Viral Video: ಬೇರೊಂದು ಯುವತಿ ಜತೆ ತಿರುಗಾಡುತ್ತಿದ್ದ ಗಂಡನನ್ನು ನೋಡಿದ ಹೆಂಡತಿ ಏನು ಮಾಡ್ತಾಳೆ ನೋಡಿ! ವಿಡಿಯೋ ವೈರಲ್​

ವಿಡಿಯೋದಲ್ಲಿ ಗಮನಿಸುವಂತೆ ಮಹಿಳೆ ಕಾರಿನ ಬಳಿ ಓಡಿ ಬರುತ್ತಿರುವ ದೃಶ್ಯವನ್ನು ನೋಡಬಹುದು. ಬಳಿಕವೇ ಎದುರಿಗಿದ್ದ ಯುವತಿಗೆ ಥಳಿಸುತ್ತಿರುವ ದೃಶ್ಯ ಸೆರೆಯಾಗಿದೆ.

Viral Video: ಬೇರೊಂದು ಯುವತಿ ಜತೆ ತಿರುಗಾಡುತ್ತಿದ್ದ ಗಂಡನನ್ನು ನೋಡಿದ ಹೆಂಡತಿ ಏನು ಮಾಡ್ತಾಳೆ ನೋಡಿ! ವಿಡಿಯೋ ವೈರಲ್​
ಬೇರೊಂದು ಯುವತಿ ಜತೆ ತಿರುಗಾಡುತ್ತಿದ್ದ ಗಂಡನನ್ನು ನೋಡಿದ ಹೆಂಡತಿ ಏನು ಮಾಡ್ತಾಳೆ ನೋಡಿ!
Updated By: shruti hegde

Updated on: Aug 16, 2021 | 3:24 PM

ಗಂಡ ಕಾರಿನಲ್ಲಿ ಬೇರೆಯೊಂದು ಯುವತಿಯ ಜೊತೆಗೆ ತಿರುಗಾಡುತ್ತಿದ್ದುದನ್ನು ನೋಡಿದ ಹೆಂಡತಿ ಯುವತಿಗೆ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋ ವೈರಲ್ ಆಗಿದೆ. ಘಟನೆ ಮಹಾರಾಷ್ಟ್ರದ ಔರಂಗಾಬಾದ್​ನಲ್ಲಿ ನಡೆದಿದೆ. ವಿಡಿಯೋದಲ್ಲಿ ಗಮನಿಸುವಂತೆ ಮಹಿಳೆ ಕಾರಿನ ಬಳಿ ಓಡಿ ಬರುತ್ತಿರುವ ದೃಶ್ಯವನ್ನು ನೋಡಬಹುದು. ಬಳಿಕವೇ ಎದುರಿಗಿದ್ದ ಯುವತಿಗೆ ಥಳಿಸುತ್ತಿರುವ ದೃಶ್ಯ ಸೆರೆಯಾಗಿದೆ.

ಕಾರು ಪಾರ್ಕ್ ಆಗಿರುವ ಜಾಗದಲ್ಲಿ ಗಂಡ ಮತ್ತು ಮುಖವನ್ನು ಮುಚ್ಚಿಕೊಂಡಿರುವ ಯುವತಿಯ ಬಳಿ ಮಹಿಳೆ ಓಡೋಡಿ ಬರುತ್ತಾಳೆ. ಗಂಡನ ಬಳಿ, ಯಾರಿವಳು? ಎನ್ನುತ್ತಾ ಕಿರುಚುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಯುವತಿಯ ಕೆನ್ನೆಗೆ ಬಾರಿಸುತ್ತಾ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋ ವೈರಲ್ ಆಗಿದೆ.

ಹೋಟೆಲ್​ ಎದುರುಗಡೆ ಕಾರನ್ನು ನಿಲ್ಲಿಸಲಾಗಿದೆ. ಯುವತಿ ಮತ್ತು ವ್ಯಕ್ತಿ ಒಂದೇ ಹೋಟೆಲ್​ಗೆ  ಹೋಗಲು ಪ್ಲಾನ್ ನಡೆಸುತ್ತಿರುವಂತೆ ಅನಿಸುತ್ತದೆ. ಗಂಡನನ್ನು ಹಿಂಬಾಲಿಸಿ ಬಂದ ಹೆಂಡತಿ ಯುವತಿಯನ್ನು ನೋಡಿದ್ದೇ ತಡ ಸಿಟ್ಟಿನಲ್ಲಿ ಕೂಗಾಡಿದ್ದಾಳೆ. ವಿಡುಯೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು ವೈರಲ್ ಆಗಿದೆ.

ಸುತ್ತಮುತ್ತಲಿದ್ದ ಅನೇಕರು ಏನಾಯಿತು ಎಂದು ಪ್ರಶ್ನಿಸುತ್ತಿರುವುದನ್ನು ಕಾಣಬಹುದು. ಕೆಲವರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ. ಅನೇಕರು ಪತ್ನಿಯ ಬಗ್ಗೆ ಸಹಾನುಭೂತಿಯನ್ನು ಹೊಂದಿದ್ದಾರೆ. ಇನ್ನು ಕೆಲವರು, ಯುವತಿಗೆ ಥಳಿಸುವ ಮೊದಲು ಗಂಡನನ್ನು ಪ್ರಶ್ನಿಸಬೇಕಿತ್ತು ಎಂದು ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Shocking Video: ಮಾಸ್ಕ್ ಧರಿಸದ್ದಕ್ಕೆ ದಂಡ ವಿಧಿಸಿದ ಅಧಿಕಾರಿಗೆ ಹಿಗ್ಗಾಮುಗ್ಗ ಥಳಿಸಿದ ಮಹಿಳೆ; ವಿಡಿಯೋ ವೈರಲ್

Fact Check | ಸ್ಟ್ಯಾಂಡ್​ಅಪ್ ಕಾಮಿಡಿಯನ್ ಮುನಾವರ್​ಗೆ ಥಳಿತ; ವೈರಲ್ ವಿಡಿಯೊದ ಸತ್ಯಾಸತ್ಯತೆ ಏನು?