Belly Dance: ಬೆಲ್ಲಿ ಡ್ಯಾನ್ಸ್ ಕೆಲವೇ ಕೆಲವರಿಗೆ ಒಲಿಯುತ್ತದೆ. ಸತತ ಪರಿಶ್ರಮ ಮತ್ತು ಕೌಶಲ ಅದಕ್ಕೆ ಬೇಕಾಗುತ್ತದೆ. ಅನೇಕರು ಸಾಮಾಜಿಕ ಜಾಲತಾಣದಲ್ಲಿ ಈ ಪ್ರಕಾರವನ್ನು ಪ್ರಯತ್ನಿಸುತ್ತಿರುತ್ತಾರೆ. ಆದರೆ ಎಲ್ಲರ ಪ್ರದರ್ಶನವೂ ನಿರೀಕ್ಷಿತ ಮಟ್ಟವನ್ನು ತಲುಪುತ್ತದೆ ಎಂದು ಹೇಳಲಾಗದು. ಇದೀಗ ನೃತ್ಯ ಕಲಾವಿದೆ (Dancer) ಮೇಧಾವಿ ಮಿಶ್ರಾ ಮಾಡಿದ ಬೆಲ್ಲಿ ಡ್ಯಾನ್ಸ್ ನೆಟ್ಟಿಗರ ಗಮನ ಸೆಳೆದಿದೆ. 2008ರಲ್ಲಿ ಬಿಡುಗಡೆಯಾದ ಗಜಿನಿ ಸಿನೆಮಾದ ಹಾಡಿಗೆ ಈಕೆ ಡ್ಯಾನ್ಸ್ ಮಾಡಿದ್ದಾರೆ. ಪ್ರವೀಣ್ ಮಣಿ ಮತ್ತು ಶ್ರೇಯಾ ಘೋಷಾಲ್ (Shreya Ghoshal) ಈ ಹಾಡನ್ನು ಹಾಡಿದ್ದಾರೆ. ಮೇಧಾವಿಯ ನೃತ್ಯಕೌಶಲ ನೋಡಿದ ನೆಟ್ಟಿಗರು ಉತ್ಸಾಹದಿಂದ ಪ್ರತಿಕ್ರಿಯಿಸುತ್ತಿದ್ದಾರೆ.
ಇದನ್ನು ಓದಿ : Viral Video: ಬಾಯಿಂದ ಬಾಯಿಗೆ ನೀರು ಉಗುಳಿಕೊಳ್ಳುತ್ತಿರುವ ಜೋಡಿಯ ವಿಡಿಯೋ ವೈರಲ್; ಪೊಲೀಸರ ಪ್ರತಿಕ್ರಿಯೆ
ಆರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋವನ್ನು ಈತನಕ ಸುಮಾರು 4,000 ಜನರು ಲೈಕ್ ಮಾಡಿದ್ದಾರೆ. ನೀವು ಮಾಡಿದ ನೃತ್ಯ ಇಷ್ಟವಾಯಿತು ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಈತನಕ ನಾನು ನೋಡಿದ ಬೆಲ್ಲಿ ಡ್ಯಾನ್ಸ್ ರೀಲ್ಗಳಲ್ಲಿ ನಿಮ್ಮದು ಅತ್ಯುತ್ತಮವಾಗಿದೆ ಎಂದಿದ್ದಾರೆ ಕೆಲವರು.
ಅದ್ಭುತವಾದ ಪ್ರದರ್ಶನ. ನಿಮ್ಮ ಇತರೇ ರೀಲ್ಗಳಿಗಿಂತ ಇದು ಹೆಚ್ಚು ಮೆಚ್ಚುಗೆಯಾಯಿತು ಎಂದು ಹೇಳಿದ್ದಾರೆ ಒಬ್ಬರು. ಇದು ನನ್ನ ಮೂಡ್ ಅನ್ನೇ ಬದಲಾಯಿಸಿತು, ಚೆನ್ನಾಗಿ ನರ್ತಿಸಿದ್ದೀರಿ ಎಂದಿದ್ದಾರೆ ಇನ್ನೊಬ್ಬರು. ನಾನೂ ಈಗ ಇಂಥದೇ ಒಂದು ರೀಲ್ ಮಾಡಬೇಕು ಎಂದುಕೊಳ್ಳುತ್ತಿದ್ದೇನೆ ಆದರೆ ನಿಮ್ಮಷ್ಟು ಚೆನ್ನಾಗಿ ನರ್ತಿಸಲು ನನಗೆ ಬರಲಿಕ್ಕಿಲ್ಲ ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral Video: ವೆಲ್ಕಮ್ ಟು ಮರ್ಲಿ ಹೇರ್ ಸಲೂನ್! ಈ ವೇಕಪ್ ವಿಡಿಯೋಗಳಲ್ಲಿ ನಿಮಗ್ಯಾವುದು ಇಷ್ಟ?
ನಿಮ್ಮಷ್ಟಕ್ಕೆ ನೀವೇ ಇದನ್ನು ಕಲಿತಿರೋ? ಎಂದು ಕೇಳಿದ್ದಾರೆ ಒಬ್ಬರು. ನನಗೆ ನಿದ್ರೆ ಬರುತ್ತಿತ್ತು, ನಿಮ್ಮ ಬಳುಕು ನೋಡಿ ಎಲ್ಲವೂ ಓಡಿಹೋಯಿತು ಎಂದಿದ್ದಾರೆ ಇನ್ನೊಬ್ಬರು. ಈ ಹಾಡು ನನ್ನಿಷ್ಟದ್ದು, ನೀವಿದಕ್ಕೆ ಬಹಳ ಚೆನ್ನಾಗಿ ನರ್ತಿಸಿದ್ದೀರಿ ಎಂದಿದ್ದಾರೆ ಮತ್ತೊಬ್ಬರು. ನಾನಿದನ್ನೂ ಈತನಕ ಇಪ್ಪತ್ತು ಸಲವಾದರೂ ನೋಡಿದೆ, ನಿಮಗೆ ಒಳ್ಳೆಯದಾಗಲಿ ಎಂದಿದ್ದಾರೆ ಇನ್ನೂ ಒಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:40 pm, Thu, 2 November 23