭಿನ್ನ ಪಾಕವಿಧಾನಗಳನ್ನೂ. ನಮ್ಮ ಭೌಗೋಳಿಕ ಹಿನ್ನೆಲೆಯಲ್ಲಿ ಅವುಗಳ ಸ್ವರೂಪ ಬೇರೆಬೇರೆಯಾಗಿರುತ್ತದೆ. ಪಿಝಾ ಮಾಡಲು ಓವನ್ ಬೇಕು ಅಥವಾ ತವಾ ಇಲ್ಲವೆ ಕುಕ್ಕರ್ ಬೇಕು. ಆದರೆ ಜ್ವಾಲಾಮುಖಿ (Volcano) ಬೇಕಾಗುತ್ತಾ? ಹೌದು ಎನ್ನುತ್ತಿದ್ದಾರೆ ಗ್ವಾಟಿಮಾಲಾದ ಜನತೆ. ಇಲ್ಲೊಬ್ಬಾಕೆ ಪಿಝಾ (Pizza) ತಿನ್ನಲು ಗ್ವಾಟಿಮಾಲಾಗೆ ಪ್ರಯಾಣಿಸುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ನೆಟ್ಟಿಗರು ಎಲ್ಲಾ ಬಿಟ್ಟು ಅಲ್ಲಿ ಏಕೆ, ಅದರಲ್ಲೂ ಜ್ವಾಲಾಮುಖಿಯಲ್ಲಿ ಬೇಯಿಸೋದು ಅಂದ್ರೆ ಏನು? ಎಂದು ಹುಬ್ಬೇರಿಸಿ ಈ ವಿಡಿಯೋ ನೋಡುತ್ತಿದ್ದಾರೆ. ನೀವು ಈ ವಿಡಿಯೋ ನೋಡಿದಲ್ಲಿ ಇದರ ರಹಸ್ಯ ನಿಮಗೂ ತಿಳಿಯಬಹುದು.

ಅಲೆಕ್ಸಾಂಡ್ರಾ ಬ್ಲಾಡ್ಜೆಟ್​ ಎನ್ನುವ ಈ ಮಹಿಳೆ ಗ್ವಾಟಿಮಾಲಾದ ಪಕಾಯಾದಲ್ಲಿರುವ (Pacaya) ರಾಷ್ಟ್ರೀಯ ಉದ್ಯಾನಕ್ಕೆ ಹೋಗಿದ್ದಾರೆ. ಅಲ್ಲಿ ಜ್ವಾಲಾಮುಖಿಯ ಶಾಖದಲ್ಲಿ ಬೆಂದ ಪಿಝಾದ ರುಚಿ ನೋಡಿದ್ದು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ತರಕಾರಿಗಳನ್ನಿಟ್ಟು ಬೇಯಿಸಿದ ಪಿಝಾ ಅನ್ನು ಈಕೆ ತಿನ್ನುತ್ತಾರೆ. ‘ಈ ರಾಷ್ಟ್ರೀಯ ಉದ್ಯಾನವನ್ನು ಪ್ರವೇಶಿಸಬೇಕೆಂದರೆ ನಿಮ್ಮೊಂದಿಗೆ ಮಾರ್ಗದರ್ಶಿಯೊಬ್ಬರು ಇರಲೇಬೇಕು. ನಾನು ಪಿಝಾ ಪಕಾವಾ ಬುಕ್​ ಮಾಡಿದೆ. 2021ರಲ್ಲಿ ಸ್ಫೋಟಿಸಿದ ಜ್ವಾಲಾಮುಖಿ ಇಲ್ಲಿ ಇನ್ನೂ ಜ್ವಲಿಸುತ್ತಿದೆ’ ಎಂದಿದ್ದಾರೆ ಈಕೆ.

ಇದನ್ನೂ ಓದಿ : Viral: ಇವನ ರುಂಡವೆಲ್ಲಿ ಹೋಯಿತು? ನೆಟ್ಟಿಗರಂತೂ ಕಂಗಾಲಾಗಿದ್ದಾರೆ

ಈ ಪೋಸ್ಟ್​ ಅನ್ನು ಈತನಕ ಸುಮಾರು 73,000 ಜನರು ಲೈಕ್ ಮಾಡಿದ್ದಾರೆ. 1.4 ಮಿಲಿಯನ್ ಜನರು ಇದನ್ನು ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಸಲ್ಫರ್​ ಪರಿಮಳದಿಂದ ಕೂಡಿರಬೇಕಲ್ಲವೆ ಪಿಝಾ? ಎಂದು ಕೇಳಿದ್ದಾರೆ ಒಬ್ಬರು. ಅದ್ಭುತವಾಗಿದೆ ಇದು! ಮುಂಬರುವ ದಿನಗಳ್ಲಲಿ ನಾನಿದನ್ನು ಸವಿಯುತ್ತೇನೆ ಎಂದಿದ್ದಾರೆ ಇನ್ನೊಬ್ಬರು. ಇದೊಂದು ಮಹಾಕಾವ್ಯ ಎಂದು ವ್ಯಂಗ್ಯವಾಡಿದ್ದಾರೆ. ಯಾವುದೇ ಕಸ ಕಡ್ಡಿ ಇದರ ಮೇಲಿಲ್ಲ ಎಂದುಕೊಳ್ಳುತ್ತೇನೆ ಎಂದು ಮಗದೊಬ್ಬರು ತಿಳಿಸಿದ್ದಾರೆ.

 

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ