ಗಾಯಾಳು ಜಿಂಕೆ ವೇಗವಾಗಿ ಓಡಿ ಬಂದು ಆಸ್ಪತ್ರೆಯ ಎಸ್ಕಲೇಟರ್ ಏರಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಯುನೈಟೆಡ್ ಸ್ಟೇಟ್ಸ್ನ ಲೂಸಿಯಾನಾದ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯ (Hospital) ಬಾಗಿಲು ತೆರೆದಿತ್ತು, ಜನರೆಲ್ಲಾ ಓಡಾಡುತ್ತಿದ್ದರು. ಹೊರಗಡೆಯಿಂದ ಓಡಿ ಬಂದ ಜಿಂಕೆ ಎಸ್ಕಲೇಟರ್ (Escalator) ಏರುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ಫುಲ್ ವೈರಲ್ ಆಗಿದೆ. ಆನ್ಲೈನ್ನಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ ಗಮನಿಸುವಂತೆ ಆಸ್ಪತ್ರೆಯ ಎದುರು ಬಾಗಿಲಿನಿಂದ ಜಿಂಕೆ (Deer) ಓಡಿ ಬಂದಿರುವುದನ್ನು ನೋಡಬಹುದು. ಜಾರು ನೆಲವಾದ್ದರಿಂದ ಓಡಿ ಬರುತ್ತಿದ್ದ ರಭಸಕ್ಕೆ ಬಾಗಿಲೆದುರೇ ಜಾರಿ ಬಿದ್ದಿದೆ. ತಕ್ಷಣವೇ ಮೇಲೆದ್ದು ನಿಂತು ಎಸ್ಕಲೇಟರ್ ಏರಿದೆ. ಒಂದನೇ ಮಹಡಿಯಿಂದ ಎರಡನೇ ಮಹಡಿಗೆ ಎಸ್ಕಲೇಟರ್ನಲ್ಲಿ ಚಲಿಸಿದ ಜಿಂಕೆ ನೋಡಿ ಜನರು ಆಶ್ಚರ್ಯಗೊಂಡಿದ್ದಾರೆ.
ನಮ್ಮ ತಂಡದ ಸದಸ್ಯರು ಯಾವಾಗಲೂ ಸಿದ್ಧರಾಗಿರುತ್ತಾರೆ ಎಂದು ಶೀರ್ಷಿಕೆ ನೀಡುವ ಮೂಲಕ ವಿಡಿಯೊ ಹಂಚಿಕೊಳ್ಳಲಾಗಿದೆ. ಜಿಂಕೆ ಎರಡನೇ ಮಹಡಿ ತಲುಪುತ್ತಿದ್ದಂತೆ ಆಸ್ಪತ್ರೆಯ ಸಿಬ್ಬಂದಿ ಮತ್ತು ಅಲ್ಲಿದ್ದ ಜನರು ಜಿಂಕೆಯನ್ನು ಹಿಡಿದಿದ್ದಾರೆ. ಆಸ್ಪತ್ರೆಯ ಬೆಡ್ ಮೇಲೆ ಜಿಕೆಯನ್ನು ಮಲಗಿಸಿ ಲೂಯಿಸಿಯಾನ ವನ್ಯಜೀವಿ ಇಲಾಖೆಗೆ ವಿಷಯ ತಿಳಿಸಿಲಾಗಿದೆ.
ನಮ್ಮ ತಂಡದ ಸದಸ್ಯರು ಯಾವಾಗಲೂ ಸಿದ್ಧರಾಗಿರುತ್ತಾರೆ. ಲೂಯಿಸಿಯಾನದ ವನ್ಯಜೀವಿ ಮತ್ತು ಮೀನುಗಾರಿಕಾ ಇಲಾಖೆ ತಕ್ಷಣ ಪ್ರತಿಕ್ರಿಯಿಸಿ ಜಿಂಕೆಯನ್ನು ಕರೆದುಕೊಂಡು ಹೋಗಿದೆ. ಆಸ್ಪತ್ರೆಯಲ್ಲಿದ್ದ ರೋಗಿಗಳ ಆರೈಕೆಯಲ್ಲಿ ಯಾವುದೇ ಅಡ್ಡಿಯಾಗಿಲ್ಲ. ಮತ್ತು ಹಾಸ್ಪಿಟಲ್ಅನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ ಎಂದು ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ. ಆಸ್ಪತ್ರೆಯ ಹತ್ತಿರದಲ್ಲಿಯೇ ರಸ್ತೆಯಲ್ಲಿ ಕಾರು ಜಿಂಕೆಗೆ ಡಿಕ್ಕಿ ಹೊಡೆದಿದೆ. ಸಣ್ಣ ಅಪಘಾತ ಸಂಭವಿಸಿದೆ. ಹಾಗಾಗಿ ಜಿಂಕೆ ಹೆದರಿ ವೇಗವಾಗಿ ಓಡಿ ಬಂದಿದೆ ಎಂದು ವನ್ಯಜೀವಿ ಅಧಿಕಾರಿಯೋರ್ವರು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
Viral Video: ತನ್ನ ಎದುರಿಗಿದ್ದ ಮೊಸಳೆಗೆ ಚಪ್ಪಲಿ ತೋರಿಸಿ ಹೆದರಿಸಿದ ಮಹಿಳೆ! ಹೇಗಂತೀರಾ? ವಿಡಿಯೊ ನೋಡಿ
Viral Video: ತನ್ನ ಎದುರಿಗಿದ್ದ ಮೊಸಳೆಗೆ ಚಪ್ಪಲಿ ತೋರಿಸಿ ಹೆದರಿಸಿದ ಮಹಿಳೆ! ಹೇಗಂತೀರಾ? ವಿಡಿಯೊ ನೋಡಿ
Published On - 4:00 pm, Wed, 17 November 21