Video: ನಡು ರಸ್ತೆಯಲ್ಲೇ ಮೂವರು ಪುರುಷರನ್ನು ಥಳಿಸಿದ ಯುವತಿ; ವಿಡಿಯೋ ವೈರಲ್​​​

ಯುವತಿ ಮಾರುಕಟ್ಟೆಗೆ ಹೋಗುತ್ತಿದ್ದ ವೇಳೆ ಮೂವರು ಪುರುಷರು ಅನುಚಿತ ವರ್ತಿಸಿದ್ದು, ಇವರ ವರ್ತನೆಯಿಂದ ಕುಪಿತಳಾದ ಯುವತಿ ಕೂಡಲೇ ಬೈಕ್‌ನಿಂದ ಇಳಿದು ಕಿರುಕುಳ ನೀಡಿದ ಮೂವರನ್ನು ಹಿಡಿದು ರಸ್ತೆಯಲ್ಲಿ ಥಳಿಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ನ ಕಾಂತ್ ನಗರದಲ್ಲಿ ನಡೆದಿದೆ.

ಯುವತಿಯೊಬ್ಬಳು ತನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮೂವರು ಪುರುಷರನ್ನು ನಡು ರಸ್ತೆಯಲ್ಲೇ ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ವರದಿಗಳ ಪ್ರಕಾರ, ಯುವತಿ ಕೆಲವು ವಸ್ತುಗಳನ್ನು ಖರೀದಿಸಲು ತನ್ನ ಸೋದರಸಂಬಂಧಿಯೊಂದಿಗೆ ಮಾರುಕಟ್ಟೆಗೆ ಹೋಗುತ್ತಿದ್ದ ವೇಳೆ ಮೂವರು ಪುರುಷರು ಅನುಚಿತ ವರ್ತಿಸಿದ್ದು, ಇವರ ವರ್ತನೆಯಿಂದ ಕುಪಿತಳಾದ ಮಹಿಳೆ ಕೂಡಲೇ ಬೈಕ್‌ನಿಂದ ಇಳಿದು ಕಿರುಕುಳ ನೀಡಿದ ಮೂವರನ್ನು ಹಿಡಿದು ರಸ್ತೆಯಲ್ಲಿ ಥಳಿಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ನ ಕಾಂತ್ ನಗರದಲ್ಲಿ ನಡೆದಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ