Viral Video : ಕರ್ತವ್ಯದಲ್ಲಿ ಮುಳುಗಿದಾಗ ಅಚಾನಕ್ಕಾಗಿ ಒಡಹುಟ್ಟಿದವರು ಎದುರಾದರೆ ಆಗುವ ಸಂತಸಕ್ಕೆ ಎಣೆ ಇದೆಯೇ? ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ತನ್ನ ವಿಮಾನದಲ್ಲಿ ಅಚಾನಕ್ಕಾಗಿ ಸಹೋದರ ಸಿಕ್ಕಾಗ ಈ ಗಗನಸಖಿಗೆ ಹೇಗೆ ಪ್ರತಿಕ್ರಿಯಿಸಿದ್ದಾಳೆ ಎಂದು. ಈ ಅಂತಃಕರಣಪೂರಿತ ನಗುವನ್ನು ಎಲ್ಲಿಂದಲೂ ಕಡ ತರಲು ಸಾಧ್ಯವಿಲ್ಲ. ಬಾಂಧವ್ಯವೆಂದರೆ ಹೀಗೇ.
ಒಡಹುಟ್ಟಿದವರಲ್ಲಿಯೂ ಜಗಳ, ಚೇಷ್ಟೆ, ಪ್ರೀತಿ, ಮೌನ, ಮುನಿಸು ಎಲ್ಲವೂ ಮಿಳಿತಗೊಂಡಿರುತ್ತದೆ. ಆದರೆ ಸ್ಥಾಯಿಯಲ್ಲಿ ಇರುವುದು ಮಾತ್ರ ಅಂತಃಕರಣ. ಈ ವಿಡಿಯೋ ನೋಡಿದ ನೆಟ್ಟಿಗರ ಮನಸ್ಸುಗಳು ಮೃದುಗೊಂಡಿವೆ. ಅನೇಕರು ಹೃದಯತುಂಬಿ ಇವರಿಬ್ಬರನ್ನೂ ಹರಸಿದ್ದಾರೆ.
ಇದನ್ನೂ ಓದಿ : Video: ಖಾಲಿ ವಿಮಾನದಲ್ಲಿ ಸೂಪರ್ ಡ್ಯಾನ್ಸ್; ನೋಡುಗರನ್ನು ಮೋಡಿ ಮಾಡಿದ ಗಗನಸಖಿ!
ಏಪ್ರಿಲ್ 22 ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈತನಕ ಸಮಾರು 18 ಮಿಲಿಯನ್ ಜನರು ವಿಡಿಯೋ ನೋಡಿದ್ದಾರೆ. 10 ಮಿಲಿಯನ್ಗಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಈ ವಿಡಿಯೋ ಬಹಳ ಆಪ್ತವಾಗಿದೆ ಈತನಕ ನೋಡಿದ ವಿಡಿಯೋಗಳಲ್ಲಿ ಇದು ನನ್ನನ್ನು ಹೆಚ್ಚು ಪ್ರಭಾವಿಸಿದೆ ಎಂದು ಒಬ್ಬರು ಹೇಳಿದ್ದಾರೆ.
ಇದನ್ನೂ ನೋಡಿ : ಎಕ್ಸ್ಕ್ಯೂಸ್ ಮೀ, ಗುಟ್ಕಾ ಉಗಿಯಲು ವಿಮಾನದ ಕಿಟಕಿಯ ಬಾಗಿಲನ್ನು ತೆರೆಯುವಿರಾ?
ಮನೆಯಲ್ಲಾದರೆ ಅಕ್ಕ ತಮ್ಮನ ಮಾತು ಕೇಳದೇ ಇರಬಹುದು. ಆದರೆ ವಿಮಾನದಲ್ಲಿ? ಒಂದು ಗ್ಲಾಸ್ ನೀರು ಕೇಳಿದರೆ ಆಕೆ ನಗುಮುಖದಿಂದಲೇ ಕೊಡಬೇಕು ಅಲ್ಲವೆ? ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ನಿಮ್ಮ ತಮ್ಮ ಅದೃಷ್ಟ ಮಾಡಿದ್ದಾನೆ ಎಂದು ಮತ್ತೊಬ್ಬರು ಹೇಳಿದ್ದಾರೆ. ನನ್ನನ್ನು ನಿಮ್ಮ ಸಹೋದರನೆಂದು ಸ್ವೀಕರಿಸಿ, ನಾನು ಸೇನೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಹೀಗೇ ಒಂದು ದಿನ ಎದುರುಗೊಳ್ಳುವ ಆ ದಿನ ಬೇಗ ಬರಲಿ ಎಂದು ಮಗದೊಬ್ಬರು ಕೇಳಿಕೊಂಡಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ