ಬೆಂಗಳೂರು: ಸಿಲಿಕಾನ್ ಸಿಟಿ ಜನರ ಜೀವನಾಡಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಗರದ ಎಲ್ಲ ಮೂಲಗಳಿಗು ಜನರನ್ನು ತಲುಪಿಸುತ್ತದೆ. ಬಿಎಂಟಿಸಿಯಲ್ಲಿ ನಿತ್ಯ ಲಕ್ಷಾಂತರ ಜನರು ಸುರಕ್ಷಿತವಾಗಿ ಸಂಚರಿಸುತ್ತಾರೆ. ಆರಾಮದಾಯಕ ಪ್ರಯಾಣಕ್ಕೆ ಬಸ್ಗಳು ಅನುಕೂಲವಾಗಿದೆ. ಬಿಎಂಟಿಸಿ ಹೊಸ ಹೊಸ ಬಸ್‌ಗಳನ್ನು ಪರಿಚಯಿಸುತ್ತಿದೆ. ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್, ಎಂಡಿ 15 ( ಶೇ 15 ರಷ್ಟು ಮಿಥೈಲ್-ಡಿಸೇಲ್ ಮಿಶ್ರಿತ) ಬಸ್ ಹೀಗೆ ಹೊಸ ಹೊಸ ಬಸ್‌ಗಳನ್ನು ರಸ್ತೆಗೆ ಇಳಿಸುತ್ತದೆ. ಎಲೆಕ್ಟ್ರಿಕ್ ಬಸ್ನಲ್ಲಿ ವಿಕಲಚೇತನರು ವೀಲ್ಚೇರ್ ಸಮೇತ ಬಸ್ ಹತ್ತಲು ಗಾಲಿಕುರ್ಚಿ-ಲಿಫ್ಟಿಂಗ್ ಪ್ಲಾಟ್ಫಾರಂ ಸೌಲಭ್ಯ ಇದೆ. ವಿಕಲಚೇತನ ವಿದೇಶಿ ಪ್ರಜೆಯೊಬ್ಬರು ವೀಲ್ ಚೇರ್ ಸಮೇತ ಬಸ್ ಹತ್ತಿದ್ದು, ಗಾಲಿಕುರ್ಚಿ-ಲಿಫ್ಟಿಂಗ್ ಪ್ಲಾಟ್ಫಾರಂ ಸೌಲಭ್ಯ ಕಂಡು ಆ ಪ್ರಜೆ ಕಂಡೆಕ್ಟ್ರಗೆ ಕೈ ಮುಗಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಮ್ಮ BMTC @ your service# greener Bangalore ## EV Bus# Wheelchair assistance## switch to public transport ?. pic.twitter.com/yqThxilw7q
— BMTC (@BMTC_BENGALURU) March 16, 2023
ವಿಡಿಯೋದಲ್ಲಿ ಇಬ್ಬರು ವಿದೇಶಿ ಪ್ರಯಾಣಿಕರು ಬಸ್ಗಾಗಿ ಕಾಯುತ್ತಿರುತ್ತಾರೆ. ಈ ವೇಳೆ 226N ಎಲೆಕ್ಟ್ರಿಕ್ ಬಸ್ ಬರುತ್ತದೆ. ಇಬ್ಬರು ವಿದೇಶಿ ಪ್ರಯಾಣಿಕರಲ್ಲಿ ಓರ್ವ ವಿಕಲಚೇತನ ವ್ಯಕ್ತಿಯಾಗಿದ್ದು, ವೀಲ್ಚೇರ್ನಲ್ಲಿ ಕುಳಿತಿರುತ್ತಾರೆ. ವಿಕಲಚೇತನ ವ್ಯಕ್ತಿ ವೀಲ್ಚೇರ್ ಸಮೇತ ಬಸ್ ಹತ್ತಲು ಚಾಲಕ ರಿಮೋಟ್ ಮೂಲಕ ಗಾಲಿಕುರ್ಚಿ-ಲಿಫ್ಟಿಂಗ್ ಪ್ಲಾಟ್ಫಾರಂನ್ನು ಹೊರತೆಗೆಯುತ್ತಾರೆ. ಅದು ನೆಲದ ಸಮಾನಂತರವಾಗಿ ಹಾಸಿಕೊಳ್ಳುತ್ತದೆ. ನಂತರ ಅದರ ಮೇಲೆ ವೀಲ್ಚೇರ್ ಸಮೇತ ವ್ಯಕ್ತಿಯನ್ನು ಕೂರಿಸಲಾಗುತ್ತದೆ. ನಂತರ ನಿಧಾನವಾಗಿ ಲಿಫ್ಟರ್ ಮೇಲೆ ಹೋಗಿ ಬಸ್ನ ಸಮಾನಾಂತರವಾಗಿ ನಿಲ್ಲುತ್ತದೆ. ಬಳಿಕ ವಿಕಲಚೇತನ ವ್ಯಕ್ತಿ ಒಳಗೆ ಹೋಗುತ್ತಾನೆ. ಇದನ್ನು ಕಂಡ ಮತ್ತೊಬ್ಬ ವಿದೇಶಿ ಪ್ರಯಾಣಿಕ ಕಂಡಕ್ಟರ್ಗೆ ಕೈಮುಗಿಯುತ್ತಾರೆ.
ವಿಕಲಚೇತನರಿಗೆ ಪ್ರಯಾಣವನ್ನು ಸುಲಭಗೊಳಿಸಲು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮೊದಲ ಬಾರಿಗೆ ಗಾಲಿಕುರ್ಚಿ-ಲಿಫ್ಟಿಂಗ್ ಸೌಲಭ್ಯವನ್ನು ಹೊಂದಿರುವ ಬಸ್‌ಗಳನ್ನು ಕಳೆದ ವರ್ಷ ಪರಿಚಯಿಸಿದೆ. ಇದನ್ನು ಬಸ್ ಸಿಬ್ಬಂದಿ ನಿರ್ವಹಿಸುತ್ತಾರೆ. ಬಿಎಂಟಿಸಿ ವಿಡಿಯೋ ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:00 am, Sat, 18 March 23