
Bear Grylls : ಜಂಗಲ್ ಸರ್ವೈವಲ್ (Jungle Survival) ರಿಯಾಲಿಟಿ ಷೋನ ಖ್ಯಾತ ನಿರೂಪಕ ಮತ್ತು ಸಾಹಸಿಗ ಬೇರ್ ಗ್ರಿಲ್ಸ್ ಲುಂಗಿ ಧರಿಸಿದ ತಮ್ಮ ಫೋಟೋ ಟ್ವೀಟ್ ಮಾಡಿ ‘ಮ್ಯಾನ್ ವರ್ಸಸ್ ವೈಲ್ಡ್’ (Man v/s Wild)ನ ಮುಂದಿನ ಎಪಿಸೋಡ್ಗೆ ಯಾರು ಅತಿಥಿ ಎಂದು ಕೇಳಿದ್ದಾರೆ. ಈ ಟ್ವೀಟ್ ವೀಕ್ಷಕರನ್ನು ಕುತೂಹಲಕ್ಕೆ ಕೆಡವಿದೆ. ಸ್ಕಾಟಿಷ್ ಹೈಲ್ಯಾಂಡ್ಸ್ನ (Scottish Highlands) ನದೀತಟದಲ್ಲಿ ಈ ಫೋಟೋ ತೆಗೆಯಲಾಗಿದೆ. ಈ ಟ್ವೀಟ್ಗೆ ನೆಟ್ಟಗರು ಉತ್ಸಾಹದಿಂದ ಪ್ರತಿಕ್ರಿಯಿಸಿದ್ದಾರೆ.
ಶರ್ಟ್ ಕೆಳಗೆ ಧರಿಸಿದ ಉಡುಪು ಎಂಥದು ಇದು ಎಂದು ಅನೇಕರು ಕೇಳಿದ್ದಾರೆ. ಇದು ಭಾರತೀಯರು ಧರಿಸುವ ಲುಂಗಿ ಎಂದು ಹಲವರು ಹೇಳಿದ್ದಾರೆ. ಬಾಂಗ್ಲಾದೇಶದ ಸಾಂಪ್ರದಾಯಿಕ ಉಡುಪು ಇದು ಎಂದಿದ್ದಾರೆ ಮತ್ತೊಂದಿಷ್ಟು ಜನ. ಓಹ್ ಲುಂಗಿಡ್ಯಾನ್ಸ್ ಸ್ಟೈಲ್! ಎಂದು ಅಚ್ಚರಿಪಟ್ಟಿದ್ಧಾರೆ ಕೆಲವರು. ಲುಂಗೀಮ್ಯಾನ್, ಎಸಿ ಪ್ಯಾಂಟ್, ಗಾಳಿ ಬೀಸಿದರೆ ಅಷ್ಟೇ, ಹುಷಾರಾಗಿರಿ ಎಂದು ಕಾಲೆಳೆದಿದ್ದಾರೆ ಇನ್ನೂ ಒಂದಿಷ್ಟು ಜನ.
ಇದನ್ನೂ ಓದಿ : Viral Video: ಎಲ್ಲಿಯ ಉಡುಪಿ ಎಲ್ಲಿಯ ಚಿಕ್ಕಬಳ್ಳಾಪುರ; ಇಲ್ಲಿದೆ ಗಣೇಶ್ ಮತ್ತು ಶ್ರೀವಿದ್ಯಾ ಕಲಾಹೂರಣ
ನೀಲ್ ಆಲಿವರ್, ಅನ್ನೇಕಾ ರೈಸ್, ಇವಾನ್ ಮ್ಯಾಕ್ಗ್ರಿಗೋರ್, ರಿಚರ್ಡ್ ಬ್ರ್ಯಾನ್ಸನ್, ವಿರಾಟ ಕೊಹ್ಲಿ, ಅಕ್ಷಯ್ ಕುಮಾರ್, ವಿಕ್ಕಿ ಕೌಶಲ್, ರಣವೀರ್ ಸಿಂಗ್, ತಲೈವಾ ರಜನೀಕಾಂತ… ಹೀಗೆ ಪ್ರಸಿದ್ಧ ವ್ಯಕ್ತಿಗಳ ಹೆಸರುಗಳ ಪಟ್ಟಿಯನ್ನೇ ಟ್ವೀಟಿಗರು ನೀಡಿದ್ದಾರೆ. ಒಟ್ಟಿನಲ್ಲಿ ಊಹಾಪೋಹಗಳ ನಡುವೆ ಈ ಟ್ವೀಟ್ ಶರವೇಗದಲ್ಲಿ ವೈರಲ್ ಆಗುತ್ತಿದೆ. ಕೆಲ ಮೂಲಗಳ ಪ್ರಕಾರ, ಪ್ರಿಯಾಂಕಾ ಛೋಪ್ರಾ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ನಿಮ್ಮ ಊಹೆಯಂತೆ ಯಾವ ಸೆಲೆಬ್ರಿಟಿ ಈ ಷೋನಲ್ಲಿ ಭಾಗವಹಿಸಲಿದ್ದಾರೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ