ಕಳ್ಳರನ್ನು ಹಿಡಿಯುವ ಪೊಲೀಸರೇ ಕಳ್ಳತನ ಮಾಡಿದ್ರೆ ಏನು ಅರ್ಥ, ಇಂತಹದೇ ಒಂದು ನಾಚಿಕೆಗೇಡಿನ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಸಿಕಂದರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಾನ್‌ಸ್ಟೆಬಲ್ ಒಬ್ಬರು ಲೈಟ್ ಬಲ್ಬ್ ಕದಿಯುತ್ತಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆಯ ವಿಡಿಯೋ ಬುಧವಾರ (ಏಪ್ರಿಲ್ 24) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಈ ಘಟನೆ ಏಪ್ರಿಲ್ 20 ರಂದು ನಡೆದಿದೆ ಎಂದು ಹೇಳಲಾಗಿದೆ. ಈ ಘಟನೆ ಯುಪಿ ಪೊಲೀಸರ ಮುಜುಗರ ಉಂಟು ಮಾಡಿದೆ.
ಈ ವಿಡಿಯೋದಲ್ಲಿ ಕಾನ್‌ಸ್ಟೆಬಲ್ ಕಳ್ಳತನ ಮಾಡಿದ ಪ್ರದೇಶದಲ್ಲಿ ಸ್ವಲ್ಪ ಹೊತ್ತು ಅಲ್ಲೇ ಓಡಾಡುತ್ತಾರೆ. ನಂತರ ಲೈಟ್ ಬಲ್ಬ್ ಕದಿಯಲು ಕುರ್ಚಿಯ ಮೇಲೆ ಹತ್ತಿ ಬಲ್ಬ್ ತೆಗೆಯುತ್ತಾನೆ. ಇದರ ಜತೆಗೆ ಕಾನ್‌ಸ್ಟೆಬಲ್ ಈ ಸಂದರ್ಭದಲ್ಲಿ ಯಾರೊಂದಿಗೋ ಮಾತನಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
बलिया
➡पुलिस कांस्टेबल का बल्ब चोरी करते वीडियो वायरल
➡ड्यूटी के दौरान पुलिसकर्मी ने चुराया बल्ब
➡सिकंदरपुर थाने के कस्बे का है पूरा मामला#Ballia pic.twitter.com/mwko4RVg3Q
— भारत समाचार | Bharat Samachar (@bstvlive) April 24, 2024
ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ. ಹಾಗೂ ಚರ್ಚೆಯು ಆಗುತ್ತಿದೆ. ಬಲ್ಬ್ನ್ನು ಕದ್ದು ಅದನ್ನು ನಿಧಾನವಾಗಿ ತನ್ನ ಜೇಬಿನಲ್ಲಿ ಇರಿಸಿಕೊಳ್ಳುತ್ತಾರೆ. ಅವರ ವರ್ತನೆ ಕೂಡ ಆಗಿತ್ತು. , ಇಲ್ಲಿ ಏನು ನಡೆದಿಲ್ಲ. ನನಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಇದ್ದಾರೆ. ಮೊದಲು ಈ ವಿಡಿಯೋ ನೋಡಿದಾಗ, ಬಲ್ಬ್ ಸರಿ ಇಲ್ಲ ಅದನ್ನು ರಿಪೇರಿ ಮಾಡಲು ಬಂದಿದ್ದಾರೆ ಎಂದುಕೊಳ್ಳಬೇಕು. ಈ ವಿಡಿಯೋವನ್ನು ಸರಿಯಾಗಿ ನೋಡಿದ್ರೆ ಕಾನ್‌ಸ್ಟೆಬಲ್ ಬಲ್ಬ್ ಕದಿಯುವುದು ಸ್ವಷ್ಟವಾಗುತ್ತದೆ.
ಇದನ್ನೂ ಓದಿ: ಅಬ್ಬಬ್ಬಾ! ಏನ್ ಎನರ್ಜಿ ಗುರು ಈ ಅಜ್ಜಿಗೆ, ಈ ಇಳಿವಯಸ್ಸಲ್ಲೂ ಭರ್ಜರಿ ಸ್ಟೆಪ್ಸ್
ಈ ಇಡಿ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಒಬ್ಬ ಸಾರ್ವಜನಿಕ ಕರ್ತವ್ಯದಲ್ಲಿರುವ ವ್ಯಕ್ತಿ ಬಲ್ಬ್ ಕದಿಯುತ್ತಿದ್ದುದನ್ನು ನೋಡಿದ ಜನರು ಬೆಚ್ಚಿಬಿದ್ದಿದ್ದಾರೆ. ಈ ರೀತಿ ವರ್ತಿಸಲು ಕಾರಣವೇನು ಎಂದು ಅನೇಕರು ಪ್ರಶ್ನಿಸಿದ್ದಾರೆ. ಕಾನ್‌ಸ್ಟೆಬಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸಿದ್ದಾರೆ. ಪೊಲೀಸ್ ಇಲಾಖೆ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡದ್ದು, ಕಾನ್ಸ್ಟೆಬಲ್ನ್ನು ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:45 pm, Thu, 25 April 24