ವಿಶ್ವದ ಈ ಎರಡು ದೇಶಗಳಲ್ಲಿ ಒಂದೇ ಒಂದು ದೇವಾಲಯ, ಮಸೀದಿ ಇಲ್ಲ

|

Updated on: Oct 18, 2024 | 3:55 PM

ಪ್ರಪಂಚದಾದ್ಯಂತ ವಿವಿಧ ದೇಶಗಳಲ್ಲಿ ಅನೇಕ ಮಸೀದಿ, ಚರ್ಚ್ ಮತ್ತು ದೇವಾಲಯಗಳನ್ನು ಕಾಣಬಹುದು. ಆದರೆ ದೇವಸ್ಥಾನಗಳಾಗಲಿ ಮಸೀದಿಗಳಾಗಲಿ ಇಲ್ಲದಿರುವ ಎರಡು ದೇಶಗಳಿವೆ. ಅದು ಯಾವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ವಿಶ್ವದ ಈ ಎರಡು ದೇಶಗಳಲ್ಲಿ ಒಂದೇ ಒಂದು ದೇವಾಲಯ, ಮಸೀದಿ ಇಲ್ಲ
Follow us on

ಭಾರತ ವೈವಿಧ್ಯತೆಯ ದೇಶ. ಇಲ್ಲಿ ಎಲ್ಲಾ ರೀತಿಯ ಧರ್ಮಗಳನ್ನು ಅನುಸರಿಸುವ ಜನರು ವಾಸಿಸುತ್ತಾರೆ. ಭಾರತದಲ್ಲಿ ದೇವಾಲಯಗಳ ಸಂಖ್ಯೆ 20 ಲಕ್ಷಕ್ಕಿಂತ ಹೆಚ್ಚಿದ್ದರೆ ಮಸೀದಿಗಳ ಸಂಖ್ಯೆ ಸುಮಾರು 7 ಲಕ್ಷಕ್ಕೂ ಅಧಿಕವಿದೆ. ಪ್ರಪಂಚದಾದ್ಯಂತ ವಿವಿಧ ದೇಶಗಳಲ್ಲಿ ಅನೇಕ ಮಸೀದಿ, ಚರ್ಚ್ ಮತ್ತು ದೇವಾಲಯಗಳನ್ನು ಕಾಣಬಹುದು. ಆದರೆ ದೇವಸ್ಥಾನಗಳಾಗಲಿ ಮಸೀದಿಗಳಾಗಲಿ ಇಲ್ಲದ ಎರಡು ದೇಶಗಳಿವೆ. ಅದು ಯಾವುದು ಗೊತ್ತಾ?

ಈ ಎರಡು ದೇಶಗಳಲ್ಲಿ ದೇವಾಲಯಗಳಾಗಲಿ, ಮಸೀದಿಗಳಾಗಲಿ ಇಲ್ಲ:

ಒಂದೇ ಒಂದು ದೇವಾಲಯ ಅಥವಾ ಮಸೀದಿ ಇಲ್ಲದಿರುವ ಎರಡು ದೇಶಗಳಿವೆ. ಅದುವೇ ಉತ್ತರ ಕೊರಿಯಾ ಮತ್ತು ವ್ಯಾಟಿಕನ್ ಸಿಟಿ.

ಉತ್ತರ ಕೊರಿಯಾದಲ್ಲಿ ಶೇಕಡಾ 52 ಕ್ಕಿಂತ ಹೆಚ್ಚು ಜನರು ಯಾವುದೇ ಧರ್ಮವನ್ನು ನಂಬುವುದಿಲ್ಲ. 32 ರಷ್ಟು ಜನರು ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸಿದರೆ, 14 ರಷ್ಟು ಜನರು ಬೌದ್ಧ ಧರ್ಮವನ್ನು ಮತ್ತು 1 ಶೇಕಡಾ ಇತರ ಧರ್ಮಗಳನ್ನು ಅನುಸರಿಸುತ್ತಾರೆ.

ಇದನ್ನೂ ಓದಿ: ಮಸೀದಿ ಮೇಲೆ ಗುಮ್ಮಟವನ್ನು ಏಕೆ ನಿರ್ಮಿಸಲಾಗುತ್ತದೆ? ಇದರ ಹಿಂದಿನ ಕಾರಣ ಏನು?

ಆದರೆ ವ್ಯಾಟಿಕನ್ ನಗರದಲ್ಲಿ ಕ್ರಿಶ್ಚಿಯನ್ ಧರ್ಮವನ್ನು ನಂಬುವ ಜನರು ಮಾತ್ರ ವಾಸಿಸುತ್ತಿದ್ದಾರೆ. ವ್ಯಾಟಿಕನ್ ಸಿಟಿ ಕ್ರಿಶ್ಚಿಯನ್ ಧರ್ಮಕ್ಕೆ ಅತ್ಯಂತ ಪವಿತ್ರ ಸ್ಥಳವಾಗಿದೆ. ಈ ದೇಶದ ವಿಶೇಷತೆ ಏನೆಂದರೆ ಇದು ಜಗತ್ತಿನ ಅತ್ಯಂತ ಚಿಕ್ಕ ದೇಶ. ಪ್ರಪಂಚದಾದ್ಯಂತದ ಜನರು ಭೇಟಿ ನೀಡಲು ಬರುತ್ತಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ